ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ
ಹುಬ್ಬಳ್ಳಿ:ಆದಿಶಕ್ತಿ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಸಿಎಸ್‌ಆರ್ ನಿಧಿ ಅಡಿಯಲ್ಲಿ ನೂರು ಹೊಲಿಗೆ ಯಂತ್ರಗಳನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಭಾವಸಾರ ವಿಜನ್ ಇಂಡಿಯಾ ಸಹಯೋಗದಲ್ಲಿ ಇಲ್ಲಿಯ ಹೊಸೂರ ತಿಮ್ಮಸಾಗರ ಓಣಿಯ ಭಾವಸಾರ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿತರಣೆ ಮಾಡಿ ಅವರು ಮಾತನಾಡಿದರು.
ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಈ ಕಾರ್ಯಕ್ಕೆ ದೇಣಿಗೆ ಕೇಳಿದಾಗ ನೀಡಲು ಆದಿಶಕ್ತಿ ಸಂಸ್ಥೆಯವರು ತುಂಬು ಮನಸ್ಸಿನಿಂದ ಒಪ್ಪಿಕೊಂಡರು. ಅದರಂತೆ ಫಲಾನುಭವಿಗಳು ಯಂತ್ರಗಳನ್ನು ಪಡೆದು ಅದರಿಂದ ಆರ್ಥಿಕವಾಗಿ ಸಬಲರಾಗಬೇಕು. ಆಗಲೇ ದೇಣಿಗೆಯು ಸಾರ್ಥಕವಾಗುತ್ತದೆ ಎಂದರು.
ಆದಿಶಕ್ತಿ ಸಂಸ್ಥೆಯ ಚೇರ್ಮನ್ ನಾರಾಯಣರಾವ ತಾತುಸ್ಕರ ಮಾತನಾಡಿ, ಅಗತ್ಯ ಇರುವ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡುತ್ತಿರುವುದು ನಮಗೆ ಸಂತಸ ತಂದಿದೆ. ರೋಟರಿ ಸಂಸ್ಥೆಯ ಸೇವಾ ಕಾರ್ಯದಲ್ಲಿ ನಮಗೆ ಅತ್ಯಂತ ವಿಶ್ವಾಸವಿದೆ. ಇದುವರೆಗೂ ಸುಮಾರು 37 ಲಕ್ಷ ರೂ. ಸಿಎಸ್‌ಆರ್ ನಿಧಿ ಅಡಿ ಇಂತಹ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಸಮಾಜಕ್ಕೆ ಸೇವೆ ಮಾಡುವ ಅವಕಾಶ ನಮ್ಮ ಸಂಸ್ಥೆಗೆ ಸಿಕ್ಕಿದೆ. ಮಹಿಳೆಯರು ತಮ್ಮ ಆಥಿರ್ಕತೆ ಸುಧಾರಿಸಿಕೊಳ್ಳುವ ಜತೆಗೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದರತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಶಿವಮೊಗ್ಗದ ಭಾವಸಾರ ಸಮಾಜದ ಅನುಕೂಲಕ್ಕಾಗಿ “ಮೋಕ್ಷ ವಾಹಿನಿ’ ವಾಹನವನ್ನು ದೇಣಿಗೆಯಾಗಿ ನೀಡಲಾಯಿತು.
ಆಧಿಶಕ್ತಿ ಸಂಸ್ಥೆಯ ನಿರ್ದೇಶಕಿ ಜಯಶ್ರೀತಾಯಿ ತಾತುಸ್ಕರ, ಭಾವಸಾರ ಸಮಾಜ ಅಧ್ಯಕ್ಷ ರಾಮಚಂದ್ರ ಬೇದರೆ, ಇವೆಂಟ್ ಚೇರ್ಮನ್ ಪ್ರಕಾಶ ತ್ರಿಮಲ್ಲೆ, ಗಜೇಂದ್ರನಾಥ ಮಾಳೊದೆ, ಕುಶಾಲ ಟಿಕಾರೆ, ರಾಶಿನಕರ, ಇತರರು ಇದ್ದರು.
ರೋಟರಿ ಕ್ಲಬ್ ಕಾರ್ಯದರ್ಶಿ ವಸಂತ ಭಸ್ಮವಂದಿಸಿದರು..