https://youtu.be/2hcBmgA437k
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆ ಯಾಗಿದ್ದರೂ ಕೂಡ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ.
ಈ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಗುಂಡಿಗಳಲ್ಲಿ ಪ್ರಧಾನಿ ಮೋದಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಕಟೌಟ್ಗೆ ಹೂ ಮಾಲೆ ಹಾಕಿ ಸನ್ಮಾನಿಸಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿದ್ದ ತಗ್ಗು ಗುಂಡಿಗಳಲ್ಲಿ ನರೇಂದ್ರ ಮೋದಿ ಹಾಗೂ ಜಗದೀಶ ಶೆಟ್ಟರ್ ಕಟೌಟ್ಗೆ ಶಾಲು ಹೊದಿಸಿ, ಹೂ ಮಾಲೆ ಹಾಕಿ ಸನ್ಮಾನಿಸಿ, ಕಾಗದದ ದೋಣಿ ಹರಿಬಿಟ್ಟು ಪ್ರತಿಭಟನೆ ನಡೆಸಿದರು. ತಗ್ಗು ಗುಂಡಿಗಳು ಹಾಗೂ ಹಾಳಾದ ರಸ್ತೆ ದುರಸ್ತಿಗೊಳಿಸದ ಹಿನ್ನೆಲೆ ಈ ರೀತಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಈ ಕೂಡಲೇ ರಸ್ತೆ ಹಾಗೂ ತಗ್ಗು ಗುಂಡಿಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.
Check Also
ಶೀಘ್ರವೇರಾಜ್ಯದಲ್ಲಿವೃತ್ತಿಪರ ಸಿವಿಲ್ ಎಂಜಿನಿಯರ್ಸ್ ಕಾಯ್ದೆ ಜಾರಿಗೆ: ಸತೀಶ್ ಜಾರಕಿಹೂಳಿ
Spread the loveಹುಬ್ಬಳ್ಳಿ: ಸರ್.ಎಂ.ವಿಶ್ವೇಶ್ವರಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಿವಿಲ್ ಎಂಜಿನಿಯರ್‌ಗಳು ನಡೆಯಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. …