ಬರೋಬರಿ 1.50 ಲಕ್ಷಕ್ಕೆ ಮಾರಾಟವಾದ ಕುರಿ
ಮೇಕೆ ಖರೀದಿ ಮಾಡಿದ ವ್ಯಕ್ತಿಯಿಂದ ಸನ್ಮಾನ
ಕೋಲಾರ : ಬಕ್ರೀದ್ ಹಬ್ಬ ಬರುತ್ತಿರುವ ಹಿನ್ನೆಲೆ ಕುರಿ ಹಾಗೂ ಮೇಕೆಗಳಿಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದಲ್ಲಿ ಬರೋಬರಿ 1.50 ಲಕ್ಷಕ್ಕೆ ಒಂದು ಮೇಕೆಯನ್ನು ರೈತ ಮಾರಾಟ ಮಾಡಿದ್ದಾನೆ.ಹಲವು ವರ್ಷಗಳಿಂದ ಕುರಿ ಹಾಗೂ ಸಾಕಾಣಿಕೆ ಮಾಡಿಕೊಂಡು ಬರುತ್ತಿರುವ ಅಶೋಕ್ ಎಂಬುವವರು ಬೆಂಗಳೂರು ಮೂಲದ ವ್ಯಕ್ತಿಗೆ ಒಂದು ಮೇಕೆಯನ್ನು 1.50 ಲಕ್ಷಕ್ಕೆ ಮಾರಾಟ ಮಾಡುವ ಮೂಲಕ ಜಾಕ್ ಪಾಟ್ ಹೊಡೆದಿದ್ದಾರೆ.ಇನ್ನು ಮೇಕೆ ಖರೀದಿ ಮಾಡಿದ ವ್ಯಕ್ತಿಯಿಂದ ಅಶೋಕ್ ಗೆ ಸನ್ಮಾನ ಮಾಡಿ,ಮೇಕೆಗೂ ಹೂವಿನ ಹಾರ ಹಾಕಿ ಬಕ್ರೀದ್ ಹಬ್ಬಕೆಂದು ಬೆಂಗಳೂರಿಗೆ ತೆಗೆದುಕೊಂಡು ಹೋಗಿರುವುದು ವಿಶೇಷ.