Breaking News

ಪತಂಜಲಿ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನ ಪೂರ್ವ ಸಿದ್ಧತಾ ಯೋಗ ಶಿಕ್ಷಕರ ಸಭೆ

Spread the love

ಪತಂಜಲಿ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನ ಪೂರ್ವ ಸಿದ್ಧತಾ ಯೋಗ ಶಿಕ್ಷಕರ ಸಭೆ

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ, ಧಾರವಾಡದ ವತಿಯಿಂದ ಇಂದು ಧಾರವಾಡದ ಮದಿಹಾಳದ ಜೋಶಿ ಕಲ್ಯಾಣ ಮಂಟಪದಲ್ಲಿ ಅಂತರರಾಷ್ಟ್ರೀಯ ಯೋಗ ದಿನ 21 ಜೂನ್ 2024 ಪೂರ್ವ ಸಿದ್ಧತೆಗಳ ಪ್ರಯುಕ್ತ ಯೋಗ ಪ್ರೋಟೋಕಾಲ್ ಅಭ್ಯಾಸ ಮತ್ತು ಧಾರವಾಡ ಜಿಲ್ಲಾ ಪತಂಜಲಿ ಯೋಗ ಶಿಕ್ಷಕರ, ಕಾರ್ಯಕರ್ತರ ಸಭೆಯನ್ನು ಪತಂಜಲಿ ಯೋಗ ಪೀಠ, ಕರ್ನಾಟಕದ ರಾಜ್ಯಪ್ರಭಾರಿ ಅಂತರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಯೋಗ ಪ್ರೋಟೋಕಾಲ್ ಅಭ್ಯಾಸದ ಮಾರ್ಗ ದರ್ಶನವನ್ನು ಮಾಡಿ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭವರಲಾಲ್ “ಎಲ್ಲರನ್ನೂ ಯೋಗ ಶಿಕ್ಷಕರಾಗಲು ಆಹ್ವಾನಿಸುತ್ತಾ, ನೀವು ಜೀವನದಲ್ಲಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿರಬಹುದು, ವ್ಯಾಪಾರ, ಸರ್ಕಾರಿ ಸೇವೆ, ಕಾರ್ಮಿಕರು, ರೈತರು ಯಾರೇ ಆಗಿರಬಹುದು ಬೆಳಗ್ಗೆ ಒಂದು ಗಂಟೆ ಸಮಯ ಯಾರೂ ಕೊಡಲಿಕ್ಕೆ ಸಾಧ್ಯ ಆಗುತ್ತೆ ಅವರು ಯೋಗ ಶಿಕ್ಷಕರಾಗಬಹುದು. ತಾವುಗಳು ತಮ್ಮ ಆರೋಗ್ಯ, ತಮ್ಮ ಕುಟುಂಬದ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯ ಸಹ ರಕ್ಷಣೆ ಮಾಡಬಹುದು. ಬೆಳಗ್ಗೆ ಒಂದು ಗಂಟೆ ತಾವು ಈ ಯೋಗ ಸೇವೆಗೆ ಅರ್ಪಣೆ ಮಾಡಿದರೆ ಸಂಪೂರ್ಣ ಕರ್ನಾಟಕ ರಾಜ್ಯವನ್ನು ನಾವು ಯೋಗ ಯುಕ್ತ, ರೋಗ ಮುಕ್ತ ಮಾಡಬಹುದು.
ಯೋಗಮಯ ಕರ್ನಾಟಕ ಅಭಿಯಾನದ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ನೂರು ಜನ ಯೋಗ ಶಿಕ್ಷಕರಿಗೆ ತರಬೇತಿ ನೀಡಿ ಆ ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ, ಪ್ರತೀ ವಾರ್ಡ್, ಹೋಬಳಿ ಮಟ್ಟದಲ್ಲಿ ಉಚಿತ ಯೋಗ ಶಿಬಿರಗಳು, ಉಚಿತ ಯೋಗ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತೇವೆ ಎಂದು ಅಂತರಾಷ್ಟ್ರೀಯ ಯೋಗ ದಿನದ ಈ ಸಂಧರ್ಭದಲ್ಲಿ ಮಾಡಿದ್ದೀವಿ. ಈಗ ಸಂಪೂರ್ಣ ರಾಜ್ಯದ 31 ಜಿಲ್ಲೆಗಳಲ್ಲಿ ಹಾಗೂ ಪ್ರತಿ ತಾಲೂಕ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗಳನ್ನು ಪತಂಜಲಿ ಯೋಗ ಪೀಠವು ಹಲವಾರು ಯೋಗ ಸಂಸ್ಥೆ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸಂಸ್ಥೆಗಳ ಜೊತೆ ಸೇರಿ ಆಚರಣೆ ಮಾಡಲಿಕ್ಕೆ ಸಿದ್ಧತೆ ಮಾಡಿದ್ದೇವೆ. ಯೋಗವು ಆರೋಗ್ಯವಂತರಿಗೆ ಜೀವನ ಪದ್ಧತಿ, ರೋಗಿಗಳಿಗೆ ಚಿಕಿತ್ಸೆ ಪದ್ಧತಿ, ಸಾಧನೆ ಮಾಡುವಂತಹ ಸಾಧಕರಿಗೆ ಇದು ಸಾಧನಾ ಪದ್ದತಿಯಾಗಿದೆ.
ನಾವು ಮಾಡುವ ಎಲ್ಲಾ ಕಾರ್ಯಗಳು ಶ್ರೇಷ್ಠವಾಗಿ ಆಗಬೇಕು ಅಂದರೆ ಅದಕ್ಕಾಗಿ ನಿತ್ಯ ಯೋಗ ಅಭ್ಯಾಸವನ್ನು ಮಾಡಬೇಕು. ಯೋಗ ನಮ್ಮ ಸ್ವಭಾವ ಆಗಬೇಕು. ಯಾವ ರೀತಿ ನಮಗೆ ಆಹಾರ ಗಾಳಿ ನೀರು ಅಗತ್ಯವಿದೆ, ಅದೇ ತರ ಭಾರತ ಭೂಮಿ ಮೇಲಿರುವಂತ ಪ್ರತಿಯೊಬ್ಬ ನಾಗರಿಕರಿಗೆ ಯೋಗವು ತುಂಬಾ ಅತ್ಯವಶ್ಯಕ ಅಗತ್ಯವಾಗಬೇಕು. ಎಲ್ಲಾ ರೀತಿಯ ಕಾಯಿಲೆಗಳನ್ನು ಯೋಗದ ಮೂಲಕ ಗುಣಪಡಿಸಬಹುದು. ಆದರೆ ಆರೋಗ್ಯವಂತರು ಮೊದಲು ಯೋಗ ಮಾಡಬೇಕು, ಅವರು ನೂರು ವರ್ಷದರೆಗೆ ಆರೋಗ್ಯವಾಗಿ ಇರಲಿಕ್ಕೆ ಯೋಗ ತುಂಬಾ ಸಹಾಯ ಮಾಡುತ್ತದೆ. ಅದರಿಂದ ಈ ಅಭಿಯಾನದಲ್ಲಿ ತಾವೆಲ್ಲರೂ ಭಾಗಿಯಾಗಬೇಕು. ರಾಜ್ಯದ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಬೇರೆ ಬೇರೆ ಕ್ಷೇತ್ರದ ಎಲ್ಲಾ ಸಂಸ್ಥೆಗಳಿಗೆ ಆಹ್ವಾನ ಮಾಡುತ್ತಿದ್ದೇವೆ. ಪತಂಜಲಿ ಯೋಗ ಪೀಠದ ನಮ್ಮ ಎಲ್ಲಾ ರೀತಿಯ ಸೇವೆಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಯೋಗ ಶಿಕ್ಷಕರು ನಡೆಸಲಿಕ್ಕೆ ಸಿದ್ಧವಾಗಿದೆ ನಮ್ಮ ಸೇವೆಗಳನ್ನು ತಾವು ಉಪಯೋಗಿಸಬೇಕು ಈ ನಂಬರಿಗೆ ಸಂಪರ್ಕ ಮಾಡಿ ಸೇವೆಗಳನ್ನು ಉಪಯೋಗಿಸಿ ಕೊಳ್ಳಬೇಕೆಂದು ವಿನಂತಿ
ನಮ್ಮ ಯೋಗ ಶಿಕ್ಷಕರು ಉಚಿತವಾಗಿ ತಮ್ಮಲ್ಲಿ ಬಂದು ಯೋಗ ಶಿಬಿರ ನಡೆಸಲು ಸಿದ್ಧರಿದ್ದಾರೆ. ಯೋಗ ಶಿಬಿರಗಳನ್ನು ನಡೆಸಲು, ಅಂತರರಾಷ್ಟ್ರೀಯ ಯೋಗ ದಿನಕ್ಕೆ ಯೋಗ ಮಾರ್ಗದರ್ಶಕರು, ಯೋಗ ಶಿಕ್ಷಕರು ಬೇಕಾಗಿದ್ದಲ್ಲಿ ಈ ಕೂಡಲೇ ಸಂಪರ್ಕ ಮಾಡಲು ಮಾಡಬಹುದು ಎಂದರುಮ
ಪತಂಜಲಿ ಯೋಗ ಪೀಠ, ರಾಜ್ಯ ಕಾರ್ಯಾಲಯ, ಕೇಶ್ವಾಪುರ, ಹುಬ್ಬಳ್ಳಿ – 580023 ಸಂಪರ್ಕ ಸಂಖ್ಯೆ : 9008100896 / 9008100887. ಈ ಸಂದರ್ಭದಲ್ಲಿ
ಉಮಾ ಅಗಡಿ, ರಮೇಶ್ ಸುಲಕೆ, ಎಂ ಡಿ ಪಾಟೀಲ್, ಶೈಲಜಾ ಮಾಡೀಕರ, ರಾಜೇಶ್ವರಿ ಹಡಗಲಿ, ರೂಪ ಬಡಿಗೇ, ಭಾಗ್ಯಶ್ರೀ ಬಡಿಗೇರ್, ಸೌಮ್ಯ ಮಲ್ಲಾಪುರ್, ಬಲರಾಜ್ ಸಿಂಗ್ ಜಾವೂರ್ ದಂಪತಿಗಳು, ಲೀಲಾವತಿ ಸಾಂಬ್ರಾಣಿ, ಲಕ್ಷ್ಮಿ ಬಡಿಗೇರ್, ಬಸವರಾಜ ಮಮ್ಮಿಗಟ್ಟಿ, ಸವಿತಾ ಶಿಂಧೆ, ಜೋಶಿ ಕಲ್ಯಾಣಮಂಟಪದ ಸಚಿನ್ ಜೋಶಿ, ಕಲ್ಮೇಶ್ ಮಲ್ಲಿಗ್ ವಾಡ್, ನಾಗರತ್ನ ಸುಲಕೆ, ತನುಜಾ ಪಾಟೀಲ್, ಛಾಯ ಸುರೇಬಾನು ಮುಂತಾದವರಿದ್ದರು.


Spread the love

About Karnataka Junction

[ajax_load_more]

Check Also

ಪ್ರಥಮ ಸಂಸತ್ತಿನಲ್ಲಿ ದಲಿತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ಅವರ ಹೆಸರೇ ಇರಲಿಲ್ಲ.- ಮೇಗಾಲಾಲ್

Spread the loveಪ್ರಥಮ ಸಂಸತ್ತಿನಲ್ಲಿ ದಲಿತ ಕೋಟಾದಲ್ಲಿ ಸಚಿವ ಸ್ಥಾನಕ್ಕೆ ಅಂಬೇಡ್ಕರ್ ಅವರ ಹೆಸರೇ ಇರಲಿಲ್ಲ.- ಮೇಗಾಲಾಲ ಹುಬ್ಬಳ್ಳಿ ;ಕಾಂಗ್ರೆಸ್‌ …

Leave a Reply

error: Content is protected !!