https://youtu.be/FmbDRQbCn2w
ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯ ಕಸ ಸಂಗ್ರಹಣಾ ವಾಹನದ ಚಾಲಕ ಮೂರ್ಛೆ ತಪ್ಪಿದ್ದರಿಂದ ಸರಣಿ ಅಪಘಾತ ಸಂಭವಿಸಿದ್ದು, ಆರು ಬೈಕ್‌ಗಳು ಜಖಂಗೊಂಡಿವೆ. ಘಟನೆಯಲ್ಲಿ ಚಾಲಕ ಸುರೇಶ ಮನ್ನಾಳ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಲಯ 7ರ ಕಸ ಸಂಗ್ರಹಿಸುವ ವಾಹನ ಚಾಲಕರಾಗಿರುವ ಸುರೇಶ ಅವರು, ಬೆಳಿಗ್ಗೆ 10ರ ಸುಮಾರಿಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಹಾಕಿ ಬರುತ್ತಿದ್ದರು. ಕೆಇಸಿ ಕಾರ್ಖಾನೆ ಸಮೀಪ ಬರುತ್ತಿದ್ದಂತೆ ಮೂರ್ಛೆ ತಪ್ಪಿದ ಅವರು, ವಾಹನದ ನಿಯಂತ್ರಣ ಕಳೆದುಕೊಂಡರು. ಕಾರ್ಖಾನೆ ಕಾಂಪೌಂಡ್ ಪಕ್ಕ ನಿಲ್ಲಿಸಿದ್ದ ಬೈಕ್‌ಗಳಿಗೆ ವಾಹನ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ಆರು ಬೈಕ್‌ಗಳು ಜಖಂಗೊಂಡಿವೆ ಎಂದು ಹುಬ್ಬಳ್ಳಿ ಉತ್ತರ ಸಂಚಾರ ಠಾಣೆ ಪೊಲೀಸರು ತಿಳಿಸಿದರು.
![](https://karnatakajunction.com/wp-content/uploads/2022/09/WhatsApp-Image-2021-06-18-at-04.43.19-660x330.jpeg)