Breaking News

ನೀಟ್ ಯುಜಿಯಲ್ಲಿ ಸರೀಮ್ ಝೈದ್, ಹೃಷಿಕೇಶ್ ಹೊನವಾಡ ಟಾಪ್

Spread the love

ನೀಟ್ ಯುಜಿಯಲ್ಲಿ ಸರೀಮ್ ಝೈದ್, ಹೃಷಿಕೇಶ್ ಹೊನವಾಡ ಟಾಪ್

ಹುಬ್ಬಳ್ಳಿ: ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಸರೀಮ್ ಝೈದ್ ಎ. ಮತ್ತು ಹೃಷಿಕೇಶ್ ಹೊನವಾಡ ವಿದ್ಯಾರ್ಥಿಗಳು ನೀಟ್ ಯುಜಿ 2024 ಪರೀಕ್ಷೆಯಲ್ಲಿ 705 ಅಂಕಗಳೊಂದಿಗೆ ಕ್ರಮವಾಗಿ 2187 ಅಖಿಲ ಭಾರತ ಶ್ರೇಯಾಂಕ ಹಾಗೂ ಎಐಆರ್ 2206 ಶ್ರೇಯಾಂಕ ಗಳಿಸಿ, ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಎಇಎಸ್ ಎಲ್ ಒದಗಿಸಿದ ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದ್ದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಫಲಿತಾಂಶ ಪ್ರಕಟಿಸಿದೆ.
ವಿದ್ಯಾರ್ಥಿಗಳು ಜಾಗತಿಕವಾಗಿ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ನೀಟ್ ಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲು ಎಇಎಸ್ ಎಲ್ ನ ತರಗತಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದಿದ್ದರು. ವಿಷಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಶಿಸ್ತಿನ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿರುವುದು ತಮ್ಮ ಯಶಸ್ಸಿಗೆ ಕಾರಣವೆಂದು ಸಾಧಕ ವಿದ್ಯಾರ್ಥಿಗಳು ಬಣ್ಣಿಸಿದ್ದಾರೆ. “ಈ ಎರಡೂ ವಿಷಯಗಳಲ್ಲಿ ಆಕಾಶ್ ಸಂಸ್ಥೆಯು ಮಾಡಿರುವ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಆದರೆ, ಎಇಎಸ್ ಎಲ್ ನೀಡಿರುವ ವಿಷಯ ಮತ್ತು ತರಬೇತಿ ಅಲ್ಲದಿದ್ದರೆ ಈ ಅಲ್ಪಾವಧಿಯಲ್ಲಿ ನಾವು ವಿವಿಧ ವಿಷಯಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ.
“ವಿದ್ಯಾರ್ಥಿಗಳನ್ನು ಅವರ ಅನುಕರಣೀಯ ಸಾಧನೆಗಾಗಿ ನಾವು ಅಭಿನಂದಿಸುತ್ತೇವೆ. ದೇಶದೆಲ್ಲೆಡೆಯ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ 2024 ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮತ್ತು ಅವರ ಹೆತ್ತವರ ಬೆಂಬಲವನ್ನು ಬಣ್ಣಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ” ಎಂದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!