Breaking News

ಪರಿಹಾರ ಚಕ್ ವಿತರಣೆ

Spread the love

ಪರಿಹಾರ ಚಕ್ ವಿತರಣೆ

ಹುಬ್ಬಳ್ಳಿ; ಸಿಡಿಲು ಬಡಿದು ಮೃತಪಟ್ಟ 17 ವರ್ಷದ ಬಾಲಕ ದಿವಂಗತ ಅರುಣ್ ಚುನಮರಿ ಅವರ ನಿವಾಸಕ್ಕೆ ಇಂದು ತೆರಳಿ ಸರ್ಕಾರದಿಂದ ಪರಿಹಾರವಾಗಿ ಬಂದ 5 ಲಕ್ಷ ರೂಪಾಯಿಗಳ ಚೆಕ್ಕನ್ನು ಅವರ ಕುಟುಂಬಕ್ಕೆ ರಾಜ್ಯ ವಿಧಾನ ಸಭಾ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದಹಸ್ತಾಂತರಿಸಿ, ಸಾಂತ್ವನ ಹೇಳಿದರು.
ಜೋಡಳ್ಳಿ ಕ್ರಾಸ್ ಬಳಿ ದನ ಮೇಯಿಸುತ್ತ ಹೊರಟ ಸಂದರ್ಭದಲ್ಲಿ ಸಿಡಿಲು ಬಡಿದು ಈ ದುರ್ಘಟನೆಯ ಜರುಗಿ ಬಾಲಕ ಪ್ರಾಣತೆತ್ತದ್ದು ಅತ್ಯಂತ ವಿಷಾದನೀಯ ಸಂಗತಿ. ಸ್ನೇಹಿತರೊಂದಿಗೆ ಕಾಲೇಜು ದಿನಗಳನ್ನು ಸಂತಸದಿಂದ ಕಳೆಯಬೇಕಾಗಿದ್ದ ಹುಡುಗ ಅಸುನೀಗಿದ್ದು ದುಃಖದ ವಿಷಯ. ಮಳೆಗಾಲದ ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದದ್ದು ಅತ್ಯಂತ ಅವಶ್ಯಕ. ಗುಡುಗು ಸಿಡಿಲಿಗೆ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಲು ವಿನಂತಿ
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಂಕರ ಹೊಸಮನಿ, ಹನುಮಂತಪ್ಪ ಉಣಕಲ್, ಫಕ್ಕಿರಪ್ಪ ಗುಳಗನ್ನವರ, ಸುರೇಶ ಬಾದಾಮಿ, ಕಲ್ಲಪ್ಪ ಅನಾಡಿ, ರವಿ ಚುನಮುರಿ, ಮಾರುತಿ ಈಳಗೇರ, ಶಂಕರ ಕೋಟೂರ್, ಗಿರೀಶ ಆಲದಕಟ್ಟಿ ಸೇರಿದಂತೆ ಇನ್ನಿತರರು ಇದ್ದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!