Breaking News

ಜಿಲ್ಲಾ ಉಸ್ತುವಾರಿ ಕ್ಷೇತ್ರದಲ್ಲಿಯೇ ಕೈ ಅಭ್ಯರ್ಥಿ ವಿನೋದ ಅಸೂಟಿಗೆ ಹಿನ್ನಡೆ

Spread the love

ಹುಬ್ಬಳ್ಳಿ; ಭಾರೀ ಅಬ್ಬರಿಸಿ ಬೊಬ್ಬರುತಿದ್ದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ವಕ್ಷೇತ್ರ ಕಲಘಟಗಿಯಲ್ಲಿ ಭಾರತೀಯ ಜನತಾ ಪಕ್ಷ ಮತ ಗಳಿಕೆಯಲ್ಲಿ ಮುನ್ನಡೆ ಪಡೆದು ಕೈಪಡೆಗೆ ಮುಖ ಭಂಗ ಮಾಡಿದೆ‌. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರ ಜೊತೆಗೆ ಒಳ ಹೊಂದಾಣಿಕೆ ರಾಜಕಾರಣ ಮಾಡಿದಾರಾ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ ಲಾಡ್, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ನಾಗರಾಜ ಛಬ್ಬಿ ವಿರುದ್ಧ 14,357 ಮತಗಳ ಅಂತರದಿಂದ ಜಯ ಗಳಿಸಿದ್ದರು. ಕೇವಲ ಒಂದು ವರ್ಷದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಲಾಡ್‌ಗೆ ಭಾರೀ ಹಿನ್ನಡೆಯಾಗಿದೆ. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಲಘಟಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪ್ರಹ್ಲಾದ ಜೋಶಿ 96402 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ 63665 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ.
ಚುನಾವಣೆ ಪ್ರಚಾರದ ವೇಳೆ ಸಚಿವ ಸಂತೋಷ ಲಾಡ್, ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರುತ್ತ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮಾತ್ರ ಟಾರ್ಗೆಟ್ ಮಾಡತಾ ಇದ್ದರು ಯಾವುದೇ ರೀತಿಯ ಸ್ಥಳೀಯ ಅಭಡ ಪ್ರಲ್ಹಾದ್ ಜೋಶಿ ಅವರ ಬಗ್ಗೆ ಹೆಚ್ಚು ಮಾತನಾಡುವುದು, ಅಭಿವೃದ್ಧಿ ವಿಷಯ ಕುರಿತು ಚರ್ಚೆ ಮಾಡತಾ ಇರಲಿಲ್ಲ ಎಂಬುದು ಇಲ್ಲಿ ಚರ್ಚೆಗೆ ಗ್ರಾಸವಾಗಿದೆ ‌. ಇದರ ಜೊತೆಗೆ ಯಾರೇ ಮಾಧ್ಯಮದವರು ಯಾವಗಲೇ ಇರಲಿ
ತಮ್ಮ ವಿಚಾರಗಳನ್ನು ಸಮರ್ಥಿ ಸಿಕೊಂಡು ಅವರು ಬಹಿರಂಗ ಚರ್ಚೆಗೆ ಬಿಜೆಪಿಯವರನ್ನು ಆಹ್ವಾನಿಸಿದ್ದು ಗಮನ ಸೆಳೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಲಾಡ್ ಅವರ ಆಯ್ಕೆಯೂ ಆಗಿದ್ದರು. ಅಸೂಟಿ ಸೋತಿರುವುದು ಒಂದೆಡೆಯಾದರೆ, ಸ್ವಕ್ಷೇತ್ರದಲ್ಲಿ ಬಿಜೆಪಿ 32737 ಮತಗಳ ಮುನ್ನಡೆ ಗಳಿಸಿರುವುದು ಜಿಲ್ಲಾ ಉಸ್ತುವಾರಿ ಸಚಿವರಿಗಾದ ದೊಡ್ಡ ಹಿನ್ನೆಡೆ ಆಗಿದೆ. ಸಚಿವ ಲಾಡ್ ಹಿಂಬಾಲಕರು ಸಹ ಪ್ರಲ್ಹಾದ್ ಜೋಶಿ ಅವರ ಜೊತೆಗೆ ಪರೋಕ್ಷವಾಗಿ ಸಂಪರ್ಕದಲ್ಲಿ ಇದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ಸಚಿವ ಸ್ಥಾನ ಹೋಗುತ್ತದೆಂದು ಹೈಕಮಾಂಡ್ ಸೂಚಿಸಿದೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿರುವುದಲ್ಲದೇ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಕಲಘಟಗಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರಿಗೆ ಹೆಚ್ಚು ಮತಗಳು ಬಿದ್ದಿವೆ. ಇದರಿಂದಾಗಿ ಸಂತೋಷ ಲಾಡ್ ಅವರ ನಿಲುವು ಏನು ಅಂತಾ ಗೊತ್ತಾಗಬೇಕಾಗಿದೆ.


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!