Breaking News

ಪ್ರಲ್ಹಾದ್ ಜೋಶಿ ಗೆದ್ದು ಇತಿಹಾಸ ಸೃಷ್ಟಿ: ಕಮಲ ಪಾಳದಲ್ಲಿ ಉತ್ಸವಕ್ಕೆ ಬ್ರೇಕ್

Spread the love

ಪ್ರಲ್ಹಾದ್ ಜೋಶಿ ಗೆದ್ದು ಇತಿಹಾಸ ಸೃಷ್ಟಿ: ಕಮಲ ಪಾಳದಲ್ಲಿ ಉತ್ಸವಕ್ಕೆ ಬ್ರೇಕ್

ವಿಜ್ರಂಭಣೆ ವಿಜಯೋತ್ಸಕ್ಕೆ ನಾಯಕರ ತಡೆ,,ಲಾಡ್ ವಾಪಸ್, ಮುದಡಿದ ಮಾಲೆಗಳು

ಹುಬ್ಬಳ್ಳಿ: ಇಡೀ ದೇಶದ ಅತ್ಯಂತ ಹೆಚ್ಚು ಗಮನ ಸೇಳದ‌ ಕ್ಷೇತ್ರಗಳ ಪೈಕಿ ಒಂದಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ಸತತ ಐದನೇ ಬಾರಿ ಗೆಲುವು ತಮ್ಮದಾಗಿ ಸಿಕೊಂಡಿದ್ದರೂ ಅಷ್ಟೊಂದು ಉತ್ಸಾಹ ಕಂಡುಬರತಾ ಇಲ್ಲ. ಅದ್ದೂರಿಯಾಗಿ ವಿಜಯೋತ್ಸವಕ್ಕೆ ಸಹ ಬ್ರೇಕ್ ಹಾಕಲಾಗಿದ್ದು ಇದಕ್ಕೆ ಪ್ರಮುಖ ಕಾರಣ ಮತಗಳಿಕೆ ಕಡಿಮೆ ಆಗಿದ್ದು ಜೊತೆಗೆ ಎನ್ ಡಿಎ ಸ್ಪಷ್ಟವಾದ ಬಹುಮತ ಬರದೇ ಇರುವುದು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಈಗಷ್ಟೇ ಚುನಾವಣೆ ರಾಜಕೀಯ ಪ್ರವೇಶ ಮಾಡಿದ್ದ ಯುವಕ ವಿನೋದ ಅಸೂಟಿ ಭಾರತೀಯ ಜನತಾ ಪಕ್ಷಕ್ಕೆ
ಪ್ರಬಲ ಸ್ಪರ್ಧೆ ಒಡ್ಡಿದರು. ಮತ ಎಣಿಕೆಯ ಆರಂಭದಿಂದ ಹಿಡಿದು ಕೊನೇ ವರೆಗೂ ಇಬ್ಬರೂ ಅಭ್ಯಥಿರ್ಗಳು ಕುತೂಹಲ ಉಳಿಸಿಕೊಂಡು ಬಂದರು. ‌ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೈಪೋಟಿ ಪ್ರಲ್ಹಾದ್ ಜೋಶಿ ಮತ್ತು ಕಮಲ‌ ನಾಯಕರು ನೀರಿಕ್ಷೆ ಮಾಡಿರಲಿಲ್ಲ.
ಮತ ಎಣಿಕೆ ಶುರುವಾದ ನಂತರ ಕಡಿಮೆ ಅಂತರದಲ್ಲೇ ಮುನ್ನಡೆ ಸಾಧಿಸಿದ ಪ್ರಲ್ಹಾದ್ಜೋಶಿ ಅವರಿಗೆ ಅಂತಿಮ ಹಂತದವರೆಗೂ ನಿರೀಯ ದೊಡ್ಡ ಲೀಡ್‌ ಸಿಗಲೇ ಇಲ್ಲ. ಕಾಂಗ್ರೆಸ್ ಅಭ್ಯಥಿರ್ ಅಸೂಟಿ ತೀವ್ರ ಪೈಪೋಟಿ ನೀಡುತ್ತಲೇ ಹೋದರು. ಎಣಿಕೆ ಆರಂಭವಾದಾಗ ಎರಡು, ಮೂರು ಸಾವಿರ ಮತಗಳ ಅಂತರವಿತ್ತು.
ನಂತರದಲ್ಲಿ ಅದು ನಿಧಾನಕ್ಕೆ ಏರುತ್ತ ಹೋಯಿತು. ಕೇಂದ್ರ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ
ಪ್ರಲ್ಲಾದ ಜೋಶಿ ಅವರ ಸತತ ಐದನೇ ಗೆಲುವು ಇದಾಗಿದೆ. ಈ ಹಿಂದೆ ನಾಲ್ಕು ಚುನಾವಣೆ ಪೈಕಿ ಮೂರರಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಜಯ ಸಾಧಿಸಿದ್ದರು. ಅದರಲ್ಲೂ 2019ರ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯದ ವಿನಯ ಕುಲಕಣಿರ್‌ ಅವರ ವಿರುದ್ಧ 2.05 ಲಕ್ಷ ಮತಗಳ ಭಾರಿ ಮುನ್ನಡೆಯೊಂದಿಗೆ ಜಯ ದಾಖಲಿಸಿ ಬೀಗಿದ್ದರು.
ಆದರೆ, ಈ ಬಾರಿ ರಾಜಕೀಯ ಅನನುಭವಿ ವಿನೋದ ಅಸೂಟಿ ಅವರನ್ನು ಮಣಿಸಲು ಪ್ರಲ್ಹಾದ್
ಜೋಶಿ ಅವರು ಬಹಳಷ್ಟು ಶ್ರಮ ಪಡಬೇಕಾಯಿತು. ಬಹು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಬೀಗಿದ್ದ ಬಿಜೆಪಿಗೆ ಇದು ಹಿನ್ನಡೆ ಉಂಟು ಮಾಡಿತು.
ಚುನಾವಣೆ ಆರಂಭದಿಂದಲೂ ೨ ಲಕ್ಷದಿಂದ ೨.೫೦ ಲಕ್ಣಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತ ಬಂದಿದ್ದ ಬಿಜೆಪಿಗರಿಗೆ ಕಡಿಮೆ ಅಂತರವು ಒಂದು ರೀತಿ ಎಚ್ಚರಿಕೆಯ ಗಂಟೆ ಎಂದೇ ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರು ಒಟ್ಟಾಗಿ ಚುನಾವಣೆ ಎದುರಿಸಲು ಮುಂದಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್ ಸಮಬಲ ಹೊಂದಿರುವುದು ಇತ್ಯಾದಿ ಕಾರಣಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಅಸೂಟಿ ಅವರು ಮೋದಿ ಅಲೆಯ ಮಧ್ಯೆಯೂ ಪೈಪೋಟಿ ನೀಡಿದರು.
ಪ್ರಲ್ಲಾದ ಜೋಶಿ ಅವರು ಕೂಡ ಪ್ರಚಾರ ಸಂದರ್ಭದಲ್ಲಿ ಮತದಾರರು ಬೃಹತ್ ಅಂತರದ ಗೆಲುವು ನೀಡಲಿದ್ದಾರೆ ಎಂದು ವಿಶ್ವಾಸದಿಂದ ಹೇಳುತ್ತ ಬಂದಿದ್ದರು. ಅನೇಕ ಘಟಾನು ಘಟಿಗಳ ನಾಯಕರು ಪ್ರಚಾರಕರು ಬಂದು ಹೋಗಿದ್ದರು. ಈ ಎಲ್ಲ ಲೆಕ್ಕಾಚಾರಗಳು, ನಿರೀಕ್ಷೆಗಳು ಹುಸಿಯಾಗಿವೆ. ಕೇವಲ 95ಸಾವಿರ ಮತಗಳ ಅಂತರದ ಗೆಲುವು ಸಿಕ್ಕಿರುವುದು ಅಷ್ಟೊಂದು ಉತ್ಸಾಹ ಕಾಣಬರಲಿಲ್ಲ. ಇದರ ಜೊತೆಗೆ ಲಕ್ಷಾಂತರ ಲಾಡು ಹಂಚಲು ಮುಂದಾಗಿದ್ದ ಬಿಜೆಪಿ ನಾಯಕರು ಅವುಗಳನ್ನ ವಾಪಾಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
2004 ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಪ್ರಲ್ಹಾದ್ ಜೋಶಿ ಅವರು ಒಂದು ಲಕ್ಷಕ್ಕಿಂತ ಕಡಿಮೆ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.
ಉಳಿದಂತೆ 2009ರಲ್ಲಿ 137660, 2014ರಲ್ಲಿ 111657 ಮತಗಳು, 2019ರಲ್ಲಿ ವಿಶೇಷವೆಂದರೆ 2.5 ಲಕ್ಷ ಮತಗಳ ಅಂತರದ ಗೆಲವು ಸಾಧಿಸಿದ್ದರು.
ಪ್ರಲ್ಲಾದ ಜೋಶಿ ಅವರು ಪ್ರತಿ ಚುನಾವಣೆಯಲ್ಲಿ ಪಡೆದ ಮತಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿರುವುದು ಬಿಜೆಪಿಗೆ ಸಮಾಧಾನ ತಂದಿರಬಹುದು. ಮೊದಲ ಚುನಾವಣೆಯಲ್ಲಿ 385084 ಮತಗಳು, ಎರಡನೇ ಚುನಾವಣೆ 446786, ಮೂರನೇ ಚುನಾವಣೆಯಲ್ಲಿ 545935 ಮತಗಳು, ನಾಲ್ಕನೇ ಚುನಾವಣೆಯಲ್ಲಿ 684837 ಹಾಗೂ ಪ್ರಸ್ತುತ ಚುನಾವಣೆಯಲ್ಲಿ 716231 ಮತಗಳನ್ನು ಪಡೆದಿದ್ದಾರೆ. ಅಂದರೆ ಹಿಂದಿನ ಚುನಾವಣೆಯಲ್ಲಿ ಪ್ರಲ್ಹಾದ್ ಜೋಶಿ ಅವರ ಮತ ಗಳಿಕೆ ಏರಿಕೆ ಆಗಿತ್ತಲೇ ಹೋಗಿತ್ತು.


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!