https://youtu.be/X9Ck61eaUuM
ಹುಬ್ಬಳ್ಳಿ; ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಲಾಕ್ಡೌನ್ನ ವಿನಾಯಿತಿ ಹಿನ್ನೆಲೆಯಲ್ಲಿ ನಗರದಲ್ಲಿ ಜನರು ಕೋವಿಡ್ ಸೋಂಕು ಮರೆತಂತೆ ವರ್ತಿಸಿದರು.
ಇಂದು ಬೆಳಗ್ಗೆಯಿಂದಲೇ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿತು. ಜೊತೆಗೆ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಮಧ್ಯೆಯೂ ಜನರು ದಿನಸಿ ಹಾಗೂ ಇತರ ವಸ್ತುಗಳ ಖರೀದಿಗೆ ರಸ್ತೆಗೆ ಇಳಿದಿದ್ದರು. ಎಂ.ಜಿ. ಮಾರುಕಟ್ಟೆ, ಜನತಾ ಬಜಾರಗಳಲ್ಲಿ ಹೂವು, ಹಣ್ಣು, ತರಕಾರಿ ಖರೀದಿಗೂ ಪರಸ್ಪರ ಅಂತರ ಮರೆತು ಮುಗಿಬಿದ್ದಿದ್ದರು.
ಅಲ್ಲದೇ ಜನರ ತಿರುಗಾಟ ಹೆಚ್ಚಿಗೆ ಇತ್ತು. 11 ಗಂಟೆ ನಂತರ ಮಳೆ ಸ್ವಲ್ಪ ಬಿಡುವು ನೀಡಿದರಿಂದ ಮಾರುಕಟ್ಟೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
