ಗೆಲುವು ಸಾಧಿಸುತಿದ್ದಂತೆ ದೆಹಲಿಗೆ ತೆರಳಿದ ಪ್ರಲ್ಹಾದ್ ಜೋಶಿ
ವಿವಿಧ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ನೂತನ ಸಂಸದರು
ಹುಬ್ಬಳ್ಳಿ : ಇತ್ತ ಚುನಾವಣಾ ಫಲಿತಾಂಶ ಬೆನ್ನು ಹಿಂದೆಯೇ ತಡಬಾಡಿಯಿಸಿ ದೆಹಲಿತ್ತ ಸಂಸದ ಪ್ರಲ್ಹಾದ್ ಜೋಶಿ ಅವರು ದೆಹಲಿಯತ್ತ ದಾಪುಗಾಲು ಹಾಕಿದರು.
ಧಾರವಾಡ ಲೋಕಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಚುನಾವಣೆ ಫಲಿತಾಂಶದ ರಾತ್ರಿಯೇ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದು ಭಾರೀ ಕುತೂಹಲಕ್ಕೆ ಕಾರಣವಾಯಿತು
ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪ್ರಲ್ಲಾದ ಜೋಶಿ ರಾತ್ರಿ ಹುಬ್ಬಳ್ಳಿಯಿಂದ ತೆರಳಿದರು.
ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಿಂದ ಪ್ರಮಾಣ ಪತ್ರ ಪಡೆದ ಜೋಶಿ, ಕುಟುಂಬದ ಸದಸ್ಯರು, ಧಾರವಾಡ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಧಾರವಾಡ ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಪಕ್ಷದ ಪ್ರಮುಖರು, ಕಾರ್ಯಕರ್ತರೊಂದಿಗೆ ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ನಂತರ ಹುಬ್ಬಳ್ಳಿಗೆ ಆಗಮಿಸಿ ಹುಬ್ಬಳ್ಳಿಯ ಬೈರಿದೇವರಕೊಪ್ಪದ ಶ್ರೀ ಶಿವಾನಂದ ಮಠ, ಉಣಕಲ್ ನ ಶ್ರೀ ಸಿದ್ದೇಶ್ವರ ಮಠ ಸಿದ್ದಾರೂಢಮಠ, ಮೂರುಸಾವಿರ ಮಠ ಸೇರಿದಂತೆ ವಿವಿಧ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಗೋಕುಲ ರಸ್ತೆಯಲ್ಲಿನ ಆರ್‌ಎಸ್ ಎಸ್ ಕಾರ್ಯಾಲಯ ಕೇಶವ ಕುಂಜ, ಅರವಿಂದ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ನಂತರ ಕೇಶ್ವಾಪುರದ ಮಯೂರಿ ಎಸ್ಟೇಟ್ ನಲ್ಲಿರುವ ತಮ್ಮ ಮನೆಗೆ ತೆರಳಿ ನಂತರ ಮನೆಯಿಂದ ಹೊರಟು, ವಿಮಾನ ನಿಲ್ದಾಣ ಮೂಲಕ ದೇಹಲಿಗೆ ತೆರಳಿದರು .