ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ ಗಮನವನ್ನ ಈ ಸಲ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ಜನರ ಗಮನ ಸೆಳೆದಿತ್ತು. ಮೊದಲ ಸುತ್ತಿನಿಂದಲೂ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮುನ್ನಡೆ ಸಾಧಿಸುತ್ತಲೇ ಸಾಕಷ್ಟು ಕುತೂಹಲ ಮೂಡಿಸಿದರು.
2004 ರಿಂದ ಇಲ್ಲಿಯವರೆಗೂ ಬಿಜೆಪಿ ಪ್ರಹ್ಲಾದ್ ಜೋಶಿ ಅವರನ್ನ ಕಣಕ್ಕಿಳಿಸಿ 2024 ರ ಐದನೇ ಭಾರೀಗೂ ಗೆಲ್ಲಿಸಿಕೊಂಡು ಬರಲಾಯಿತು.
ಈ ಹಿಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಪ್ರಹ್ಲಾದ್ ಜೋಶಿಯವರು ಐದನೇ ಕಣಕ್ಕೆ ಇಳಿದಿದ್ದು ಅವರ ಪಕ್ಷದ ಮಾಜಿ ಸಚಿವರು ಕಾಂಗ್ರೆಸ್ ಅಭ್ಯರ್ಥಿ ಪರ ಆರ್ಥಿಕ ಸಂಪನ್ಮೂಲಗಳನ್ನ ಹಂಚಿಕೆ ಮಾಡುವ ಜೊತೆಗೆ ಮಾಜಿ ಮುಖ್ಯಮಂತ್ರಿ, ಜೊತೆಗೆ ಹಾಲಿ ಶಾಸಕರು ಪ್ರಲ್ಹಾದ್ ಜೋಶಿಗೆ ಚುನಾವಣೆಯಲ್ಲಿ ಏನು ಮಾಡಲಿಲ್ಲ. ಇದರ ಜೊತೆಗೆ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಹ ಸಾಕಷ್ಟು ಪ್ರಲ್ಹಾದ್ ಜೋಶಿ ವಿರುದ್ಧ ತೇಜೋವಧೆ ಹೇಳಿಕೆ ಕೊಡತಾ ಬಂದರು. ಆದರೂ ಇದಕ್ಕೆ ದೃತಿಗೇಡ ಪ್ರಲ್ಹಾದ್ ಜೋಶಿ ಅವರು ಎದರುರಾಳಿಗಳನ್ನ ತುಂಬಾ ಜಾಣತನದಿಂದ ಹಣೆದರು.
ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರಿಗೆ ಜೋಶಿ ಅವರಿಗೆ ಯಾವುದೇ ಲೆಕ್ಕಕ್ಕೆ ಇರದ ಕಾಂಗ್ರೆಸ್ನ ವಿನೋದ ಅಸೂಟಿ ಪ್ರತಿ ಸ್ಪರ್ಧಿಯಾಗಿ ಕಣಕ್ಕೆ ಇಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಿಂತ ಅಬ್ಬರಿಸಿದ್ದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್. ಮೇಲ್ನೋಟಕ್ಕೆ ಪ್ರಲ್ಹಾದ್ ಜೋಶಿ ವರ್ಸಸ್ ಸಂತೋಷ ಲಾಡ್ ಎಂಬ ರೀತಿ ಬಿಂಬಿತವಾಗಿತ್ತು.
ಪ್ರಹ್ಲಾದ್ ಜೋಶಿ ವಿಜಯ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ : 18,31,976
ಚಲಾವಣೆಯಾದ ಮತಗಳು: 13,62,421
ಪ್ರಲ್ಹಾದ್ ಜೋಶಿ … ಅಂತರ ಮತಗಳಿಂದ ಗೆಲುವು
ಈ ಹಿಂದಿನ ಚುನಾವಣೆಗಳ ಫಲಿತಾಂಶ
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಹ್ಲಾದ್ ಜೋಶಿಯವರು 6,84,837 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು 4,79,765 ಮತಗಳನ್ನು ಪಡೆದಿದ್ದರು. ಪ್ರಹ್ಲಾದ್ ಜೋಶಿಯವರು ವಿನಯ್ ಕುಲಕರ್ಣಿ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.
ಇದಕ್ಕೂ ಮುನ್ನ 2014ರ ಲೋಕಸಭಾ ಚುನಾವಣೆಯಲ್ಲೂ ಸಂಸದ ಪ್ರಹ್ಲಾದ್ ಜೋಶಿಯವರೇ ಗೆಲವು ಸಾಧಿಸಿದ್ದರು. ಈ ಚುನಾವಣೆಯಲ್ಲೂ ಪ್ರಹ್ಲಾದ್ ಜೋಶಿಯವರ ವಿರುದ್ಧ ವಿನಯ ಕುಲಕರ್ಣಿಯವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿಯವರು 5,43,395 ಮತಗಳನ್ನು ಪಡೆದಿದ್ದರು. ಇನ್ನು ವಿನಯ್ ಕುಲಕರ್ಣಿಯವರು 4,31,738 ಮತಗಳನ್ನು ಪಡೆದಿದ್ದರು.
ಇನ್ನು ಧಾರವಾಡ ಲೋಕಸಭಾ ಕ್ಷೇತ್ರ 1996ರ ಲೋಕಸಭಾ ಚುನಾವಣೆವರೆಗೂ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. 1996ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಕೋಟೆ ಮೇಲೆ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಿತು. ಅಲ್ಲಿಂದ ಇಲ್ಲಿಯವರೆಗೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದೆ. ಈಗ ಮೈತೊಂದು ಸಲ ಪ್ರಲ್ಹಾದ್ ಜೋಶಿ ಆಯ್ಕೆ ಆಗಿದ್ದು ಬಿಜೆಪಿಯ ಭದ್ರಕೋಟೆಯಾದಂತಾಗಿದೆ