Breaking News

ಕೆರೆಯಲ್ಲಿ ಮುಳುಗಿ ಯುವಕ ಸಾವು

Spread the love

ಹುಬ್ಬಳ್ಳಿ; ಧಾರವಾಡ ಜಿಲ್ಲೆಯ
ನವಲಗುಂದ ತಾಲೂಕಿನ ಹಾಳ ಕುಸುಗಲ್ ಗ್ರಾಮದ ಬಳಿ ಕೆರೆಯಲ್ಲಿ ಗ್ರಾಮದ ದಾವಲಸಾಬ ಹೆಬಸೂರ ( 25) ಕೆರೆ ನೀರಿನಲ್ಲಿ ಮುಳುಗಿ ರವಿವಾರ ಸಂಜೆ ಸಾವನ್ನಪ್ಪಿದ್ದಾನೆ
ಗೆಳೆಯರ ಜೊತೆ ಇದ್ದ ಯುವಕ ಪಾನಮತ್ತನಾಗಿದ್ದನು ಎಂದು ತಿಳಿದು ಬಂದಿದ್ದು ಈಜುವ ಸಾಹಸದ ಮಾತುಗಳನ್ನು ಆಡುವ ವೇಳೆ ತಾನು ಈಜು ತೋರಿಸುವೆ ಎಂದು ಕೆರೆಗೆ ಇಳಿದ ಯುವಕ ಈಜು ಬಾರದೆ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ನವಲಗುಂದ ಪೊಲೀಸ್ ಠಾಣೆ ಎಎಸ್ಐ ಎಸ್ ವೈ ಮೇಟಿ ಹಾಗು ಸಿಬ್ಬಂದಿಯವರು ಏನ್ ಡಿ ಆರ್ ಎಫ್ ತಂಡದ ನೆರವಿನಿಂದ ಮೃತ ಯುವಕನ ಪತ್ತೆ ಕಾರ್ಯಾಚರಣೆ ಕೈಗೊಂಡಿದ್ದು ಕೆರೆ ತುಂಬಾ ಆಳವಾಗಿರುದರಿಂದ ಇನ್ನುವರೆಗೆ ಮೃತ ದೇಹ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಸೋಮವಾರ ನುರಿತ ಈಜುಪಟುಗಳ ಸಹಾಯದಿಂದ ಮೃತ ದೇಹ ಪತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ನವಲಗುಂದ ಪಿಎಸ್ಐ ಜನಾರ್ಧನ ಬಟ್ಟ್ರಳ್ಳಿ ಅವರು ತಿಳಿಸಿದರು.


Spread the love

About Karnataka Junction

    Check Also

    ಆನ್ ಲೈನ್ ಮೂಲಕ 14.72ಲಕ್ಷ ಹಣ ವಂಚನೆ

    Spread the love‘ ಹುಬ್ಬಳ್ಳಿ:ಆನ್‌ಲೈನ್’ ಅರೆಕಾಲಿಕ ಕೆಲಸದ (ಜಾಬ್) ಆಮಿಷಕ್ಕೆ ಮರುಳಾಗಿ ವ್ಯಕ್ತಿಯೊಬ್ಬರು ₹14.72ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಮೋಸ …

    Leave a Reply

    error: Content is protected !!