Breaking News

ಆನ್ ಲೈನ್ ಮೂಲಕ 14.72ಲಕ್ಷ ಹಣ ವಂಚನೆ

Spread the love

ಹುಬ್ಬಳ್ಳಿ:ಆನ್‌ಲೈನ್’ ಅರೆಕಾಲಿಕ ಕೆಲಸದ (ಜಾಬ್) ಆಮಿಷಕ್ಕೆ ಮರುಳಾಗಿ ವ್ಯಕ್ತಿಯೊಬ್ಬರು ₹14.72ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಮೋಸ ಹೋಗಿದ್ದಾರೆ, ಈ ಕುರಿತು ನಗರದ ಸೆನ್ ಠಾಣೆಯಲ್ಲಿ (ಸೈಬರ್, ಆರ್ಥಿಕ ಮತ್ತು ಕ್ರೈಂ) ಪ್ರಕರಣ ದಾಖಲಾಗಿದೆ.
ಕುಂದಗೋಳದ ಬಾಗವಾಡದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ‘ಪಾರ್ಟ್‌ ಟೈಂ ಆನ್‌ಲೈನ್‌ ಅಸಿಸ್ಟೆಂಟ್ ಕೆಲಸ ಇದೆ ಎಂದು ಟೆಲಿಗ್ರಾಂನಲ್ಲಿ ಸಂದೇಶ (ಪೋಸ್ಟ್) ಇತ್ತು. ರಶ್ಮಿಭಟ್ ಮತ್ತು ಭಾವನಾ ಕೆ. ಎಂಬ ಐಡಿಗಳಿಂದ ಚಾಟ್ ಮಾಡಿ ನನನ್ನು ನಂಬಿಸಿ ಹಂತಹಂತವಾಗಿ ಆನ್‌ಲೈನ್‌ನಲ್ಲಿ ₹14.72 ಲಕ್ಷ ಹಣವನ್ನು ಯಪಿಐ ಐಡಿ, ಬ್ಯಾಂಕ್ ಖಾತೆಗಳಿಗೆ ಪಾವತಿಸಿಕೊಂಡು ವಂಚನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರದಾರನಿಗೆ ವಂಚಕರು ಹೋಟೆಲ್‌ವೊಂದರ ಪೋಸ್ಟ್ ಹಾಕಿ ಲೈಕ್ ಮಾಡಿ ಸ್ಟ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡುವಂತೆ ಹಾಗೂ ₹10 ಸಾವಿರ ಹಣ ಪಾವತಿಸುವಂತೆ ತಿಳಿಸಿದ್ದಾರೆ. ದೂರುದಾರ ಅವರು ಹೇಳಿದ್ದನ್ನು ಮಾಡಿದಾಗ ಪ್ರತಿಯಾಗಿ ₹17 ಸಾವಿರ ರಿವಾರ್ಡ್ ಎಂದು ಆತನ ಖಾತೆಗೆ ಪಾವತಿಸಿದ್ದಾರೆ. ನಂತರ ಹಂತಹಂತವಾಗಿ ದೂರುದಾರನಿಂದ ₹14.72 ಲಕ್ಷ ಹಾಕಿಸಿಕೊಂಡು ವಂಚಿಸಿದ್ದಾರೆ. ವಂಚಕರ ಜಾಡು ಪತ್ತೆ ನಿಟ್ಟಿನಲ್ಲಿ ಶೋಧ ಆರಂಭಿಸಿದ್ದೇವೆ’ ಎಂದು ಸೈಬ‌ರ್ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.


Spread the love

About Karnataka Junction

    Check Also

    ಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು

    Spread the loveಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು ಇರಿದು ಕೊಲೆಗೈದ ಚಾಕುವಿಗಾಗಿ ಇಂಚಿಂಚು ತಲಾಷ್ …

    Leave a Reply

    error: Content is protected !!