ಹುಬ್ಬಳ್ಳಿ; ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ವಿಧಿಸಲಾದ ಲಾಕ್ ಡೌನ್ ನಿಂದ ಬಾಧಿತರಾದ ಬಡ ಜನರ ನೆರವಿಗಾಗಿ ಆಮ್ ಆದ್ಮಿ ಪಕ್ಷದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷೆ ಸುನಂದಾ ಕರಡಿಗುಡ್ಡ, ಅವರ ನೇತೃತ್ವದಲ್ಲಿ ಶುಕ್ರವಾರ ಸಿದ್ಧಾರೂಢ ಮಠ ಮತ್ತು ಇಂಡಿ ಪಂಪ್ ನ ಫತೇಶಾ ದರ್ಗಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಸಿ ಊಟ, ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಲಾಯಿತು. ಈ ಸೇವೆಯಲ್ಲಿ, ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡು, ದಿನಗೂಲಿ ಇಲ್ಲದೆ ಕಷ್ಟದಲ್ಲಿದ್ದ ಅನೇಕ ಕಾರ್ಮಿಕರಿಗೆ, ವೃದ್ಧರಿಗೆ ಮತ್ತು ಮಕ್ಕಳಿಗೆ ಆಹಾರ ಹಾಗು ಮಾಸ್ಕ್ ಗಳನ್ನು ವಿತರಿಸಿ ಯೋಗ ಕ್ಷೇಮ ವಿಚಾರಿಸಿ, ಆರೋಗ್ಯ ಕಾಪಾಡಿಕೊಳ್ಳಲು, ಸಾಮಾಜಿಕ ಅಂತರ ಕಾಯ್ದುಕೊಂಡು, ತಮ್ಮ ಸುತ್ತ ಮುತ್ತಲಿನ ಜಾಗೆಯನ್ನು ಶುಚಿಯಾಗಿ ಇಟ್ಟುಕೊಳ್ಳುವಂತೆ ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರುಗಳಾದ ಮೋಹನ್ ಪಾಟೀಲ, ದೀಪಿಕಾ ಮುಥಾ, ಕಸ್ತೂರಿ ಮುರಗೋಡ, ಇಜಾಜ್ ಶೇಕ, ಉಮೇಶ ಮಿರಜ್ಕರ, ವಿಶಾಲ ಬಳ್ಳಾರಿ ಮತ್ತಿತರರು ಉಪಸ್ಥಿತರಿದ್ದರು.
