ಅಂಜಲಿ ಕೊಲೆಗಾರನ ಹಿಂದೆ ಇದ್ದವರಿಗೂ ಶಿಕ್ಷೆ ಆಗಲಿ- ಯಶೋಧ
ಹುಬ್ಬಳ್ಳಿ; ನನ್ನ ಅಕ್ಕ ಅಂಜಲಿ ಕೊಲೆಗಾರ ಗಿರೀಶ್ ಸಾವಂತ ಹಿಂದುಗಡೆ ವ್ಯವಸ್ಥೆವಾದ ಜನರು ಇದ್ದಾರೆ ಅಂಜಲಿ ಕೊಲೆಗಾರ ಗಿರೀಶ್ ಹಿಂದೆ ಯಾರು ಇದ್ದಾರೆ ಅಂತಾ ತನಿಖೆ ಆಗಲಿ ಅವರಿಗೂ ಸಹ ಕಠಿಣ ಶಿಕ್ಷೆ ಆಗಲಿ ಎಂದು ಕೊಲೆಯಾಗಿದ್ದ ಅಂಜಲಿ
ಸಹೋದರಿ ಯಶೋಧಾ ಆಕ್ರೋಶ ವ್ಯಕ್ತಪಡಿಸಿದರು
ಕೊಲೆಯಾಗಿದ್ದ ಅಂಜಲಿ ಅಂಬಗೇರ ಪ್ರಕರಣವನ್ನ ಸಿಐಡಿಗೆ ಒಪ್ಪಿಸಿದ ಬಳಿಕ ಮಂಗಳವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಅಂಜಲಿ ಕೊಲೆ ಪ್ರಕರಣ ಸಿಐಡಿಯಿಂದ ನ್ಯಾಯ ಭರವಸೆ ಇದೆ ಆದರೆ
ನೇಹಾ ಕೊಲೆಗೆ ಸಿಐಡಿಯಿಂದ ವಿಳಂಬ ಆಗಿದೆ ನೇಹಾ ಕುಟುಂಬಕ್ಕೆ ಇನ್ನು ಸರಿಯಾಗಿ ನ್ಯಾಯ ಸಿಕ್ಕಿಲ್ಲ
ನನ್ನ ಅಕ್ಕನ ಕೊಲೆಗೆ ಸಹ ನ್ಯಾಯ ಬೇಕು ನೇಹಾ ಪ್ರಕರಣದಂತೆ ಆಗಬಾರದು ಆದರೆ
ಸರಿಯಾಗಿ ನನ್ನ ಅಕ್ಕನ ತನಿಖೆ ನಡೆಯಬೇಕು ಆದರೂ ಸಹ ಸಿಐಡಿ ಮೇಲೆ ಅಷ್ಟೊಂದು ಭರವಸೆ ಇಲ್ಲ ಏಕೆಂದರೆ ಒಂದು ಕಡೆ ನೇಹಾ ಕೊಲೆ ಪ್ರಕರಣ ತನಿಖೆ ನೋಡಿದಾಗ ಅನಿಸುತ್ತದೆ ಆದರೆ ಭರವಸೆ ಇದೆ ನೋಡೋಣ ಎಂದ ಅವರು
ಸ್ಥಳೀಯ ಪೊಲೀಸರು ಸಮರ್ಥವಾಗಿ ಅಕ್ಕನ ಕೊಲೆ ಪೂರ್ವ ನಿಭಾಯಿಸಿಲ್ಲ
ಸ್ಥಳೀಯ ಪೊಲೀಸರು ಸರಿಯಾಗಿ ನಿಭಾಯಿಸಿದ್ದರೆ ಅಕ್ಕನಿಗೆ ಈ ಗತಿ ಬರುತಿರಲಿಲ್ಲ ಎಂದ ಅವರು
ಅಂಜಲಿ ಕೊಲೆಗಾರ ಗಿರೀಶ್ ಗೆ ಎನ್ ಕೌಂಟರ್ ಅಥವಾ ಗಲ್ಲಿಗೆ ಹರಿಸಬೇಕು
ಸಿಐಡಿಯಿಂದ ತನಿಖೆ ವಿಳಂಬ ಆದರೆ ಹೋರಾಟ ನಡೆಸುತ್ತೇವೆ
ಇನ್ನು ನಾವು ಹೋರಾಟ ಬಿಟ್ಟಿಲ್ಲ
ಅಕ್ಕ ಅಂಜಲಿ, ನೇಹಾ ಕೊಲೆ ವಿಷಯದಲ್ಲಿ ರಾಜಕಾರಣ ಸಲ್ಲ
ಅಂಜಲಿ ಕೊಲೆಗಾರ ಗಿರೀಶ್ ಹಿಂದೆ ಯಾರು ಇದ್ದಾರೆ ಅಂತಾ ತನಿಖೆ ಆಗಲಿ
ಗಿರೀಶ್ ಹಿಂದೆ ಇನ್ನು ಇದ್ದಾರೆ ಆತ ಒಬ್ಬನೇ ಮಾಡಲು ಸಾಧ್ಯವಿಲ್ಲ.
ಗೀರಿಶ್ ಹಿಂದೆ ಇದ್ದವರಿಗೆ ಕಠಿಣ ಶಿಕ್ಷೆ ಆಗಲಿ ಎಂದರು.