Breaking News

ನನ್ನ ಕೊಲೆಗೆ ಪ್ಲ್ಯಾನ್ ನಡೆದಿತ್ತು: ನಿರಂಜನ ಹಿರೇಮಠ

Spread the love

ನನ್ನ ಕೊಲೆಗೆ ಪ್ಲ್ಯಾನ್ ನಡೆದಿತ್ತು: ನಿರಂಜನ ಹಿರೇಮಠ

ಹುಬ್ಬಳ್ಳಿ,: ನನ್ನ‌ ಏಳ್ಗೆ ಸಹಿಸದವರು
ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು, ಆದರೆ ನನ್ನ ಮಗಳನ್ನು ಕೊಲೆ ಮಾಡಿದರು ಎಂದು ಮೃತ ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ ಹಿರೇಮಠ ಗಂಭೀರ ಪ್ರಮಾಣದ ಆರೋಪ ಮಾಡಿದರು.
ಅಂಜಲಿ ಕೊಲೆ ಖಂಡಿಸಿ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದರು
ನನ್ನ ವಾರ್ಡ್​​ನಲ್ಲಿ ಎರಡು ಕೊಲೆಗಳು ಆಗಿವೆ. ಮೊದಲು ನನ್ನ ಮಗಳ ಕೊಲೆ ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು. ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಜತೆಗೆ ರಕ್ಷಣೆ ಕೊಡಲು ಸರ್ಕಾರಕ್ಕೆ ಆಗಲಿಲ್ಲ. ನಮ್ಮ‌ ಜನಾಂಗಕ್ಕೆ ಜನರು ಬೆಲೆ‌ ಕೊಡುತ್ತಾರೆ. ಆದರೆ ಕೆಲವರು ರಾಜಕೀಯ ಮಾಡಿ ಈ ರೀತಿ ಮಾಡುತ್ತಿದ್ದಾರೆ. ಕಾಣದ ಕೈ ಕೆಲಸ ಮಾಡುತ್ತಿವೆ. ಜನರೆ ನನ್ನ ಕೈ ಹಿಡಿದಿದ್ದಾರೆ. ನನ್ನ ವಾರ್ಡ್​​ನಲ್ಲೇ ಅಕ್ರಮ ಚಟುವಟಿಕೆ ಮಾಡುತ್ತಿದ್ದಾರೆ. ಸರ್ಕಾರ ದಕ್ಷ ಪೊಲೀಸ ಅಧಿಕಾರಿ ನೇಮಿಸಬೇಕು. ಸರ್ಕಾರಕ್ಕೆ ಧಮ್ಮ ಇಲ್ಲ, ಅಂದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ವಾಗ್ದಾಳಿ ಮಾಡಿದ್ದಾರೆ.
ಕೂಲಿ‌ ಮಾಡಿ ಬದುಕುವ ಜನಾಂಗದ ಯುತಿ ಕೊಲೆ ಮಾಡಿದ್ದಾರೆ. ನನ್ನ ಮಗಳ ಬಲಿ ಪಡೆದಿದ್ದಕ್ಕೆ ಇಡೀ‌ ಜಗತ್ತು ಆಕ್ರೋಶ ವ್ಯಕ್ತ ಪಡಿಸಿದರು. ಅನೇಕ ರಾಜಕೀಯ ನಾಯಕರು ಮನೆ ಬರುವುದನ್ನು ತಪ್ಪಿಸಿದರು. ರೇವಣ್ಣ ಅವರು ಮನೆ ಬರುತ್ತಿದ್ದರು ಅವರನ್ನು ಬರದಂತೆ ಮಾಡಿದರು. ವೀಣಾ ಕಾಶಪ್ಪನವರ ಅವರು ಕೂಡ ಮನೆ ಬರುವುದಾಗಿ ಹೇಳಿದ್ದರು. ಆದರೆ ಅವರು ಬರದಂತೆ‌ ಮಾಡಿದರು. ಯಾರೊಂದಿಗೆ ಯಾರು ಮಾತನಾಡಿದ್ದಾರೆ ಎಂದು ಎಲ್ಲ ಫೋನ್ ರೆಕಾರ್ಡ್ ಇವೆ. ಗೃಹ ಸಚಿವರು ಏಕೆ ಸುಮ್ಮನಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಂಗಮ, ಅಂಬಿಗರ ಸಮುದಾಯ ಸೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಗುಂಡಾ, ರೌಡಿ ಶೀಟರ್​ಗಳ ದಂಧೆ ಬಂದ್ ಮಾಡಬೇಕು. ಅಲ್ಲದೆ ರೌಡಿಗಳ ಚಲನವಲನ ಮೇಲೆ‌ ಕಣ್ಣಿಡಬೇಕು. ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು. ಅಂಜಲಿ ಕುಟುಂಬಕ್ಕೆ ಭದ್ರತೆ ನೀಡಬೇಕು. ಅವರು ಕುಟುಂಬಕ್ಕೆ ಒಂದು‌ ಮನೆ, ತಾತ್ಕಾಲಿಕ ಕೆಲಸ ನೀಡಬೇಕು. ಈ ಬಗ್ಗೆ ವಾಗ್ದಾನ ಪತ್ರ ನೀಡಬೇಕು ಎಂದಿದ್ದಾರೆ.


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!