ಅಂಜಲಿ ಹಂತಕ ಗಿರೀಶನನ್ನ ಪೊಲೀಸರು ಪತ್ತೆ ಮಾಡಿದ್ದೇ ಒಂದು ರೋಚಕ
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಕಾರ್ಯಕ್ಕೆ ಜನಮೆಚ್ಚುಗೆ
ಹುಬ್ಬಳ್ಳಿ: ಅಂಜಲಿ ಅಂಬಿಗೇರ್ ಹೆಸರಿನ ಯುವತಿಯನ್ನು ಬರ್ಬರವಾಗಿ ಹತ್ಯೆ ಆರೋಪಿ ಗಿರೀಶ್ ಸಾವಂತ್ ಅಲಿಯಾಸ್ ವಿಶ್ವನನ್ನು ಪೊಲೀಸರು ದಾವಣೆಗೆರೆಯಲ್ಲಿ ಬಂಧಿಸಿ ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಅವನ ಬಂಧನ ಹೇಗೆ ಸಾಧ್ಯವಾಯಿತು ಅನ್ನೋದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ರೇಣುಕಾ ಸುಕುಮಾರ್ ಸಹ ಎಳೆ ಎಳೆಯಾಗಿ ಮಾಹಿತಿ ನೀಡಿದ್ದು ಹುಬ್ಬಳ್ಳಿ ಪೊಲೀಸರ ಕಾರ್ಯ ಇದರಲ್ಲಿ ಶ್ಲಾಘನೀಯ.
ಕಳೆದ 6 ತಿಂಗಳುಗಳಿಂದ ಮೈಸೂರಿನ ಬಾರ್ ಮತ್ತು ರೆಸ್ಟುರಾಂಟೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿಶ್ವನ ಬಳಿ ಮೊಬೈಲ್ ಫೋನ್ ಇರದಿದ್ದ ಕಾರಣ ಅವನನ್ನು ಪತ್ತೆ ಮಾಡುವುದು ಪೊಲೀಸರಿಗೆ ಒಂದು ಸವಾಲಾಗಿತ್ತು. ಪೊಲೀಸರ 8 ತಂಡಗಳನ್ನು ರಚಿಸಿ ವಿಶ್ವನನ್ನು ಪತ್ತೆ ಮಾಡುವ ಕೆಲಸಕ್ಕೆ ಇಳಿಸಲಾಗಿತ್ತು. ಅವನು ದಾವಣಗೆರೆಯಲ್ಲಿರುವ ಬಗ್ಗೆ ಅಲ್ಲಿನ ರೇಲ್ವೇ ಪೊಲೀಸರಿಂದ ಮಾಹಿತಿ ಲಭ್ಯವಾಗಿತ್ತು. ಅಲ್ಲಿಯೂ ಇದ್ದ ತಮ್ಮದೊಂದು ತಂಡ ಅವನನ್ನು ಬಂಧಿಸಿತು ಎಂದು ಕಮೀಶನರ್ ಹೇಳುತ್ತಾರೆ. ವಿಶ್ವ ಮಹಾರಾಷ್ಟ್ರ ಇಲ್ಲವೇ ಗೋವಾಗೆ ಪರಾರಿಯಾಗಿ ಒಂದೆರಡು ವರ್ಷ ಕಾಲ ತಲೆಮರೆಸಿಕೊಳ್ಳುವ ಯೋಚನೆ ಮಾಡಿದ್ದನಂತೆ. ಹೋಟೆಲ್ ಗಳಲ್ಲಿ ಕೆಲಸಕ್ಕೆ ಸೇರಿ ಅಲ್ಲೇ ವಾಸ್ತವ್ಯದ ವ್ಯವಸ್ಥೆ ಮಾಡಿಕೊಳ್ಳುವುದು ಅವನ ಪ್ರವೃತ್ತಿಯಾಗಿತ್ತು. ಇದರಲ್ಲಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಫುಲ್ ವರ್ಕೌಟ್ ಮಾಡಿದ್ದಾರೆ. ತುಂಬಾ ಜಾಣ್ಮೆಯಿಂದ ಬಲೆ ಬೀಸಿದ್ದ ಅವರು ಆರೋಪಿ ಗಿರೀಶ್ ಬಂಧನಕ್ಕೆ ಬಿಸಿದ್ದರು.