Breaking News

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಯಿಂದ ಸುಮಾರು 78 ಮರಗಳು ನೆಲಕ್ಕೆ

Spread the love

ಹುಬ್ಬಳ್ಳಿ:- ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಸುರಿದ ಭಾರಿ ಮಳೆ, ಗಾಳಿಯಿಂದ ಸುಮಾರು 78 ಮರಗಳು ನೆಲಕ್ಕೆ ಉರುಳಿದ್ದು, ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಗಿಡಮರಗಳ ಟೊಂಗೆಗಳು ಸಹ ಹಲವು ಕಡೆಗಳಲ್ಲಿ ಮುರಿದು ಬಿದ್ದಿದ್ದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪಾಲಿಕೆ ಸಿಬ್ಬಂದಿ ಪರಿಹಾರ ಕಾರ್ಯ ಕೈಗೊಂಡರು. ಧರೆಗುರುಳಿದ ಗಿಡ, ಟೊಂಗೆಗಳನ್ನು ಕತ್ತರಿಸಿ ಬೇರೆಡೆ ಸಾಗಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು, ನಾಲಾಗಳಲ್ಲಿ ಕಸ ಹಾಗೂ ಮರದ ಟೊಂಗೆಗಳನ್ನು ಹೊರತೆಗೆಯಲು ಯಂತ್ರ ಹಾಗೂ ನಾಲ್ಕು ಜೆಸಿಬಿಗಳನ್ನು ಉಪಯೋಗಿಸಲಾಯಿತು. ವಿದ್ಯಾನಗರದ ಬಹುಮಹಡಿ ಕಟ್ಟಡಗಳ ನೆಲಮಾಳಿಗೆಯಲ್ಲಿ ತುಂಬಿದ್ದ ನೀರನ್ನು ಸಕ್ಕಿಂಗ್‌ ಯಂತ್ರದಿಂದ ಹೊರತೆಗೆಯುವಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿ ಯಶಸ್ವಿಯಾದರು.
ನಾಲಾಗಳಲ್ಲಿ ನೀರು ಹರಿಯಲು ತೊಂದರೆ ಉಂಟಾದ ಜಾಗದಲ್ಲಿ ಪಾಲಿಕೆಯ ವಲಯ ಕಚೇರಿ ಸಹಾಯಕ ಆಯುಕ್ತರ ಮುಂದಾಳತ್ವದಲ್ಲಿ ಪೌರಕಾಮಿರ್ಕರು ಹಾಗೂ ಜೆಸಿಬಿ ಸಹಾಯದಿಂದ ಕ್ಲಿನಿಂಗ್ ಮಾಡಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 30 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅವುಗಳನ್ನು ಹೆಸ್ಕಾಂ ಸಹಯೋಗದೊಂದಿಗೆ ಸರಿಪಡಿಸಲಾಗಿದೆ. ಧಾರವಾಡದ ಶಿವಾಜಿ ಸರ್ಕಲ್ ಹಾಗೂ ಹುಬ್ಬಳ್ಳಿಯ ಹೊಸೂರಿನಲ್ಲಿ ಎರಡು ಟ್ರಾನ್ಸಾರ್ಮರ್ ಕೆಟ್ಟಿದ್ದು ದುರಸ್ತಿ ಮಾಡಿಸಲಾಗಿದೆ.
ವಲಯ ಸಹಾಯಕ ಆಯುಕ್ತರು, ತೋಟಗಾರಿಕೆ ವಿಭಾಗ ಹಾಗೂ ಆರೋಗ್ಯ ವಿಭಾಗದ ಕಿರಿಯ, ಹಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಪೌರಕಾಮಿರ್ಕ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ನಿರ್ವಹಿಸುತ್ತಿದ್ದಾರೆ
ನಾಲಾಗಳಿಗೆ ಮರದ ಟೊಂಗೆಗಳು ಧರೆಗುರುಳಿದ ಹಾಗೂ ಮನೆಗಳಿಗೆ ನುಗ್ಗಿದ ನೀರಿನ ಕುರಿತು ಕಂಟ್ರೋಲ್ ರೂಂಗೆ 99 ದೂರುಗಳು ಬಂದಿವೆ. ಅವುಗಳನ್ನು ಪರಿಹರಿಸಲಾಗಿದೆ.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!