ಭಾರೀ ಮಳೆಗೆ ಹಲವಾರು ಅವಾಂತರ, 24 ಬೈಕ್ ನೀರಿನಲ್ಲಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಕಮರ್ಷಿಯಲ್ ಕಂಪೌಂಡ್ ಗೋಡೆ ಕುಸಿತವಾದ ಘಟನೆ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ ನಲ್ಲಿ ನಡೆದಿದೆ. ಹುಬ್ಬಳ್ಳಿಯ ಕಿಮ್ಸ್ ಹಿಂಭಾಗ ಇರೋ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಗೋಡೆ ಕುಸಿತವಾಗಿ, ಕಾಂಪೌಂಡ್ ಒಳಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ನಿನ್ನೆ ಅಪಾರ ಪ್ರಮಾಣದ ಮಳೆಯಾಗಿರೋ ಕಾರಣಕ್ಕೆ ಕಂಪೌಂಡ್ ಗೋಡೆ ಕುಸಿತವಾಗಿದೆ. ಕಿಮ್ಸ್ ನಿಂದ ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ಕಾಂಪ್ಲೆಕ್ಸ್ ಕಂಪೌಂಡ್ ಗೋಡೆ ಕುಸಿತವಾಗಿ ಜಲಾವೃತಗೊಂಡಿದೆ. ಕಾಂಪೌಂಡ್ ಒಳಗೆ ನಿಲ್ಲಿಸಿದ್ದ 24 ಬೈಕ್ ಗಳೂ ನೀರೊಳಗೆ ಮುಳುಗಿ ಹಾನಿಯಾಗುವಂತಾಗಿದೆ. ಮಳೆ ಬಂದಾಗ ಕಾಂಪ್ಲೆಕ್ಸ್ ಗೆ ನೀರು ನುಗ್ಗತ್ತೆ. ಅನಾಹುತ ತಪ್ಪಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆ ಮತ್ತು ಕಿಮ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಈ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದಕ್ಕೆ ಹೊಣೆ ಯಾರು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಕಾಂಪೌಂಡ್ ಗಳಲ್ಲಿ ಸಂಗ್ರಹಗೊಂಡ ನೀರನ್ನು ಹೊರ ಹಾಕಲು ಹರಸಾಹಸಪಡುವಂತಾಗಿದೆ.
*ಶ್ರೀ ಚಿತ್ರಲಿಂಗೇಶ್ವರ ಲಿಂಗು*
: ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಜನತೆಗೆ ಸುರಿದ ಮಳೆ ಸಂತಸ ತಂದಿತು.
ಮಳೆಯಿಂದಾಗಿ ಹುಬ್ಬಳ್ಳಿ ನ್ಯೂ ಕಾಟನ್ ಮಾರ್ಕೆಟ್, ದುರ್ಗದಬೈಲ್, ವಿದ್ಯಾನಗರದ ರಸ್ತೆಗಳು ಜಲಾವೃತವಾಗಿದ್ದವು. ನ್ಯೂ ಕಾಟನ್ ಮಾರ್ಕೆಟ್‌ನ ಶ್ರೀ ವೀರಾಂಜನೇಯ ದೇವಸ್ಥಾನದ ಆವರಣದೊಳಗಿರುವ ಶ್ರೀ ಚಿತ್ರಲಿಂಗೇಶ್ವರ ಲಿಂಗು ಮತ್ತು ಗಣೇಶನ ಮೂರ್ತಿ ಸುರಿದ ಮಳೆಯಿಂದ ಜಲಾವೃತವಾಗಿತ್ತು.