ಅಣ್ಣಿಗೇರಿ: ರಾಂಗ್ ರೂಟಲ್ಲಿ ಬಸ್ ತಂದು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸಾವು
ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ ಮಾರ್ಗ ಮಧ್ಯ ಬರುವ ಅಣ್ಣಿಗೇರಿ ಸಮೀಪ ಕೊಂಡಿಕೊಪ್ಪ ಕ್ರಾಸ್ ಬಳಿ ಬಸ್ ಚಾಲಕ ರಾಂಗ್ ರೂಟ್ ಅಲ್ಲಿ ಬಂದು ಬೈಕ್ ಗೆ ಡಿಕ್ಕಿ ಹೊಡೆದು ರಭಸಕ್ಕೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೆ ಎಸ್ ಆರ್ ಟಿ ಸಿ ಬಸ್ ಕೊಂಡಿಕೊಪ್ಪ ಗ್ರಾಮದಿಂದ ಅಣ್ಣಿಗೇರಿಗೆ ಬರುವ ವೇಳೆ ಚಾಲಕ ಗದಗ್ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗಿರುವ ಒನ್ ವೀ ರಸ್ತೆಯಲ್ಲಿ ಬಸ್ಸನ್ನು ಚಾಲನೆ ಮಾಡಿಕೊಂಡು ಬರದೆ ಹುಬ್ಬಳ್ಳಿ ಕಡೆಯಿಂದ ಗದಗ ಕಡೆ ಹೋಗುತ್ತಿರುವ ವನ್ ವೇ ಯಲ್ಲಿ ಅಡ್ಡವಾಗಿ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದ್ದು, ಇನ್ನು ಅದೇ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಬೈಕ್ ಸವಾರ ಕೃಷ್ಣ ಗೌಡ ಅವರ ಬೈಕ್ ಗೆ ಡಿಕ್ಕಿ ಹೊಡೆದಿರುತ್ತಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿರುತ್ತಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಅಣ್ಣಿಗೇರಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಾರೂಢ ಆಲದ ಕಟ್ಟಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಗೌಡಾಯಿಸಿ ಪ್ರಕರಣವನ್ನು ದಾಖಲೆ ಮಾಡಿಕೊಂಡಿದ್ದಾರೆ.