Breaking News

ರಥದ ಚಕ್ರಕ್ಕೆ ಸಿಲುಕಿ ಬಾಬುಸಾಬ್ ಸಾವು

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ
ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ರಥದ ಚಕ್ರಕ್ಕೆ ಸಿಲುಕಿ ಭಕ್ತನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಬಾಬುಸಾಬ ಮಕಾಸಿ (ಹಳ್ಳಿಕೇರಿ) ಮೃತಪಟ್ಟ ಭಕ್ತನಾಗಿದ್ದು
ಬಸವೇಶ್ವರ ಜಯಂತಿ ನಿಮಿತ್ತ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ವೇಳೆ ಈ ಅವಘಡ ನಡೆದಿದೆ. ರಥೋತ್ಸವ ಸಂದರ್ಭದಲ್ಲಿ ಉತ್ತತ್ತಿ ಆರಿಸಿಕೊಳ್ಳುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ರಥದ ಗಾಲಿ ಆತನ ಮೇಲೆ ಹರಿದ ಪರಿಣಾಮ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅಣ್ಣಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.


Spread the love

About Karnataka Junction

    Check Also

    ಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು

    Spread the loveಅಂಜಲಿ ಹಂತಕ ಗಿರೀಶ್ ಸಾವಂತ ಕೊಲೆ ಮಾಡಿದ ಸ್ಥಳ ಮಹಜರು ಇರಿದು ಕೊಲೆಗೈದ ಚಾಕುವಿಗಾಗಿ ಇಂಚಿಂಚು ತಲಾಷ್ …

    Leave a Reply

    error: Content is protected !!