ಸೀಮಾ ಲದವಾ ಮುಂದಾಳತ್ವದಲ್ಲಿ ಬಡವರಿಗೆ,ನಿರ್ಗತಿಕರಿಗೆ, ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

Spread the love

https://youtu.be/lx_4gvI6FYw

ಹುಬ್ಬಳ್ಳಿ: ಮಹಾಮಾರಿ ಅಟ್ಟಹಾಸ ನಡುವೆಯೂ ಪಕ್ಷ ,ಜಾತಿ, ಮತ,ಪಂಥ ಎನ್ನದೇ ಮಾನವೀಯತೆ ನೆಲೆಯ ಮೇಲೆ ಕಷ್ಟ ಕಾಲದಲ್ಲಿರುವ ಬಡವರು- ನಿರ್ಗತಿಕರಿಗೆ, ಅಶಾ, ಅಂಗನವಾಡಿ,ಕಾರ್ಯಕರ್ತೆಯರಿಗೆ ಹಾಗೂ ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಲ್ಲಿ ತೊಡಗಿದ್ದಾರೆ ಧಾರವಾಡ ಬಿಜೆಪಿ ಮಹಿಳಾ ಮೂರ್ಚಾ ಪ್ರಧಾನ ಕಾರ್ಯದರ್ಶಿ ಸೀಮಾ ಲದವಾ ನೇತೃತ್ವದಲ್ಲಿ
ಹುಬ್ಬಳ್ಳಿ ಮಹಾನಗರ ಪಾಲಿಕೆಯ ವಾರ್ಡ್ 44(57) ವ್ಯಾಪ್ತಿಯಲ್ಲಿ ಅರವಿಂದ ನಗರ, ಕೆಎಚ್ ಬಿ ಕಾಲೋನಿ‌ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ.
ಯಾವುದೇ ಪ್ರಚಾರ ಬಯಸದ ಸೀಮಾ ಅವರು ಆಹಾರ ಕಿಟ್ ವಿತರಣೆ ಜೊತೆಗೆ ಕೋವೀಡ್ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾಯಕದಲ್ಲಿ ತೊಡಗಿದ್ದಾರೆ. ಲಾಕ್‌ಡೌನ್‌ನಂತಹ ಸಂಕಷ್ಟದ ಸಮಯದಲ್ಲಿಯೂ ಪ್ರಾಮಾಣಿಕವಾಗಿ ಹೇಗೆಲ್ಲಜನರ ಸೇವೆ ಮಾಡಬೇಕು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಬಡವರು-ನಿರ್ಗತಿಕರು, ವೃದ್ಧರ ಸಮಸ್ಯೆಯನ್ನು ಅರಿತುಕೊಂಡು ಎರಡನೇ ಹಂತದಲ್ಲಿಆಹಾರದ ಕಿಟ್‌ಗಳನ್ನು ವಿತರಿಸುವ ಮೂಲಕ ಹಸಿದವರಿಗೆ ಅನ್ನದಾತರು ಆದರು.

ಲಾಕ್‌ಡೌನ್‌ ವೇಳೆಯಲ್ಲಿಅಷ್ಟೇ ಅಲ್ಲದೇ, ಯಾವುದೇ ಸಂದರ್ಭದಲ್ಲೂತಮ್ಮ ನಿವಾಸಕ್ಕೆ ನೆರವು ಕೋರಿ ಬರುವವರಿಗೆ ಜಾತಿ, ಮತ ನೋಡದೇ ಸಹಾಯ ಮಾಡುವ ಮಾನವೀಯತೆ ಹೊಂದಿದ್ದಾರೆ. ವಿದ್ಯಾಭ್ಯಾಸ, ಆರೋಗ್ಯ, ಮದುವೆ, ಬಡತನ ಸೇರಿದಂತೆ ಇನ್ನಿತರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಹಾಯ ಮಾಡುತಿದ್ದಾರೆ. ಮಾನವೀಯತೆ ನೆಲೆಗಟ್ಟಿನ ಮೇಲೆ ಬಡವರಿಗೆ ಆಸರೆಯಾಗಿದ್ದಾರೆ. ಲಾಕ್‌ಡೌನ್‌ದಿಂದ ಅಡುಗೆ ಮಾಡುವವರು, ಬಟ್ಟೆ ತೊಳೆಯುವವರು, ಕಟ್ಟಡ ಕಾರ್ಮಿಕರು, ವಾಚ್‌ಮನ್‌ಗಳು, ಹೊರ ರಾಜ್ಯದಿಂದ ಬಂದು ಸಿಲುಕಿದ ಅಲೆಮಾರಿಗಳು, ಮಂಗಳಮುಖಿಯರು ಕೈಯಲ್ಲಿಹಣವಿಲ್ಲದೇ ಕಂಗಾಲಾಗಿದ್ದರು. ಇವರ ಸಂಕಷ್ಟಗಳನ್ನೆಲ್ಲಖುದ್ದಾಗಿ ಗಮನಿಸಿ ಅವರಿಗೆ ನೆರವು ನೀಡಿದ್ದಾರೆ. ಹುಡಾ ಅಧ್ಯಕ್ಷ ನಾಗೇಶ ಕಲಬುರಗಿ, ವಾಕರಾರಸಂಸ್ಥೆ ಮಾಜಿ ನಿರ್ದೇಶಕ , ಸಾಬೂನು ಮತ್ತು ಮಾರ್ಜಕ ಕಂಪನಿಯ ನಿರ್ದೇಶಕ ಮಲ್ಲಿಕಾರ್ಜುನ ಸಾಹುಕಾರ್, ಮುಖಂಡರಾದ ಕೃಷ್ಣಾ ಗಂಡಗಾಳ್ಕರ, ಸುಭಾಷ ಅಕ್ಕಲಕೋಟಿ, ಪ್ರಕಾಶ ಕಟ್ಟೀಮನಿ, ಅವಿನಾಶ್ ಹರಿವಾಣ, ಈಶ್ವರ ಜಿತೂರಿ ಮುಂತಾದವರಿದ್ದರು.


Spread the love

Leave a Reply

error: Content is protected !!