ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಿತಾ ರಾಜ್ಯಕ್ಕೇ ಮೊದಲ ರಾಂಕ್
ಬಾಗಲಕೋಟ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಸರಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ರ್ಯಾಂಕ್ ಪಡೆದಿದ್ದಾಳೆ.
625/625 ಅಂಕ ಪಡೆದು ಹಿಂದುಳಿದ ವರ್ಗಗಳ ಇಲಾಖೆಗೆ ಗೌರವ ತಂದಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಜಿಪಂ. ಸಿಇಓ ಶಶಿಧರ ಕುರೇರ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದೆ ದೇಶದ ಅತ್ಯುನ್ನತ ಪರೀಕ್ಷೆ ಯುಪಿಎಸ್ ಸಿ ಪಾಸು ಮಾಡುವ ಮನದಿಂಗಿತ ಅಂಕಿತಾ ವ್ಯಕ್ತಪಡಿಸಿದ್ದಾಳೆ. ತಂದೆ ಕೃಷಿಕ ತಾಯಿ ಗೃಹಿಣಿ. ಮಗಳ ವಿದ್ಯಶಭ್ಯಾಸಕ್ಕೆ ಸರಕಾರದ ನೆರವು ಈಗ ಅವಳ ಪ್ರತಿಭಾ ಅನಾವರಣಕ್ಕೆ ಕಾರಣವಾಗಿದೆ.
IAS ಪರೀಕ್ಷೆ ಪಾಸು ಮಾಡುವ ದಿಸೆಯಲ್ಲಿ ಅವಳಿಗೆ ಸಹಾಯ ಸಹಕಾರ ಮಾಡಲಾಗುವುದು, ಅವಳ ಸಾಧನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಅವಳು ಕಲಿತ ವಸತಿ ಶಾಲೆಯ ಶಿಕ್ಷಕರು ಸಿಬ್ಬಂಧಿಗೂ ಸತ್ಕರಿಸಲಾಗುವುದು ಎಂದು ಸಿಇಓ ಸಂತಸ ವ್ಯಕ್ತಪಡಿಸಿದ್ದಾರೆ.