ಶಾಸಕ ವಿನಯ ಕುಲಕರ್ಣಿಗೆ ಮತ ಹಾಕಲು ಅನುಮತಿ
ಮತಗಟ್ಟಿ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್
ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿಗೆ ಮತದಾನ ಮಾಡಲು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದ ಹೈಕೋರ್ಟ್ ಹಿನ್ನಲೆಯಲ್ಲಿ ಇದರ ಜೊತೆಗೆ
ಇಂದು ನಡೆಯುತ್ತಿರುವ ಧಾರವಾಡ ಲೋಕಸಭೆ ಕ್ಷೇತ್ರದ ಚುನಾವಣೆ ಮತದಾನ ಹಿನ್ನೆಲೆ ಅನುಮತಿ ಕೊಡಲಾಗಿದೆ ಕಾರಣ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿನಯ ಕುಲಕರ್ಣಿ ನೇರವಾಗಿ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿ ನಂತರ ನೇರವಾಗಿ ಧಾರವಾಡ ಜಿಲ್ಲೆ ಬಿಟ್ಟು ಹೊರ ಬರಬೇಕು ಎಂದು ನ್ಯಾಯಮೂರ್ತಿ ಎಂ.ಜಿ. ಉಮಾಅವರಿಂದ ನಿರ್ದೇಶನ ಇದೆ.ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಕೊಲೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ವಿನಯ ಕುಲಕರ್ಣಿ
ಸುಪ್ರೀ ಕೋರ್ಟ್ ಜಾಮೀನು ನೀಡಿತ್ತು. ಆದರೆ, ಧಾರವಾಡ ಜಿಲ್ಲೆ ಪ್ರವೇಶ ಮಾಡಬಾರದು ಎಂದು ಷರತ್ತು ವಿಧಿಸಿತ್ತು. ಇದರಿಂದ ಮತದಾನ ಮಾಡಲು ಧಾರವಾಡ ಜಿಲ್ಲೆ ಪ್ರವೇಶ ಮಾಡಲು ಅನುಮತಿ ನೀಡುವಂತೆ ವಿನಯ ಕುಲಕರ್ಣಿ ಸಲ್ಲಿಸಿದ್ದ ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು.ಹಾಗಾಗಿ, ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಮತ ಚಲಾಯಿಸಿ ಮತದಾನ ಕೇಂದ್ರದಿಂದ ತೆರಳಬೇಕು.
ಧಾರವಾಡ ಜಿಲ್ಲೆ ಬಿಟ್ಟು ಹೊರಗೆ ಹೋಗಬೇಕುಈ ವೇಳೆ ಯಾವುದೇ ಸಮಸ್ಯೆ ಸೃಷ್ಟಿಸಬಾರದು ಎಂದು ಮೌಖಿಕವಾಗಿ ವಿನಯ ಕುಲಕರ್ಣಿಗೆ ಎಚ್ಚರಿಕೆ ಸಹ ನೀಡಲಾಗಿದೆ.
ಮತಗಟ್ಟೆ 75 ರ ಧಾರವಾಡದ ಶಾರದಾ ಶಾಲೆಯಲ್ಲಿನ ಮತಗಟ್ಟೆ
ಸ್ಥಳದಲ್ಲಿ ಭಾರೀ ಬಿಗಿಭದ್ರತೆ
ಹೆಚ್ಚಿನ ಪೊಲೀಸರ ನಿಯೋಜನೆ
ಸ್ಥಳದತ್ತ ಆಗಮಿಸಿರೋ ವಿನಯ ಅಭಿಮಾನಿಗಳು
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಸಾಹಸ ಪಡುತಿದ್ದಾರೆ