Breaking News

ಸ್ವಾರ್ಥ , ನೀಚ, ಜಾತಿವಾದಿ ರಾಜಕಾರಣನಿಗೆ ಅಂತ್ಯ ಹಾಡಿ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಅಭಿಮತ

Spread the love

ಸ್ವಾರ್ಥ , ನೀಚ, ಜಾತಿವಾದಿ ರಾಜಕಾರಣನಿಗೆ ಅಂತ್ಯ ಹಾಡಿ
ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಅಭಿಮತ

ಹುಬ್ಬಳ್ಳಿ: ಜನ ಸಾಮಾನ್ಯರಿಗೆ ನಿಲುಕದ , ನಾಡಿನ ಒಳಿತನ್ನು ಬಯಸದೆ ಇರುವ ಕೆಟ್ಟ ರಾಜಕಾರಣಿಯನ್ನು ಸ್ವಾಭಿಮಾನಿ ಮತದಾರರು ಮಟ್ಟ ಹಾಕಬೇಕು ಎಂದು ಶಿರಹಟ್ಟಿ ಬಾಳೆಹೊಸೂರ ಭಾವೈಕ್ಯ ಪೀಠದ ಪರಮ ಪೂಜ್ಯ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಗಾಂಧಿ ಮಾರುಕಟ್ಟೆಯಲ್ಲಿ ಹಮ್ಮಿಕೊಂಡ ಬೃಹತ್ ಪ್ರಮಾಣದ ಸ್ವಾಭಿಮಾನಿ ಮತದಾರರ ಸಮಾವೇಶವನ್ನು ಉದ್ದೇಶಿಸಿ ಅವರು ಈಗಿನ ಧಾರವಾಡ ಸಂಸದ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ತನ್ನ ಹಿಂಬಾಲಕರನ್ನು , ತನ್ನ ಸಮಾಜದವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವ , ನಮ್ಮ ನಾಡಿನ ದಾರ್ಶನಿಕರನ್ನೂ ನಾಶ ಮಾಡಿ ಬೇರೆ ರಾಜ್ಯದ ದಾರ್ಶನಿಕರು ಬೆಂಬಲಿಸುವ ಜಾತಿ ರಾಜಕಾರಣ ಮಾಡುವಂತಹ ಪ್ರಹ್ಲಾದ ಜೋಶಿಯವರಿಗೆ ತಾವು ಸ್ವಾಭಿಮಾನಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಬೇಕು ಎಂದರು.
ನಮ್ಮ ಭಾಗದ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೆ , ಸಾಮಾನ್ಯ ವ್ಯಕ್ತಿಗೂ ಸಂಪರ್ಕಕ್ಕೆ ಸಿಗದೆ ಧಾರವಾಡ ಭಾಗದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ನೌಕರಿಗಳಿಗೆ ಸೇರಿಸದೆ ಇರುವ ಹಾಗೂ ಜನ ಸಾಮಾನ್ಯರನ್ನು ಅಲ್ಪ ಸ್ವಲ್ಪ ಕೆಲಸ ಕಾರ್ಯಗಳಿಗೆ ಅಲೆದಾಡಿಸಿದ ಈಗಿನ ರಾಜಕಾರಣಿಯನ್ನು ಸೋಲಿಸುವ ಪ್ರತಿಜ್ಞೆ ಮಾಡಿ ಎಂದರು.
ಈ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ ಮಾರಾಟಕ್ಕೆ ಮಾರಿಕೊಳ್ಳದೆ ಪ್ರಜ್ಞವಂತಿಕೆಯಿಂದ ತಮಗೆ ನಿರಂತರ ಸಂಪರ್ಕಕ್ಕೆ ಸಿಗುವ ನಿಮ್ಮ ತೊಂದರೆಗಳಿಗೆ ಸ್ಪಂದಿಸುವ ಯೋಗ್ಯರಾದ ಅಭ್ಯರ್ಥಿಯನ್ನು ಮತ ಚಲಾಯಿಸಿ ಎಂದು ಹೇಳಿದರು.
ನಾವು ಸ್ವಾಮಿಗಳು ಸ್ವಾಭಿಮಾನಿಗಳಾಗಿದ್ದೇವೆ, ನಮಗೆ ಯಾವದೇ ರಾಜಕೀಯದ ಆಸೆಯಿಲ್ಲ, ನಾವು ಹಣಕ್ಕಾಗಿ ರಾಜಕಾರಣ ಮಾಡುವುದಿಲ್ಲ, ನಮಗೆ ಇಂದಿನ ಕೆಟ್ಟ ರಾಜಕೀಯ ಸ್ಥಿತಿ ಮಾತನಾಡುವಂತೆ ಮಾಡಿದೆ ನಾವು ಯಾವ ರಾಜಕಾರಣಿಯ ಋಣದಲ್ಲಿ ಇಲ್ಲ . ಆದರೆ ಪ್ರಹ್ಲಾದ ಜೋಶಿ ಅವರು ಒಂದು ಕೆಲಸಕ್ಕೆ ದೂರವಾಣಿ ಸಂಪರ್ಕ ಮಾಡಿದಾಗ ನಿಮ್ಮ ಲಿಂಗಾಯತ ಜಾತಿಯ ರಾಜಕಾರಿಣಿಗೆ ಕರೆ ಮಾಡಿ ಕೆಲಸ ಮಾಡಿಕೊಳ್ಳಿ ಎಂದು ಲಿಂಗಾಯತರನ್ನು ಅವಮಾನ ಮಾಡಿದ ಜೋಶಿಗೆ ತಾವುಗಳು ತಕ್ಕ ಪಾಠ ಕಲಿಸಬೇಕು ಎಂದರು.
ಈ ಬಾರಿಯ ಚುನಾವಣೆಯಲ್ಲಿ ಜೋಶಿಗೆ ಸೋಲಿಸುವರೆಗೂ ನಾನು ಮಾಲಿ ಧರಿಸುವುದಿಲ್ಲ ಎಂದು ಹೇಳಿದರು.
ಇದು ಬಿಜೆಪಿ ಮತ್ತು ನನ್ನ ವಿರುದ್ಧ ಚುನಾವಣೆ ಅಲ್ಲ , ಇದು ನನ್ನ ಹಾಗು ಪ್ರಹ್ಲಾದ ಜೋಶಿ ವ್ಯಕ್ತಿತ್ವದ ವಿರುದ್ಧ ಚುನಾವಣೆ ಹಾಗಾಗಿ ತಾವುಗಳು ಜೋಶಿ ಬಿಟ್ಟು ನಿಮ್ಮ ಕೆಲಸ ಕಾರ್ಯಗಳಿಗೆ ನಮ್ಮ ಭಾಗದ ಸಂಸ್ಕೃತಿ ಪರಂಪರೆ ಉಳಿಸಿಕೊಳ್ಳುವ ಯಾರನ್ನು ತುಳಿಯದೆ ಇರುವ ನಿರಂತರ ಸಂಪರ್ಕಕ್ಕೆ ಸಿಗುವ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಮ್ಮ ಧಾರವಾಡ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಹಾದಿಯಲ್ಲಿ ತರೋಣ ಮುಂದಿನ ದಿನಗಳಲ್ಲಿ ಯಾವ ಹೆಣ್ಣು ಮತ್ತು ಗಂಡು ಮಗು ಶಿಕ್ಷಣ , ಉದ್ಯೋಗದಿಂದ ವಂಚಿತರಾಗದಂತೆ ಅದ್ಭುತ ಘೋಷಣೆಗಳನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮ ಈ ಆಂದೋಲನ ಈಗಿನ ಚುನಾವಣಾ ಸಂದರ್ಭಕ್ಕೆ ಮಾತ್ರ ಸೀಮಿತವಲ್ಲ ರಾಜ್ಯದ ಹಿತದೃಷ್ಟಿಯಿಂದ ನಾವು ನಿರಂತರ ಭ್ರಷ್ಟ ರಾಜಕಾರಣಿಗಳ ವಿರುದ್ಧ ಧ್ವನಿ ಎತ್ತುತ್ತೇವೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಪಂಚಗೃಹ ಹಿರೇಮಠ ಸಿದ್ದೇಶ್ವರ ಮಹಾಸ್ವಾಮಿಗಳು, ಸವಣೂರಿನ ಭಾವೈಕ್ಯ ಮಠದ ಸ್ವಾಮಿ, ಬಲೆಹೊಸೂರ ಭಾವೈಕ್ಯ ಮಠದ ಸ್ವಾಮಿಗಳು ಹಾಗು ಇತರೆ ಭಾವೈಕ್ಯ ಪೀಠದ ಮಹಾಸ್ವಾಮಿಗಳು ಮತ್ತು ಅಪಾರ ಪ್ರಮಾಣದ ಜನಸ್ತೋಮ ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!