Breaking News

ಪ್ರಧಾನಿ ನರೇಂದ್ರ ಮೋದಿ ಮಾತುಗಳು ಸಂವಿಧಾನದ ಗೆರೆಗಳನ್ನು ದಾಟಬಾರದು- ಜಕ್ಕಪ್ಪನವರ

Spread the love

ಪ್ರಧಾನಿ ನರೇಂದ್ರ ಮೋದಿ ಮಾತುಗಳು ಸಂವಿಧಾನದ ಗೆರೆಗಳನ್ನು ದಾಟಬಾರದು- ಜಕ್ಕಪ್ಪನವರ

ಸಂವಿಧಾನ ಹಕ್ಕುಗಳನ್ನು ರಕ್ಷಣೆ ಮಾಡುವಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಮನವಿ

ಹುಬ್ಬಳ್ಳಿ: ಲೋಕಸಭಾ ಚುನಾವಣೆ 2024 ರ ಕಾಂಗ್ರೆಸ್ಸ ಪ್ರಣಾಳಿಕೆ ಮುಸ್ಲಿಂ ಲೀಗ್ ನ ಪ್ರಣಾಳಿಕೆ ಎಂದು ಅಪಹಾಸ್ಯ ಮಾಡುವ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಓದಿಲ್ಲವೆಂದು ಭಾವಿಸದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರುವ ಜನಪರ ಅಶ್ವಾಸನೆಗಳು ಮತದಾರರನ್ನು ಕಾಂಗ್ರೆಸ್ಸ ಕಡೆ ಒಲವು ತೋರಿಸುತ್ತಿರುವ ವಾಸ್ತವ ಸಂಗತಿ ತಿಳಿದು ಹತಾಶಯರಾಗಿ ತಾವು ಅಲಂಕರಿಸಿರುವ ಪ್ರಧಾನ ಮಂತ್ರಿ ಪಟ್ಟಕ್ಕೆ ಅವಮಾನ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ಇಲಾಖೆ ರಾಷ್ಟ್ರೀಯ ಸಂಯೋಜಕ ಎಫ್ ಹೆಚ್ ಜಕ್ಕಪ್ಪನವರ ಅಭಿಪ್ರಾಯ ಪಟ್ಟಿದ್ಧಾರೆ.
ಈ ಕುರಿತು ಮಾತನಾಡಿದ ಅವರು
ಕಾಂಗ್ರೆಸ್ ಪಕ್ಷ ಐದು ನ್ಯಾಯ ಗ್ಯಾರಂಟಿಗಳನ್ನು ನೀಡಿದೆ. ಯುವಕರಿಗೆ ಉದ್ಯೋಗ ಮತ್ತು ಉದ್ಯೋಗ ಸಿಗುವವರೆಗೆ ಯುವನಿಧಿ ನೀಡಿ ಯುವ ಸಮುದಾಯವನ್ನು ಹತಾಶಯರಾಗದಂತೆ ಕಾಪಾಡಿ ಈ ಶಕ್ತಿಯನ್ನು ರಾಷ್ಟ್ರ ಕಟ್ಟಲು ಸದ್ಬಳಕೆ ಮಾಡುವದು ಕಾಂಗ್ರೆಸ್ಸ ಇಚ್ಛೆಯಾಗಿದೆ. ಅನ್ನದಾತ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವದು. ಪ್ರತಿ ಬಡಕುಟುಂಬದ ಯಜಮಾನಿಗೆ ಪ್ರತಿ ವರ್ಷ ಒಂದು ಲಕ್ಷ ಸಹಾಯಧನ; ಭಾರತೀಯ ಸೈನ್ಯ ಸೇರಿದ ಯುವಕರಿಗೆ ಖಾಯಂ ಸೇವೆ ಮತ್ತು ಇತರ ಸೌಲಭ್ಯಗಳ ವಿಸ್ತರಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕಾಂಗ್ರೆಸ್ಸ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಮೋದಿಯವರು ಲಾಭ ಮಾಡುತ್ತಿದ್ದ 26 ಸರ್ಕಾರಿ ಬ್ಯಾಂಕ್ ಗಳನ್ನು 6 ಬ್ಯಾಂಕಗಳಲ್ಲಿ ವಿಲೀನಗೊಳಿಸಿ, ಲಾಭ ಗಳಿಸುತ್ತಿದ್ದ ಸಾರ್ವಜನಿಕ ಉದ್ಯಮಗಳನ್ನು ಮೋದಿ ತಮ್ಮ ಉದ್ಯಮಿ ಗೆಳೆಯರ ವಶಕ್ಕೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರ ಮೀಸಲಾತಿಗೆ ಕೂಡಲಿಪೆಟ್ಟು ಕೊಟ್ಟು ಸಂವಿಧಾನದ ಸದಾಶಯಗಳನ್ನು ಬುಡುಮೇಲು ಮಾಡಿದ ಮೋದಿಯವರ ದಲಿತ ವಿರೋಧಿ ನೀತಿಯನ್ನು ಅರ್ಥ ಮಾಡಿಕೊಂಡು ದಲಿತರು, ಆದಿವಾಸಿ ಮತ್ತು ಹಿಂದುಳಿದ ವರ್ಗದ ಸಮುದಾಯಗಳು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಂವಿಧಾನ ಹಕ್ಕುಗಳನ್ನು ರಕ್ಷಿಸಬಲ್ಲ ಕಾಂಗ್ರೆಸ್ಸ ಪಕ್ಷದ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!