Breaking News

ಸದ್ಯದ ಪರಿಸ್ಥಿತಿ ಬಿಜೆಪಿ ೨೦೦ ಪ್ಲಸ್ ಅಷ್ಟೇ- ಮಾಜಿ ಸಿಎಂ ವೀರಪ್ಪ ಮೊಯ್ಲಿ

Spread the love

ಸದ್ಯದ ಪರಿಸ್ಥಿತಿ ಬಿಜೆಪಿ ೨೦೦ ಪ್ಲಸ್ ಅಷ್ಟೇ- ಮಾಜಿ ಸಿಎಂ ವೀರಪ್ಪ ಮೊಯ್ಲಿ

ಹುಬ್ಬಳ್ಳಿ:ಚುನಾವಣೆ ‌ಆರಂಭದಲ್ಲಿ‌ ಕೇಂದ್ರ ಬಿಜೆಪಿ ನಾಯಕರು ತಂಬಾ ಹುರುಪಿನಲ್ಲಿದ್ದರು 4ನೂರು ಪ್ಲಸ್ ಅಂತಿದ್ದರು, ಈಗ ಬಿಜೆಪಿ 200 ಸೀಟ್ ಬರೋದು ಡೌಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿ ಬಿಜೆಪಿ ೨೦೦ ಪ್ಲಸ್ ಅಷ್ಟೇಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ಮೋದಿ ಅವಧಿಯಲ್ಲಾಗಿದೆ ಪ್ರಧಾನಿ ಮೋದಿಯವರು ಕ್ಯಾಬಿನೆಟ್ ಪ್ರಮುಖ‌ ಸಚಿರಾಗಿದ್ದ ಜೋಶಿ ಮೇಲೆ ನಿರೀಕ್ಷ ತುಂಬಾ ಇತ್ತು ಕರ್ನಾಟಕದ ಜನತೆ ಪ್ರಹ್ಲಾದ್ ಜೋಶಿ ಅವರ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ವಿ
ಆದರೆ ಅವರು ನಾಲ್ಕು ಬಾರಿ ಸಂಸದರಾದ್ರೂ ನಿರೀಕ್ಷಿತ ಯೋಜನೆ ತಂದಿಲ್ಲನೀರಾವರಿ ಯೋಜನೆಗಳಿಗೆ ನಿರೀಕ್ಷಿತ ಮಟ್ಟದ ಅನುದಾ‌ನ ತರಲಿಲ್ಲ
ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಯಾವ ಪುರುಷಾರ್ಥಕ್ಕೆ ಈ ಬಾರಿ ಆಯ್ಕೆ ಮಾಡಬೇಕುಈ ಭಾಗದಲ್ಲಿ ಫ್ಲಡ್ ಸೇರಿ ಹಲವಾರು ಸಮಸ್ಯೆಗಳು ಈ ಹಿಂದೆ ಈ ಕಡೆ ಆಗಿವೆ
ಕರ್ನಾಟಕದ ಸಮಸ್ಯೆ ವಿಚಾರವಾಗಿ ಕೇಂದ್ರದಲ್ಲಿ ಧ್ವನಿಯಾಗಬೇಕಿತ್ತು
ಆದರೆ ಅಂತಹ ಯಾವುದೇ ಧ್ವನಿ ಇವರು‌ ಮಾಡಲ್ಲಿಕಾಂಗ್ರೆಸ್ ಟೀಕೆಗಳಿಗೆ ಮಾತ್ರ ಪ್ರಹ್ಲಾದ್ ಜೋಶಿ ಸಿಮಿತವಾಗಿದ್ದಾರೆ
ಜೋಶಿಯವರಿಗೆ ಧಾರವಾಡ ಅಂಕೋಲಾ ರೈಲ್ವೇ ಪೂರ್ಣ ಮಾಡಲಿಲ್ಲ ಉತ್ತರ‌ ಕರ್ನಾಟಕಕ್ಕೆ ಈ ರೈಲ್ವೆಯಿಂದ ತುಂಬಾ ಅನುಕೂಲ ಆಗುತಿತ್ತುಆರ್ಥಿಕ ಚಟುವಟಿಕೆಗೆ ತುಂಬಾ ವೇಗ ಬರುತಿತ್ತು
ಈ ರೈಲ್ವೆ ಯೋಜನೆ ಯಶಸ್ವಿಗೆ ನಾವು ಅಗತ್ಯ ಸಹಕಾರಕ್ಕೆ ಸಿದ್ಧವಾಗಿದ್ವಿ
ಆದರೆ ಧಾರವಾಡ ಸಂಸದರು ಅದರ ಬಗ್ಗೆ ನಮ್ಮ‌ ಬಳಿ ಒಂದು ಬಾರಿಯು ಚರ್ಚೆ ಮಾಡಲಿಲ್ಲ ಎಂದ ಅವರು
ಬರ ಪರಿಹಾರ ವಿಚಾರದಲ್ಲೂ ಕೇಂದ್ರ ಸಚಿವರು‌ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ
ನಾವು ನ್ಯಾಯಾಲಯಕ್ಕೆ ಹೋದ ಮೇಲೆ ಈ ಬಾರಿಯ ಬರ ಪರಿಹಾರ ಇತ್ತೀಚೆಗೆ ನೀಡಿದ್ದಾರೆ
ಬರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟಗೆ ಹೋದ ಮೇಲೆ ಅನುದಾನ ಬಂದಿರೋದು ಇತಿಹಾಸ
ಭಾರತದ ಇತಿಹಾಸದಲ್ಲಿ ಇಂತಹ‌ ಘಟನೆ ನಡೆದಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು
ಮಹದಾಯಿ ಯೋಜನೆ ಜಾರಿ ಮಾಡುವುದಾಗಿ ಮೋದಿಯವರು ಹೇಳಿದರು ಯಡಿಯೂರಪ್ಪ ಯೋಜನೆ ಜಾರಿ ಮಾಡುವುದಾಗಿ ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದ್ರೂ
ಹುಬ್ಬಳ್ಳಿಯಲ್ಲಿಯೇ ಬಿಎಸ್‌ವೈ ಅವರು ಈ ಮಾತು ಹೇಳಿದರು
ಆದರೆ ಎಲ್ಲಿ ಯೋಜನೆ ಜಾರಿ ಮಾಡಿದ್ದಾರೆ ಇದರ ಜೊತೆಗೆ
ಮೇಕೆದಾಟು ಮಹದಾಯಿ ಯೋಜನೆಯಿಂದ ಕುಡಿಯುವ ನೀರು ಸಮಸ್ಯೆ ಜತೆಗೆ ಕೈಗಾರಿಕೆ ಅಭಿವೃದ್ಧಿ ಆಗುತ್ತವೆಪ್ರಧಾನಿ ನರೇಂದ್ರ ಮೋದಿಯವರು ರೈತರ‌ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು
ಆದರೆ ಎಲ್ಲಿ ರೈತರ ಆದಾಯ ದ್ವಿಗುಣವಾಗಿದೆ
ವಿದೇಶಕ್ಕೆ ಹೋಗಿತ್ತಿದ್ದ ನಮ್ಮ ರೈತ ಉತ್ಪನಗಳ ರಪ್ತು ನಿಷೇಧ ಮಾಡಿದ್ದಾರೆ
ಕೇಂದ್ರ ಬಿಜೆಪಿ ಆಡಳಿತದಲ್ಲಿ ಶ್ರೀಮಂತರಷ್ಟೇ ಶ್ರೀಮಂತರಾಗುತ್ತಿದ್ದಾರೆ
ಬಡವರು ಬಡವರಾಗಿಯೇ ಉಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ
ನಮ್ಮ ಯುಪಿಎ ಅಧಿಕಾರವಧಿಯಲ್ಲಿ ಎಲ್ ಪಿ ಜಿ ರೇಟ್ ಕಡಿಮೆ ಇತ್ತು
ಆದರೆ ಈಗ ಎಲ್‌ಪಿಜಿ ಬೆಲೆ ಎಲ್ಲಿಗೆ ಹೋಗಿದೆ..?ಮೋದಿಯವರ ಆಡಳಿತ‌ ಅವಧಿಯಲ್ಲಿ ಪ್ರಜಾಪ್ರಭುತ್ವ ಆತಂಕದಲ್ಲಿದೆ
ಜನತೆ ಯೋಚನೆ ಮಾಡಿ ತಮ್ಮ‌ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!