https://youtu.be/twf0IJo5WOY
ಹುಬ್ಬಳ್ಳಿ; ರಾಜ್ಯದ ಎಲ್ಲ ಶಿಕ್ಷಕರಿಗೂ ದಿನದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಬೇಕು ಎಂದು
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಕರ್ನಾಟಕ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘಗಳ ಹುಬ್ಬಳ್ಳಿ ಯಿಂದ ಎಲ್ಲ ಹಂತದ ಪದಾಧಿಕಾರಿಗಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು .
ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ ಅವರು ಮತ್ತು ಇತರ ಪದಾಧಿಕಾರಿಗಳು ಈ ಕುರಿತು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ಹೇಳಿಕೆ ನೀಡಿ ಜೂನ್ 21 ರಿಂದ ರಾಷ್ಟ್ರಾದ್ಯಂತ ಎಲ್ಲ ನಾಗರಿಕರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ಹಾಕುವಂಥ ಕಾರ್ಯಕ್ರಮವನ್ನು ಘೋಷಿಸಿದ್ದಾರೆ ಈ ದಿಸೆಯಲ್ಲಿ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳನ್ನು ಅಭಿನಂದಿಸುತ್ತಾ ನಮ್ಮ ರಾಜ್ಯದಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಅವರಿವರೆನ್ನದೆ ಎಲ್ಲ ಶಿಕ್ಷಕರಿಗೂ ತಾವುಗಳು ಜೂ. 21 ರಿಂದ ಪ್ರಾರಂಭವಾಗುವ ಲಸಿಕಾಕರಣ ಹಾಕುವ ಶಿಬಿರದಲ್ಲಿ ಪ್ರಥಮ ಆದ್ಯತೆಯಲ್ಲಿ ಗಂಭೀರವಾಗಿ ಪರಿಗಣಿಸಿ ಶಾಲೆಗೆ ತೆರಳುವ ಮುನ್ನ ಶಾಲೆ ಆರಂಭಿಸುವ ಮುನ್ನ ನಮ್ಮೆಲ್ಲಾ ಶಿಕ್ಷಕರಿಗೆ ನೂರಕ್ಕೆ ನೂರರಷ್ಟು ಶಿಕ್ಷಕರಿಗೆ ಹಾಗೂ ಅವರ ಕುಟುಂಬದವರಿಗೂ ವ್ಯಾಕ್ಸಿನ್ ನೀಡಬೇಕು. ವಾರದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಹಾಕುವುದರಿಂದ ಕಡಿಮೆ ಸಮಯದ ಅವಧಿಯಲ್ಲಿ ಹೆಚ್ಚು ಶಿಕ್ಷಕರಿಗೆ ನೂರಕ್ಕೆ ನೂರಷ್ಟು ಲಸಿಕೆ ಪಡೆಯದಂತಹ ಎಲ್ಲಾ ಶಿಕ್ಷಕರಿಗೆ ಹಾಗೂ ಅವರ ಕುಟುಂಬದವರಿಗೆ ಲಸಿಕೆಯನ್ನು ನೀಡಬೇಕು ನಮ್ಮೆಲ್ಲ ಶಿಕ್ಷಕರು ಶಿಕ್ಷಣ ವ್ಯವಸ್ಥೆಯಲ್ಲಿ ಸಾರ್ವತ್ರಿಕರಣಕ್ಕಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಯುದ್ಧೋಪಾದಿಯಲ್ಲಿ ಶಾಲೆಗಳಿಗೆ ತೆರಳಲು ಸನ್ನದ್ಧರಾಗಿದ್ದೇವೆ ಆದ್ದರಿಂದ ಲಸಿಕೆ ಯನ್ನು ನೀಡಿ ಶಾಲೆಗಳನ್ನು ಪ್ರಾರಂಭಿಸಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ತುರ್ತಾಗಿ ಗಂಭೀರವಾಗಿ ಪ್ರಥಮ ಆದ್ಯತೆ ಯಲ್ಲಿ ಲಸಿಕಾಕರಣ ವನ್ನು ಶಿಕ್ಷಕರಿಗೆ ನೀಡಲು ಮಹಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ,.ಗೌರವಾಧ್ಯಕ್ಷರಾದ ಎಲ್. ಐ. ಲಕ್ಕಮ್ಮನವರ,ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್, ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ, ಆರ್ ಕೆ ಮಹಾಪೋಷಕರಾದ ಪವಾಡಪ್ಪ ಕಾಂಬ್ಳೆ, ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ, ಹನಮಂತಪ್ಪ ಮೇಟಿ, ಡಿ.ಎಸ್.ಭಜಂತ್ರಿ.ಕುಕನೂರ.ರಾಮಪ್ಪ ಹಂಡಿ .ಎಮ್ ಆಯ್ ಮುನವಳ್ಳಿ, ಮಹ್ಮದ್ ರಫಿ, ಡಿ. ಟಿ. ಬಂಡಿವಡ್ಡರ, ಶರಣಬಸವ ಬನ್ನಿಗೋಳ.ಎಂ.ವಿ ಕುಸುಮಾ, ರಾಜಶ್ರೀ ಪ್ರಭಾಕರ್ ಜಿ ಟಿ ಲಕ್ಷ್ಮೀದೇವಮ್ಮ ಕಲ್ಪನಾ ಚಂದನಕರ. ರವಿ ಬಂಗೆನ್ನವರ ಶಿವರಡ್ಡಿ .ಅಶೋಕ.ಬಿಸೆರೊಟ್ಟಿ ನಾಗರಾಜ್ ಆತಡಕರ ನಾಗರಾಜ್ ಕೆ .ರೇಖಾ ದೇವಿ ದೇವಿಕಾ ಕಮ್ಮಾರ ಮುಂತಾದವರು ಮನವಿ ಮಾಡಿದರು.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …