Breaking News

ಲೈಪ್ ಟಚ್ ಪೌಂಡೇಶನ್ ವತಿಯಿಂದ ಡಾ.ಸುರೇಶ ಕಮ್ಮಾರ ನೇತೃತ್ವದಲ್ಲಿ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ

Spread the love

ಹುಬ್ಬಳ್ಳಿ; ಲೈಪ್ ಟಚ್ ಪೌಂಡೇಶನ್ ಅಧ್ಯಕ್ಷ ಡಾ. ಸುರೇಶ ಕಮ್ಮಾರ ನೇತೃತ್ವದಲ್ಲಿ,ಅಕ್ಷಯ ಪಾತ್ರೆ ಹಾಗೂ ಮೆಡಿರಿಚ್ ಲಿಮಿಟೆಡ್ ಸಹಯೋಗದೊಂದಿಗೆ, ಕರ್ನಾಟಕ ಪತ್ರಕರ್ತರ ಒಕ್ಕೂಟದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಲೈಪ್ ಟಚ್ ಫೌಂಡೇಶನ್ ಕಾರ್ಯದರ್ಶಿ ಆರತಿ ಸುರೇಶ ಕಮ್ಮಾರ ಮಾತನಾಡಿ, ಕೊರೋನಾ ಮಹಾಮಾರಿ ರೋಗದ ಸಮಯದಲ್ಲೂ ಎಲ್ಲಡೆ ನಡೆಯುವ ಸುದ್ದಿಯನ್ನು ಜನತೆಗೆ ತಲುಪಿಸುವ ಕಷ್ಟದ ಕೆಲಸವನ್ನು ಮಾಡುತ್ತಿರುವ ಪತ್ರಕರ್ತರ ಸೇವೆಗೆ ನಮ್ಮದೊಂದು ಅಳಿಲು ಸೇವೆ ಅಂತ ತಿಳಿಸಿ,ನಮ್ಮ ಸಂಸ್ಥೆ ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ನೆರವು ನೀಡುವ ಪ್ರಯತ್ನ ಮಾಡುತ್ತಿದೆ,ಇದಕ್ಕೆ ತಮ್ಮೆಲ್ಲರ ಶುಭ ಹಾರೈಕೆ ನಮ್ಮ ಮೇಲಿರಲೆಂದು ಕೋರಿದರು.
ಪತ್ರಕರ್ತರ ಒಕ್ಕೂಟದ ಹುಬ್ಬಳ್ಳಿ ನಗರ ಘಟಕದ ಕಾರ್ಯದರ್ಶಿ ರವಿಗುರೂಜೀ ಸಂಗಳಕರ ಅವರು ಮಾತನಾಡಿ,ರಾಜ್ಯ ಒಕ್ಕೂಟದ ರಾಜ್ಯಾಧ್ಯಕ್ಷ ರವಿ ಹಂದಿಗೋಳ ಹಾಗೂ ಕಾರ್ಯದರ್ಶಿ ಸೋದರ ಅವರ ಅವಿರತ ಪ್ರಯತ್ನದಿಂದ ಇವತ್ತು ಘನವೆತ್ತ ಸಂಸ್ಥೆಗಳು ನಮ್ಮ ಸಹಾಯಕ್ಕೆ ಬರುತ್ತಿವೆ. ನೂರಾರು ಪತ್ರಕರ್ತರಿಗೆ ಲೈಪ್ ಟಚ್ ಪೌಂಡೇಶನ್ ಅಧ್ಯಕ್ಷ ಡಾ. ಸುರೇಶ ಕಮ್ಮಾರ ಹಾಗೂ ಆರತಿ ಸುರೇಶ ಕಮ್ಮಾರ ಕಾರ್ಯದರ್ಶಿ ದಂಪತಿಗಳು ಸೇರಿ,ಅಕ್ಷಯ ಪಾತ್ರೆ ಮತ್ತು ಮೆಡಿರಿಚ್ ಲಿ,ಸಹಯೋಗದೊಂದಿಗೆ ಆಹಾರ ಕಿಟ್ ವಿತರಿಸಿದರು,ಜೀವದ ಹಂಗು ತೊರೆದು ಅವರು ಮಾಡುತ್ತಿರುವ ಸೇವೆ ಶ್ಲಾಘನೀಯವಾದುದು, ದೇವರು ಈ ದಂಪತಿಗಳ ಪರಿವಾರಕ್ಕೆ ಸಕಲ ಸೌಭಾಗ್ಯವನ್ನು ಕರುಣಿಸಲೆಂದು ತಾಯಿ ಚಾಮುಂಡೇಶ್ವರಿ ಅಮ್ಮನವರಲ್ಲಿ ಪ್ರಾರ್ಥಿಸುವೆ ಎಂದು ನುಡಿದರು.
ಸ್ಥಳೀಯ ನಮ್ಮೆಲ್ಲ ಒಕ್ಕೂಟದ ಪತ್ರಕರ್ತರು ಉಪಸ್ಥಿತರಿದ್ದು ಆಹಾರ ಕಿಟ್ ಪಡೆದರು ಮತ್ತು ಸಹಾಯ ಹಸ್ತ ನೀಡಿದ ಡಾ. ಸುರೇಶ ಕಮ್ಮಾರ ಅವರಿಗೆ ಮನ: ಪೂರ್ವಕ ಧನ್ಯವಾದ ಅರ್ಪಿಸಿದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!