https://youtu.be/FceSNjyXQ9o
ಬೆಂಗಳೂರು: ನನ್ನ ಟೆಲೆಫೋನ್ ಕದ್ದಾಲಿಕೆ ಮಾಡಿ ನನ್ನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಗಂಭೀರ ಆರೋಪ ಮಾಡಿದ್ದು, ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಬೇಕು ಎನ್ನುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನನ್ನ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ, ನಾನು ಎಲ್ಲಿ ಹೋಗುತ್ತೇನೆ, ಯಾರೊಂದಿಗೆ ಮಾತನಾಡುತ್ತೇನೆ ಎನ್ನುವುದನ್ನು ಮಾನಿಟರಿಂಗ್ ಮಾಡಲಾಗುತ್ತಿದೆ.ಈ ಸಂಬಂಧ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಮತ್ತು ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಜೂನ್ 14 ರಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರದ ಮೂಲಕ ದೂರು ನೀಡಿರುವುದಾಗಿ ತಿಳಿಸಿದರು.ಬೇರೆ ಬೇರೆ ಕಡೆಯಿಂದ ನನಗೆ ಕರೆಗಳು ಬರುತ್ತಿರುತ್ತವೆ. ಸಭೆ ಸಮಾರಂಭದಲ್ಲಿ ಇದ್ದಾಗ ಕಾಲ್ ಬಂದಿದ್ದರೆ ನನ್ನ ಫೋನ್ ನಲ್ಲಿನಲ್ಲಿ ಇರುವ ಸಂಖ್ಯೆಯಾಗಲಿ ಅನ್ ನೋನ್ ಸಂಖ್ಯೆಯಾಗಲಿ ನಾನು ವಾಪಸ್ ಕರೆ ಮಾಡುತ್ತೇನೆ.ಕೆಲ ದಿನಗಳ ಹಿಂದೆ ಇದೇ ರೀತಿ ಒಂದು ಸಂಖ್ಯೆಗೆ ವಾಪಸ್ ಮಾಡಿದಾಗ ನನ್ನ ಹೆಸರು ಸ್ವಾಮಿ ಎಂದು ಪರಿಚಯಸಿಕೊಂಡರು, ಯಾವ ಸ್ವಾಮಿ ಎಂದಾಗ ಯುವರಾಜ ಸ್ವಾಮಿ ಎಂದರು. ನನಗೆ ಅವರ ಜೊತೆಗಿನ ಮಾತುಕತೆ ಅನುಮಾನಾಸ್ಪದವಾದ ಕಾರಣ ಕರೆ ಕಟ್ ಮಾಡಿದೆ.ಮೂರ್ನಾಲ್ಕು ದಿನದಲ್ಲಿ ಮತ್ತೆ ಹೀಗೆಯೇ ಕರೆ ಮಾಡಿದಾಗಲೂ ಯುವರಾಜ ಸ್ವಾಮಿ ಎಂದರು, ಹಿಂದೆ ನಿಮ್ಮೊಂದಿಗೆ ಮಾತನಾಡಿದ್ದೆ, ಅನಾವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನಾನೀಗ ಆಸ್ಪತ್ರೆಯಲ್ಲಿದ್ದೇನೆ ಅಲ್ಲಿಂದಲೇ ಕರೆ ಮಾಡುತ್ತಿದ್ದೇನೆ ಎಂದರು.
Check Also
ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ: ನಾರಾಯಣಸ್ವಾಮಿ
Spread the love ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ …