ಸಿಐಡಿ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಕೊಡಲಾಗಿದೆ- ನಿರಂಜನ
ಹುಬ್ಬಳ್ಳಿ: ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ
ಅನಾಮಧೇಯ ವ್ಯಕ್ತಿಗಳು ನಮ್ಮ ಮನೆ ಸುತ್ತಮುತ್ತ ಓಡಾಡ್ತಿದ್ದಾರೆ
ಸಿಐಡಿ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದರು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಹೇಳಿದರು.
ಸಿಐಡಿ ಅಧಿಕಾರಿಗಳಿಂದ ವಿಚಾರಣೆ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.ನಮ್ಮಿಂದ ಕೆಲ ಮಾಹಿತಿ ಕೇಳಿದ್ದಾರೆ
ಪ್ರಕರಣದ ತನಿಖೆಗೆ ನಮ್ಮ ಸಹಕಾರ ಕೇಳಿದ್ದಾರೆ ಎಲ್ಲ ಮಗ್ಗಲುಗಳಲ್ಲಿ ತನಿಖೆ ಮಾಡುತ್ತಿರೋದಾಗಿ ಹೇಳಿದ್ದಾರೆ
ಆರೋಪಿಯನ್ನು ಕರೆತಂದು ವಿಚಾರಣೆ ಮಾಡಿದ್ದಾರೆ ಸದ್ಯ ತನಿಖೆ ವಿವರಗಳನ್ನು ಹೇಳದಿರುವಂತೆ ಮನವಿ ಮಾಡಿದ್ದಾರೆ
ಸಿಐಡಿ ವರದಿ ಕೊಟ್ಟಾದಮೇಲೆ ಮಧ್ಯಮಗಳಿಗೆ ಹೇಳ್ತೇನೆ ಎಂದರು.
*ಪ್ರತಿ ದಿನ ಹೇಳಿಕೆ ಬದಲಾವಣೆ ವಿಚಾರ*
ಪ್ರತಿ ದಿನ ಹೇಳಿಕೆ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು
ನಾನು ಆ ರೀತಿಯ ಹೇಳಿಕೆ ಕೊಟ್ಟಿಲ್ಲ
ಅವತ್ತು ಇದ್ದ ನಿಲುವೇ ಇವತ್ತು ಇದೆ
ಮಗಳ ಹತ್ಯೆ ನಂತರ ಅನೇಕರು ಬಂದು ಸಾಂತ್ವನ ಹೇಳ್ತಿದ್ದಾರೆ, ಧೈರ್ಯ ತುಂಬುತ್ತಿದ್ದಾರೆ ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡು ಬಂದಿದೆ ಐದನೇ ದಿನ ಸಂತಾಪದ ನೆಪದಲ್ಲಿ ಒಬ್ಬರು ನಮ್ಮ ವಿಡಿಯೋ ಮಾಡಿಕೊಂಡು ಹೋಗಿದ್ದಾರೆ
ಕೊಲೆ ಮಾಡೋ ಮುನ್ನ ಆರೋಪಿ ಬಿಡ್ನಾಳದಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡಿದ್ದ ಅಂತ ತಿಳಿದು ಬಂದಿದೆ
ಇವತ್ತು ಕೆಲ ವ್ಯಕ್ತಿಗಳು
ಯಾವುದೊ ಸಂಚು ಹಾಕಿದ್ದಾರೆಬಅಂತ ಅನುಮಾನ ಬಂದಿದೆ
ಭದ್ರತೆ ಕೊಡೋದಾಗಿ ಪೊಲೀಸ್ ಆಯುಕ್ತರು ಹೇಳಿದ್ದಾರೆ
ಅದಕ್ಕೆ ಪೂರಕವಾಗಿ ಭದ್ರತೆಯನ್ನೂ ಒದಗಿಸಿದ್ದಾರೆ ಎಂದ ನಿರಂಜನ ಎಂದರು.
*ನಿರಂಜನ ಕಾರುಚಾಲಕ ಮತ್ತು ಅಕೌಂಟೆಂಟ್‌ರನ್ನು ಕರೆದೊಯ್ದು ಸಿಐಡಿ*
ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ಮತ್ತು ಸಿಐಡಿ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆ ನಡೆಯುತಿದ್ದು
ಕಾರು ಚಾಲಕ ಮಹಾಂತೇಶ ಮೆಣಸಿನಕಾಯ, ಅಕೌಂಟೆಂಟ್ ಬಷೀರ್ ಅಹ್ಮದ್ ವಿಚಾರಣೆ ವಶಕ್ಕೆ ತೆಗೆದುಕೊಳ್ಳಲಾಗಿದೆ
ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿರುವ ಸಿಐಡಿ ಅಧಿಕಾರಿಗಳು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಅಧಿಕಾರಿಗಳು