https://youtu.be/jbGIw_dwO4M
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 34ನೆ ವಾರ್ಡ್ ನ ಅಧ್ಯಕ್ಷರಾದ ಕಸ್ತೂರಿ ಮುರಗೋಡ ಮತ್ತು ಸ್ಥಳೀಯ ಬಡಾವಣೆಯ ಮುಖ್ಯಸ್ಥರಾದ ಶ್ರೀ ಸಾಲಿಮಠ ಅವರ ನೇತೃತ್ವದಲ್ಲಿ, ಹುಬ್ಬಳ್ಳಿಯ ಏಕತಾ ಕಾಲೋನಿಯ ಬಡ ಜನರನ್ನು ಗುರುತಿಸಿ ಶಿಸ್ತು ಬದ್ಧವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಆಡಳಿತ ಸರ್ಕಾರ ಲಾಕಡೌನ್ ನಿಂದ ಆರ್ಥಿಕವಾಗಿ ಕಂಗಾಲಾಗಿರುವ ದೈನಂದಿನ ವೇತನದ ಮೇಲೆ ಅವಲಂಬಿತ ಬಡಜನರನ್ನು ಮರೆತಂತಿದೆ. ಈ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷ ಪ್ರತಿನಿತ್ಯ ಹುಬ್ಬಳ್ಳಿ -ಧಾರವಾಡದಲ್ಲಿ ಆಪ ಕೆರ್ಸ್ ಅಭಿಯಾನದಡಿ ಕಷ್ಟದಲ್ಲಿರುವ ಬಡ ಜನರನ್ನು ಗುರುತಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೆರವು ನೀಡುತ್ತಿದೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಅನಂತಕುಮಾರ್ ಬುಗಡಿ, ಶಿವಕುಮಾರ ಬಾಗಲಕೋಟ, ಲತಾ ಕೊಹಿಲೊ, ಲಕ್ಷ್ಮಣ ನರಸಾಪುರ, ಹಸನಸಾಬ್ ಇನಾಮದಾರ, ಹಿಮಾನ್ಶು ಸಿಂಘ ಮತ್ತಿತರು ಪಾಲ್ಗೊಂಡಿದ್ದರು.
