ಮಹದಾಯಿಗಾಗಿ ಚಕ್ಕಡಿ ಬಂಡಿಯಲ್ಲಿ ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿಗೆ ತೆರಳಿ ನಾಮಪತ್ರ ಸಲ್ಲಿಸಲಿರುವ ಪಕ್ಷೇತರ ಅಭ್ಯರ್ಥಿ ಶಿವಾನಂದ ಮುತ್ತಣ್ಣವರ್…
ಹುಬ್ಬಳ್ಳಿ
ಧಾರವಾಡ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ನಾಮಪತ್ರ ಸಲ್ಲಿಸಲು . ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ
ಚಕ್ಕಡಿಯಲ್ಲಿ ತೆರಳಿದರು.
ನಗರದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚೆನ್ನಮ್ಮ ಪ್ರತಿಮಗಳಿಗೆ ಮಾಲಾರ್ಪಣೆ ಮಾಡಿ ಹುಬ್ಬಳ್ಳಿಯಿಂದ ದಾರವಾಡದವರೆಗೆ 20 ಕಿಲೋ ಮೀಟರ ಎತ್ತಿನ ಚಕ್ಕಡಿಯ ರ್ಯಾಲಿ ಮುಖಾಂತರ ಧಾರವಾಡದ ಶಿವಾಜಿ ಚೌಕ ತಲುಪಿ ಅಲ್ಲಿಂದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರು ಮಹದಾಯಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಇಲ್ಲಿಯವರೆಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಚಕ್ಕಾರ ಎತ್ತಿಲ್ಲ. ಪ್ರಹ್ಲಾದ್ ಜೋಶಿಯವರನ್ನು ಈ ಭಾಗದಿಂದ ನಿರಂತರವಾಗಿ ಆಯ್ಕೆ ಮಾಡಿ ಕಳುಹಿಸಿದರೂ ಕೂಡ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧೆ ನಡೆಸುತ್ತಿದ್ದು, ಹುಬ್ಬಳ್ಳಿಯಿಂದ ಧಾರವಾಡದವರೆಗೆ ಚಕ್ಕಡಿ ಬಂಡಿಯಲ್ಲಿ ತೆರಳಿ ಶಿವಾಜಿ ಚೌಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸುವದಾಗಿ ತಿಳಿಸಿದರು.