Breaking News
Oplus_131072

ಕಾಂಗ್ರೆಸ್, ಯಾವಾಗೆಲ್ಲ ರಾಹುಲ್ ಗಾಂಧಿಲಾಂಚ್ ಮಾಡಿದ್ದಾರೋ ಆಗೆಲ್ಲ ನಮಗೆ ಹೆಚ್ಚಿನ ಬೆಂಬಲ ಸಿಕ್ಕಿದೆ- ಜೋಶಿ

Spread the love

ಕಾಂಗ್ರೆಸ್, ಯಾವಾಗೆಲ್ಲ ರಾಹುಲ್ ಗಾಂಧಿಲಾಂಚ್ ಮಾಡಿದ್ದಾರೋ ಆಗೆಲ್ಲ ನಮಗೆ ಹೆಚ್ಚಿನ ಬೆಂಬಲ ಸಿಕ್ಕಿದೆ- ಜೋಶಿ

ಹುಬ್ಬಳ್ಳಿ: ಮೋದಿ, `ಪ್ರಧಾನ ಮಂತ್ರಿ ಅಲ್ಲ. ಪ್ರಚಾರ ಮಂತ್ರಿ’ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಗರಂ ಆದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜಕೀಯ ತೆವಲಿಗೋಸ್ಕರ ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದನ್ನು ಬಿಡಬೇಕು ಎಂದು ಕಿಡಿ ಕಾರಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರ ಕಾಲದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅವರು ರಾಷ್ಟ್ರೀಯ ಅಧ್ಯಕ್ಷರಾಗಲು ಎನ್ನೆಲ್ಲ ಮಾಡಿದ್ದಾರೆ ಎಂದು ತಿಳಿಸುಕೊಳ್ಳಲಿ ಎಂದು ಪಿಯಾಂಕ್ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್, ಯಾವಗಲೆಲ್ಲ ರಾಹುಲ್ ಗಾಂಧಿ ಅವರನ್ನು ಲಾಂಚ್ ಮಾಡಿದ್ದಾರೋ ಆಗೆಲ್ಲ ನಮಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿ ಎಂಬ ಪ್ರಾಡಕ್ಸ್ ಸರಿಯಿಲ್ಲ. ಹೀಗಾಗಿ ಅವರು ಅಧಿಕಾರಿಕ್ಕೆ ಬರುವುದೇ ಇಲ್ಲ. ಕಳೆದ ಬಾರಿ ೩೦೩ ಸ್ಥಾನಗಳನ್ನು ಪಡೆದಿದ್ದೆವು. ಈ ಬಾರಿ ೩೭೫ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಕೆ. ಹರಿಪ್ರಸಾದ್ ಪೆನ್ ಡ್ರೆöÊವ್ ಬಾಂಬ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಏನೂ ಸರಿ ಇಲ್ಲ ಎಂಬುದಕ್ಕೆ ಇದು ಹೊಸ ಉದಾಹರಣೆ. ಸಿಎಂ ಮತ್ತು ಡಿಸಿಎಂ ನಡುವಿನ ತಿಕ್ಕಲಾಟ ದಿನದಿಂದ ದಿನಕ್ಕೆ ತೀವೃವಾಗಿ ಹೆಚ್ಚುತ್ತಿದೆ. ಹೀಗಾಗಿ ಆಗಾಗ ಕೆಲವರು ಅಸಮಾಧಾನ ಹೊರ ಹಾಕುವುದು ಸಹಜ ಎಂದರು.
ಏ.೧೫ ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಧಾರವಾಡದ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವುನಾಯಕರು ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಲಿದ್ದಾರೆ. ಪ್ರಚಾರಕ್ಕೆ ಯಾವೆಲ್ಲ ನಾಯಕರು ಬರಲಿದ್ದಾರೆ ಎಂಬುದು ಇನ್ನೂ ಅಂತಿಮಗೊAಡಿಲ್ಲ. ಇನ್ನೆರಡು ದಿನದಲ್ಲಿ ಎಲ್ಲವೂ ತಿಳಿಯಲಿದೆ ಎಂದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!