Breaking News
oplus_1026

ಚೇತನ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯಕ್ಕೆ ಎಐಸಿಟಿಇ ಮಾನ್ಯತೆ- ಡಾ. ವಿಶ್ವನಾಥ ಕೊರವಿ

Spread the love

ಚೇತನ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯಕ್ಕೆ ಎಐಸಿಟಿಇ ಮಾನ್ಯತೆ- ಡಾ. ವಿಶ್ವನಾಥ ಕೊರವಿ

ಪ್ರಾಚಾರ್ಯರಾದಡಾ.ಅಶೋಕ್.ಆರ್. ವಡಕಣ್ಣವರ, ಪ್ರೊ. ಬಿ. ಎಫ್ ಗಾಮನಗಟ್ಟಿ ಇದ್ದರು.

ಹುಬ್ಬಳ್ಳಿ: ನಗರದ ಉಣಕಲ್ ದಲ್ಲಿರುವ ಚೇತನ ವಾಣಿಜ್ಯ, ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯಕ್ಕೆ ಎಐಸಿಟಿಇ ಮಾನ್ಯತೆ ದೊರೆತಿದ್ದು, ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಎಐಸಿಟಿಇ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುತ್ತಾ ಬಂದಿದ್ದು ಹುಬ್ಬಳ್ಳಿಯ ಕೆಲವೇ ಬಿಬಿಎ ಮತ್ತು ಬಿಸಿಎ ಕಾಲೇಜುಗಳಿಗೆ ಎಐಸಿಟಿಇ ಮಾನ್ಯತೆ ದೊರೆತಿದ್ದು ಅದರಲ್ಲಿ ಚೇತನ ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯ ಕೂಡ ಒಂದಾಗಿದೆ ಎಂದು ಚೇತನ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ ವಿಶ್ವನಾಥ್ ಎಂ ಕೊರವಿ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಚೇತನ ವಾಣಿಜ್ಯ, ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯ ಪ್ರತಿವರ್ಷ ತನ್ನ ವಿದ್ಯಾರ್ಥಿಗಳಿಗೆ ಅನೇಕ ಕೌಶಲ್ಯ ಆಧಾರಿತ ಪಿಯುಸಿ ವಾಣಿಜ್ಯ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಗಳನ್ನ ನೀಡುತ್ತಾ ಬಂದಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ವಾಣಿಜ್ಯ, ನಿರ್ವಹಣೆ ಮತ್ತು ಸಾಫ್ಟ್ ವೇರ್ ಕ್ಷೇತ್ರದಲ್ಲಿ ೫೦ಕ್ಕೂ ಹೆಚ್ಚು ಉಚಿತ ಸರ್ಟಿಫಿಕೇಟ್ ಕೋರ್ಸಗಳನ್ನು ನೀಡುತ್ತಾ, ವಿದ್ಯಾರ್ಥಿಗಳಿಗೆ ಉತ್ತಮ ನಾಯಕತ್ವ ಗುಣ ಬೆಳಿಸಿಕೊಳ್ಳಲು ಚೇತನೋತ್ಸವ, ಉತ್ತಮ ಶಿಕ್ಷಕ ಪ್ರಶಸ್ತಿ, ರಕ್ತದಾನ ಶಿಬಿರ, ಎನ್ಎಸ್ಎಸ್ ಶಿಬಿರ, ಪ್ರತಿಭಾನ್ವೇಷಣಾ ಪರೀಕ್ಷೆ ಹೀಗೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದು
ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್, ಲೈಬ್ರರಿ ಹಾಗೂ ಪ್ರತಿಷ್ಠಿತ ಕಂಪನಿ ಗಳಲ್ಲಿ ಉದ್ಯೋಗಾವಕಾಶ ಮತ್ತು ಇಂಟರ್ನ್ ಶಿಪ್ ಒದಗಿಸುವುದರ ಮುಖಾಂತರ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಏಳಿಗಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.
ಚೇತನ ವಾಣಿಜ್ಯ, ಬಿಬಿಎ ಮತ್ತು ಬಿಸಿಎ ಮಹಾವಿದ್ಯಾಲಯ ಅತಿ ಹೆಚ್ಚು ನುರಿತ ಡಾಕ್ಟರೇಟ್ ಹೊಂದಿದ ಉಪನ್ಯಾಸಕರನ್ನು ಹೊಂದಿದ್ದು 2020 ರಲ್ಲೇ ಜಿ.ಎಚ್.ಆರ್.ಡಿ.ಸಿ ಕೊಡುವ ದೇಶದ ಅತ್ತ್ಯುತ್ತಮ ಬಿಸಿಎ ಕಾಲೇಜು ಪಟ್ಟಿಯಲ್ಲಿ ಚೇತನ್ ಬಿಸಿಎ ಮಹಾವಿದ್ಯಾಲಯ ದೇಶಕ್ಕೆ 10 ನೇ ಸ್ಥಾನ ಪಡೆದಿದ್ದು, 2020 ರಲ್ಲಿ ಬಿಕಾಂ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ೬ನೇ ರ‍್ಯಾಂಕ್‌ ಪಡೆದಿದ್ದು ಹೆಮ್ಮೆಯ ಗರಿ.
ಮೇಲಿನ ಎಲ್ಲ ಅಂಶಗಳೊಂದಿಗೆ ಸಂಸ್ಥೆಯ ಮೂಲಸೌಕರ್ಯ, ಉಪನ್ಯಾಸಕರು, ವಿದ್ಯಾರ್ಥಿಗಳ ಫಲಿತಾಂಶ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಮತ್ತು ಉದ್ಯೋಗಾವಕಾಶ ಹೀಗೆ ಹಲವಾರು ಅಂಶ ಗಮನದಲ್ಲಿ ಇಟ್ಟುಕೊಂಡು ಮುಂಬರುವ ದಿನಗಳಲ್ಲಿ ಸಂಸ್ಥೆಗಳು ಉನ್ನತ ಶಿಕ್ಷಣ ನೀಡುವಂತೆ ಪ್ರೇರೇಪಿಸಲು ಎಐಸಿಟಿಇ ಮಾನ್ಯತೆ ದೊರೆತಿದ್ದು ಸಹಾಯಕವಾಗಲಿದೆ.
ಈ ಬಾರಿಯ ದ್ವಿತೀಯ ಪಿ ಯು ಫಲಿತಾಂಶದಲ್ಲೂ 18 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 25 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮ ಸದಾ ಹಮ್ಮಿಕೊಳ್ಳುತಾ ಬಂದಿರುವ ಸಂಸ್ಥೆ ಏಪ್ರಿಲ್ 21 ನೇ ತಾರೀಖಿನಂದು ಎಸೆಸೆಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷ ಪರೀಕ್ಷೆ ಬರೆದು ಪಿಯುಸಿ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಗಳಿಗೆ ಪ್ರವೇಶ ಬಯಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣಾ ಪರೀಕ್ಷೆ ಹಮ್ಮಿ ಕೊಳ್ಳಲಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಒಟ್ಟಾರೆ 10 ಲಕ್ಷಕ್ಕೂ ಅಧಿಕ ಮೊತ್ತದ ಸ್ಕಾಲರ್ಷಿಪ್ ಗಳನ್ನು ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣಾ ಪರೀಕ್ಷೆ ಮುಖಾಂತರ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಕಾಲೇಜಿನ ವೆಬ್ಸೈಟ್ www.chetancollege.org ಮುಖಾಂತರ ಉಚಿತ ನೊಂದಣಿ ಮಾಡಿಕೊಳ್ಳಬಹುದಾಗಿದ್ದು, ಅಲ್ಲದೇ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇಕಡಾ 95 ಮತ್ತು ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದಾಖಲಾತಿ ನೀಡುತ್ತಿದ್ದು, ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬೇಕೆಂದರು.
ಪ್ರಾಚಾರ್ಯರಾದ ಡಾ.ಅಶೋಕ್.ಆರ್. ವಡಕಣ್ಣವರ, ಪ್ರೊ. ಬಿ. ಎಫ್ ಗಾಮನಗಟ್ಟಿ, ಬಿಸಿಎ ವಿಭಾಗದ ಮುಖ್ಯಸ್ಥರಾದ ಡಾ. ಶಿಲ್ಪಾ ಕುಲಕರ್ಣಿ(ಜಡಿಮಠ), ಬಿಕಾಂ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಗಾಮಾನಗಟ್ಟಿ, ಪಿಯು ವಿಭಾಗದ ಮುಖ್ಯಸ್ಥರಾದ ಪ್ರೊ. ನಿಧಿ ದೇಶಪಾಂಡೆ, ಬಿಬಿಎ ವಿಭಾಗದ ಮುಖ್ಯಸ್ಥರಾದ ಡಾ. ಅನಿಲ್ ಯರಗಟ್ಟಿ ಉಪಸ್ಥಿತರಿದ್ದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!