ಯಾವುದೇ ಕಾರಣಕ್ಕೂ ಕಣದಿಂದ ತಮ್ಮನ್ನ ಹಿಂದೇ ಸರಿಸಲು ಈ ಭೂಮಿ ಮೇಲೆ ಹುಟ್ಟಿಯೇ ಇಲ್ಲ; ದಿಂಗಾಲೇಶ್ವರ
ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಕಣದಿಂದ ತಮ್ಮನ್ನ ಹಿಂದೇ ಸರಿಸಲು ಈ ಭೂಮಿ ಮೇಲೆ ಹುಟ್ಟಿಯೇ ಇಲ್ಲ ಎಂದು ಎಂದು ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗದಗ ಜಿಲ್ಲೆಯ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಖಾರವಾಗಿ ಹೇಳಿದರು.
ಹುಬ್ಬಳ್ಳಿಯ ನಗರದಲ್ಲಿಂದು ಪಕ್ಷ ಪಕ್ಷೇತರ ಅಭ್ಯರ್ಥಿಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಅವರು ನಗರದ ಮೂರುಸಾವಿರ ಮಠದ ಶ್ರೀ ಗದ್ದುಗಿಗೆ ಪೂಜೆ ನಂತರ ಅವರು ಮಾತನಾಡಿದರು ಆದರೆ ಪೂಜೆ ನಂತರ ನಾನು ಇನ್ನಷ್ಟು ಮಾಹಿತಿ ಕೊಡುವೆ ಕ್ಷೇತ್ರದ ಜನರು ಚುನಾವಣೆಗೆ ನಿಲ್ಲಿಸಿದ್ದಾರೆ ಯಾವುದೇ ಪಕ್ಷದ ಬೆಂಬಲ ಇಲ್ಲ ಕ್ಷೇತ್ರದ ಜನರೇ ನನಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದರು.