ಧಾರವಾಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಕಾಗಿನೆಲೆ ಶ್ರೀಗಳ ಸನ್ಮಾನ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರು ಹರಿಹರ ತಾಲೂಕಿನ ಬೆಳ್ಳೂಡಿ ಶಾಖಾ ಮಠ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಿಗೆ ನಮನ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹೂವಪ್ಪ ದಾಯಗೋಡಿ, ಅಜ್ಜಪ್ಪ ಮಟ್ಟಿ, ಬಸಣ್ಣ ಬಸಲಗುಂದಿ, ಹಣಮಂತಪ್ಪ ದೊಡಮನಿ, ಗುರುಶಾಂತ ಪಾಟೀಲ, ಮುಂಜು ಜಾಧವ, ಮಹಾಂತೇಶ ಭೋವಿ, ಆಕಾಶ ಕೊನೇರಿ, ಡಿ ಡಿ ಮಾಳಗೇರ ಮತ್ತು ಪಕ್ಷದ ಹಾಗೂ ಇತರ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.