Breaking News

ಕೊಲೆ ಆರೋಪಿಗಳ ಬಂಧನ

Spread the love

ಕೊಲೆ ಆರೋಪಿಗಳ ಬಂಧನ

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಗ್ರಾಮದ ತೋಟವೊಂದರಲ್ಲಿವಿಷಯವಾಗಿ ಓರ್ವನಿಗೆ ಕೊಲೆ ಮಾಡಿದ್ದ ಮೂವರು ಹಂತಕರನ್ನು ಗ್ರಾಮೀಣ ಠಾಣೆ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಧಾರವಾಡ ತಾಲೂಕು ಇಟಿಗಟ್ಟಿ ಗ್ರಾಮದ ಪ್ರವೀಣ ಕುಬಿಹಾಳ, ಹನಮಂತ ಮಾಳಗಿಮನಿ, ಸಹದೇವ ನೂಲ್ವಿ ಬಂಧಿತರಾದವರು.
ಇವರು ತಾರಿಹಾಳದ ಬಾರ್ ಹತ್ತಿರವಿರುವ ಚಿಕ್ಕು ತೋಟದಲ್ಲಿ ಮೂಲತಃ ಕುಂದಗೋಳ ತಾಲೂಕು ಇಂಗಳಗಿ ಗ್ರಾಮದ ಇಲ್ಲಿನ ತಾರಿಹಾಳ ವಾಜಪೇಯಿ ನಗರದ ಷಣ್ಮುಖಪ್ಪ ಬಸಪ್ಪ ಹಡಪದ (55) ಬೀಯರ್ ಬಾಟಲಿ ಅಥವಾ ಇನ್ನಾವುದೋ ಹರಿತವಾದ ಆಯುಧದಿಂದ‌ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್ ಪಿ ಎನ್.ವಿ. ಭರಮನಿ, ಡಿಎಸ್ ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಅವರನ್ನೊಳಗೊಂಡ ತನಿಖಾ ತಂಡ ಹಂತಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸಾರಾಯಿ ಕುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ಮಾಡಿ ಕೊಲೆ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Spread the love

About Karnataka Junction

[ajax_load_more]

Check Also

*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*

Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …

Leave a Reply

error: Content is protected !!