Breaking News

ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಎ.ವಿದ್ಯಾಲಕ್ಷ್ಮಿ

Spread the love

ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಎ.ವಿದ್ಯಾಲಕ್ಷ್ಮಿ

ಹುಬ್ಬಳ್ಳಿ: ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿ 598 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದಾಳೆ

ಮೊದಲ ರ‍್ಯಾಂಕ್ ಪಡೆದಿರುವ ಎ.ವಿದ್ಯಾಲಕ್ಷ್ಮಿ ಇಲ್ಲಿನ ಬೈರೇದೇವರಕೊಪ್ಪದ ಚೌಗುಲ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ.ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರು. ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದರು. 600 ಅಂಕಗಳಿಗೆ 598 ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾಲಕ್ಷ್ಮಿ ಪ್ರಾಥಮಿಕ ಹಂತದಿಂದಲೂ ಓದಿನಲ್ಲಿ ಮುಂದೆ ಇದ್ದ ವಿದ್ಯಾರ್ಥಿನಿ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 97 ರಷ್ಟು ಅಂಕ ಪಡೆದಿದ್ದಳು. ತಂದೆ ಎಸ್. ಅಖಿಲೇಶ್ವರನ್ ಹಿರಿಯ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಹ ತಮಿಳುನಾಡು ರಾಜ್ಯದವರಾದ ಇವರು 2002 ರಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಈ ಕುರಿತು ಮಹಾವಿದ್ಯಾಲಯದ ಮುಖ್ಯಸ್ಥರು, ಪ್ರಚಾರ್ಯರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ .

ಬೈಟ್; ಚೌಗಲಾ , ಕಾಲೇಜು ಪ್ರಾಚಾರ್ಯ,

ಬೈಟ್ ವಿದ್ಯಾಲಕ್ಷ್ಮೀ, ವಿದ್ಯಾರ್ಥಿನಿ

ಬೈಟ್; ಮುಳುಗುಂದ


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!