Breaking News

ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಮಕ್ಕಳ ಬೈಕ್ ಸ್ಟಂಟ್ ಗೆ ಸಾರ್ವಜನಿಕರ ಆಕ್ರೋಶ; ಕ್ರಮಕ್ಕೆ ಒತ್ತಾಯ

Spread the love

ಹುಬ್ಬಳ್ಳಿಯಲ್ಲಿ ಅಪ್ರಾಪ್ತ ಮಕ್ಕಳ ಬೈಕ್ ಸ್ಟಂಟ್ ಗೆ ಸಾರ್ವಜನಿಕರ ಆಕ್ರೋಶ; ಕ್ರಮಕ್ಕೆ ಒತ್ತಾಯ

ಕೈಯಲ್ಲಿ ವಾಹನಗಳನ್ನ ಕೋಡಬಾರದು ಎಂದು ಅದೆಷ್ಟೇ ಜಾಗೃತಿ ಮೂಡಿಸಿದರು ಕೂಡ ಕೆಲ ಪೊಷಕರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮಕ್ಕಳ ಕೈಗೆ ಬೈಕ್, ಸ್ಕೂಟರ್ ಕೊಟ್ಟು ಕಳಿಸ್ತಾರೆ. ಹೀಗೆ ಬುದ್ದಿ ಬೆಳೆಯೋದಕ್ಕೂ ಮುನ್ನವೇ ಬೈಕ್ ಏರಿ ಬರೋ ಮಕ್ಕಳು ರಸ್ತೆ ಮೇಲೆ ಅದೇನ್ ಏನ್ ಸರ್ಕಸ್ ಮಾಡ್ತಾರೆ ಗೊತ್ತ. ಹಾಗಾದರೆ ಈ ಸ್ಟೋರಿ ನೋಡಿ..

ಹೀಗೆ ಒಂದೇ ಬೈಕ್ ಮೇಲೆ ಐದಾರು ವಿದ್ಯಾರ್ಥಿಗಳು, ಹುಂಬುತನದಿಂದ ಕುಳಿತು ಅತ್ಯಂತ ಅಪಾಯಕರ ರೀತಿಯಲ್ಲಿ ನಡೆದುಕೊಳ್ತಿರೋ ಈ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಸಿಲ್ವರ್ ಟೌನ್ ಬಡಾವಣೆಯಲ್ಲಿ ಎಂದು ಹೇಳಲಾಗಿದೆ. ಕೆ.ಎ. 25 – ವಾಯ್ 5077 ನೋಂದಣಿ ಹೊಂದಿರುವ ಈ ಬೈಕ್ ಅದ್ಯಾವ್ ಪುಣ್ಯಾತ್ಮನದ್ದೋ ಗೊತ್ತಿ. ಹೀಗೆ ತನ್ನ ಬೈಕ್ ಅನ್ನ ಅಪ್ರಾಪ್ತರು ಅಪಾಯಕರ ರೀತಿಯಲ್ಲಿ ರಸ್ತೆ ಮೇಲೆ ಓಡಿಸ್ತಿದ್ದಾರೆ ಅನ್ನೋದಾದರೂ ಆತನಿಗೆ ಗೊತ್ತಿದೆಯೋ ಇಲ್ಲವೋ. ಅದು ಭಗವಂತನೆ ಬಲ್ಲ. ಆದರೆ ಈ ಬೈಕ್ ಮಾತ್ರ ಈಗ ಅಪ್ರಾಪ್ತರ ಕೈಗೆ ಸಿಕ್ಕು ಹುಚ್ಚು ಕುದುರೆ ಯಂತೆ ನಿತ್ಯ ಬಡಾವಣೆಯಲ್ಲಿ ಓಡಾಡ್ತಿದೆ. ಮೊದಲೆ ಬಿಸಿ ರಕ್ತದ ಹುಡುಗರು, ಮೇಲಾಗಿ ಹೇಳೋರು ಕೇಳೋರು ಯಾರು ಇಲ್ಲದ ಮುಟ್ಟಾಳರು. ರಸ್ತೆ ಮೇಲೆ ಹೀಗೆ ಅಂದಾದುಂದಿಯಾಗಿ ಬೈಕ್ ಓಡಿಸುತ್ತ ನಿತ್ಯ ಸ್ಥಳೀಯರಿಗೆ ಸಂಕಷ್ಟ ತಂದಿಟ್ಟಿದ್ದಾರೆ. ಇವರನ್ನೇನಾದರೂ ಸ್ಥಳೀಯರು ಯಾರ್ ಮಕ್ಕಳಪ್ಪಾ ನೀವೂ ಅಂತ ಕೇಳಿದ್ರೆ ಮೈಮೇಲೆನೇ ಎರಗುತ್ತಾರಂತೆ. ತಾವೂ ಹುಟ್ಟಿರೋ ಮೂಲವೇ ಅರಿಯದಂತೆ ಮಾತನಾಡ್ತಾರಂತೆ. ಹೀಗಾಗಿ ಸ್ಥಳೀಯರು ರೋಸಿ ಹೋಗಿದ್ದಾರೆ. ಅಲ್ಲದೇ ಇವರೇನು ಹೆತ್ತವರಿಗೂ ಬೇಡವಾಗಿದ್ದಾರೋ ಏನೋ ಎಂದು ಮಾತನಾಡಿಕೊಳ್ಳುತ್ತಿದ್ದಾರಂತೆ.

ಒಟ್ನಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪ್ರಾಪ್ತರ ಕೈಗೆ ವಾಹನಗಳನ್ನ ನೀಡುವುದು ಕಾಮನ್ ಎಂಬಂತಾಗಿದ್ದು, ಇದರಿಂದಾಗಿ ರಸ್ತೆ ಮೇಲೆ ಸಂಚರಿಸುವವರ ಪ್ರಾಣಕ್ಕೆ ಸಂಚಕಾರ ಬಂದೆರಗಿದೆ. ಇನ್ನಾದರೂ ಸಂಬಂಧ ಪಟ್ಟವರು ಇಂತ ಉಪಾದ್ವಾಪಿ ಪೊಷಕರಿಗೆ ಬಿಸಿ ಮುಟ್ಟಿಸುವ ಮೂಲಕ ಈ ಉಡಾಳರಿಗೆ ಬುದ್ದಿ ಕಲಿಸಬೇಕಿದೆ.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!