Breaking News

ಲಾಡ್ ಅವರೇ ನಿಮ್ಮ ಮಕ್ಕಳು ರಾಹುಲ್ ಗಾಂಧಿ ತರಹ ಆಗಬೇಕಾ ಅಥವಾ ನರೇಂದ್ರ ಮೋದಿ ತರಹ ಆಗಬೇಕಾ? ಪ್ರಹ್ಲಾದ ಜೋಶಿ

Spread the love

ಧಾರವಾಡ: ಸಚಿವರಾದ ಸಂತೋಷ ಲಾಡ್ ಅವರೇ ನಿಮ್ಮ ಮಕ್ಕಳು ರಾಹುಲ್ ಗಾಂಧಿ ತರಹ ಆಗಬೇಕಾ ಅಥವಾ ನರೇಂದ್ರ ಮೋದಿ ತರಹ ಆಗಬೇಕಾ? ಪ್ರಮಾಣ ಮಾಡಿ ಹೇಳಿ ನೋಡೊಣಾ? ಎಂದು
ಧಾರವಾಡ ತಾಲೂಕಿನ ನಿಗದಿ ಪ್ರಚಾರ ಸಭೆಯಲ್ಲಿ ಪ್ರಹ್ಲಾದ ಜೋಶಿ ಕೇಳಿದ್ದಾರೆ. ಲಾಡ್ ಜಿಗಿಜಿಗಿದು ನನಗೆ ಬೈಯುತ್ತಿದ್ದು ದಿನ ಬೆಳಗಾದರೆ ಜೋಶಿ-ಮೋದಿ ವಿರುದ್ಧ ಬೈತಾರೆ
ದಿನಾ ಬೈದರೆ ಮಾತ್ರ ಮಂತ್ರಿ ಸ್ಥಾನದಲ್ಲಿಡುವೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರಂತೆ
ಆದರೆ ಎಲ್ಲಿಯ ಸಂತೋಷ ಲಾಡ್
ಎಲ್ಲಿಯ ನರೇಂದ್ರ ಮೋದಿ
ನಮ್ಮದು ಅಬ್ ಕೀ ಬಾರ್ ಚಾ‌ರ್‌ ಸೋ ಫಾರ್ ಆಗಲಿದೆ.
ಗೆದ್ದ ಮೇಲೆ ಎಂಪಿಗಳೆಲ್ಲ ಸೇರಿ ಅಧಿಕೃತ ಪ್ರಧಾನಿ ಆರಿಸುತ್ತೇವೆ
ಕಾಂಗ್ರೆಸ್ ಹೊರತುಪಡಿಸಿ ಮೂರನೇ ಸಲ ಪ್ರಧಾನಿಯಾಗಲಿರೋ ಮೊದಲ ವ್ಯಕ್ತಿ ಮೋದಿನಾವು ಗೆದ್ದ ಮೇಲೆ ನಮ್ಮ ಲೀಡರ್ ಮೋದಿ ಅವರೇ ಎಂದ ಅವರುನಾವು ಮೋದಿ ಪರವಾಗಿಯೇ ವೋಟ್ ಹಾಕಿ ಪ್ರಧಾನಿ ಮಾಡುತ್ತೇವೆಆದರೆ ಕಾಂಗ್ರೆಸ್ ಪಕ್ಷದ ಲೀಡರ್ ಯಾರು?
ಜಿಗಿ ಜಿಗಿದು ಮಾತನಾಡ್ತಿರಲ್ವಾ?, ನಿಮ್ಮ ಲೀಡರ್ ಯಾರು ಹೇಳಿ ಮೊದಲು ನಾವು ನಮ್ಮ ಲೀಡರ್ ಮೋದಿ ಅಂತೇವಿ ಅವರೆಲ್ಲ ಸೇರಿ ಇಂಡಿಯಾಒಕ್ಕೂಟ ಮಾಡಿದ್ದಾರೆ
ದೆಹಲಿಯಲ್ಲಿ ಎಲ್ಲರೂ ಸೇರಿ ಫೋಟೋ ಫೋಸು ಕೊಡುತ್ತಾರೆ
ರಾಹುಲ್ ಗಾಂಧಿ ವಯನಾಡ್‌ಗೆ ಬಂದ್ರೆ ಕಮ್ಯುನಿಸ್ಟ್ ರು ವಿರೋಧಿಸ್ತಾ ಇದಾರೆಹಾಗಾದರೆ ದೆಹಲಿ ಒಕ್ಕೂಟದ ಸಭೆಯಲ್ಲಿ ಏನಾಯಿತು ಎಂದರು. ರಾಹುಲ್ ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಅಂತವರ ಬಗ್ಗೆ ಮಾತನಾಡುತ್ತಿರಾ? ನಿಮ್ಮ ಯೋಗ್ಯತೆಗೆ 40 ಸ್ಥಾನ ಗೆಲ್ಲರಿ ನೋಡೋಣ ಅಂತಾ ಮಮತಾ ಬ್ಯಾನರ್ಜಿಯೇ ಕೇಳಿದ್ದಾರೆ
ಅಣ್ಣಾ ಹಜಾರೆ ಗಾಂಧಿ ವಾದಿ, ಮದ್ಯದ ವಿರೋಧಿ ಆದರೆ ಅವರ ಅನುಯಾಯಿ ಮದ್ಯ ಜಾಸ್ತಿ ಮಾರಲು ಹೋಗಿ ಜೈಲು ಸೇರಿದ್ದಾರೆ
ಅರವಿಂದ ಕೇಜ್ರಿವಾಲ್ ಪಂಜಾಬದಲ್ಲಿ ನಿಮ್ಮ ಜೊತೆ ಬರೊಲ್ಲ ಎಂದಿದ್ದಾರೆ ರಾಜ್ಯದಲ್ಲಿ ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ತಾಳಮೇಳವೇ ಇಲ್ಲ
ತಾಳ್ಯಾಕ ತಂತ್ಯಾಕ್ ಹೆಜ್ಜೆ ಯಾಕ್ ಗೆಜ್ಜಿ ಯಾಕ್ ಕುಣಿಯೋಣು ಬಾರಾ ಅಂತಾ ಬೇಂದ್ರೆಯವರು ಹಾಡು ಬರೆದಿದ್ದಾರೆ ಅದರಂತೆ ಇವರು ತಾಳ ತಂತಿ ‌ಇಲ್ಲದೇ ಕುಣಿಯೋಕೆ ಹೊರಟಿದ್ದಾರೆದೇಶ ನಡೆಸುವವರಿಗೆ ಬದ್ಧತೆ ಬೇಕು ನಾವು ಏನು ಮಾಡಿದ್ದೇವೆ ಅಂತಾ ಕಾಂಗ್ರೆಸ್ ಹೇಳುತ್ತದೆಚಿನ್ನವನ್ನು ಒತ್ತೆ ಇಡುವ ಹಂತಕ್ಕೆ ದೇಶವನ್ನು ಕಾಂಗ್ರೆಸ್ ತಂದಿಟ್ಟಿತ್ತುದೇಶದ ಐದು ದುರ್ಬಲ ರಾಷ್ಟ್ರಗಳಲ್ಲಿ ಭಾರತ ಸೇರಿತ್ತು ಆದರೆ ಕಳೆದ ಹತ್ತು ವರ್ಷದಲ್ಲಿ ಆರ್ಥಿಕತೆ ಬೆಳೆಸಿದ್ದೇವ ಜಗತ್ತಿನ ಐದು ಆರ್ಥಿಕ ಸದೃಢ ರಾಷ್ಟ್ರೀಗಳಲ್ಲಿ ಭಾರತ ಸೇರಿದ್ದುಈಗ ಜಗತ್ತಿನಲ್ಲಿ ಭಾರತ 5ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ ಅಂತರ್ ರಾಷ್ಟ್ರೀಯ ಸಂಸ್ಥೆ ಅಧ್ಯಯನ ಮಾಡಿ ಹೇಳಿದ್ದಾರೆ
ಮೋದಿಯ ಮೊದಲ 5 ವರ್ಷ ಕಾಂಗ್ರೆಸ್ ಹೊಲಸನ್ನು ಸ್ವಚ್ಛಗೊಳಿಸಲು ಸಮಯ ಹಿಡಿದಿದ್ದು ಬರುವ 10-15 ವರ್ಷದಲ್ಲಿ ಸಂಪೂರ್ಣ ಬಡತನ ನಿರ್ಮೂಲನೆ ಮಾಡುತ್ತೆವೆ ರಾಮನನ್ನ ಬಹಿಷ್ಕಾರ ಹಾಕಿದ ಪಕ್ಷಕ್ಕೆ ಮತ ಹಾಕ್ತಿರಾ? ಕಳೆದ ಬಾರಿ ಇಲ್ಲಿ ಲೀಡ್ ಕೊಟ್ರಿ ಆದ್ರೆ ಸ್ವಲ್ಪ ಕಡಿಮೆ ಇತ್ತು ಈ ಬಾರಿ ಈ ಜಿಲ್ಲಾ ಪಂಚಾಯತ್ ಇಂದ 3 ಸಾವಿರ ಲೀಡ್ ಕೊಡಿ ಎಂದು ಮನವಿ ಮಾಡಿದ ಜೋಶಿನಾನು ಇದುವರೆಗೂ ಭ್ರಷ್ಟಾಚಾರ ಮಾಡಿಲ್ಲ, ಮಾಡೋದು ಇಲ್ಲಾ ಯಾವಾಗ್ಲೂ ನಾನು ಜೀತದಾಳಾಗಿ ಕೆಲಸ ಮಾಡಿದ್ದೇನೆ ಮುಂದೆನೂ ಸಹ ಮಾಡ್ತೇನೆ ಎಂದರು


Spread the love

About Karnataka Junction

    Check Also

    ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ

    Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …

    Leave a Reply

    error: Content is protected !!