Breaking News

ಬಾಬು ಜಗಜೀವನ ರಾಮ್ ವ್ಯಕ್ತಿತ್ವ ಅನುಸರಣೀಯ

Spread the love

ಬಾಬು ಜಗಜೀವನ ರಾಮ್ ವ್ಯಕ್ತಿತ್ವ ಅನುಸರಣೀಯ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಪಾದನೆ

*-ಹುಬ್ಬಳ್ಳಿ ಗಾಜಿನ ಮನೆ ಅವರಣದಲ್ಲಿ ಬಾಬುಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ*

ಹುಬ್ಬಳ್ಳಿ: ದೇಶದಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಬಾಬು ಜಗಜೀವನ ರಾಮ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಮರಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಇಂದಿರಾ ಗಾಜಿನ ಮನೆ ಆವರಣದಲ್ಲಿನ ಜಗಜೀವನ ರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಾಮರ್ಪಿಸಿ ಮಾತನಾಡಿದರು.

ಭಾರತದ ಉಪ ಪ್ರಧಾನಮಂತ್ರಿ ಆಗಿದ್ದ ಬಾಬು ಜಗಜೀವನ ರಾಮ್ ಅವರ ಜಯಂತಿ ಆಚರಣೆ ಇಂದು ಅರ್ಥಪೂರ್ಣವಾಗಿದೆ. ದೀನ ದಲಿತರ ಮೇಲೆ ಅವರಿಗಿದ್ದ ಪ್ರೀತಿ, ಕಾಳಜಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಜೋಶಿ ಪ್ರತಿಪಾದಿಸಿದರು.

ಹಿಂದುಳಿದ ವರ್ಗಗಳ ಜನರ ಶ್ರೇಯೋಭಿವೃದ್ಧಿಗಾಗಿ ಜಗಜೀವನ ರಾಮ್ ಅವರು ಅವಿರತ ಹೋರಾಟ ನಡೆಸಿದರು. ಅಲ್ಲದೇ, ಹಸಿರು ಕ್ರಾಂತಿಯ ಹರಿಕಾರರಾಗಿ ಮೆರೆದರು. ಇವರ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಸಚಿವ ಜೋಶಿ ಅಭಿಪ್ರಾಯಿಸಿದರು.

ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತದ ಉಪ ಪ್ರಧಾನಿಯಾಗಿ, ಹಿಂದುಳಿದ ವರ್ಗದ ನೇತಾರರಾಗಿ, ಹಸಿರು ಕ್ರಾಂತಿಯ ಹರಿಕಾರರಾಗಿ ಅವರು ನಿರ್ವಹಿಸಿದ ಹೊಣೆಗಾರಿಕೆ, ಜವಾಬ್ದಾರಿ ನಿಜಕ್ಕೂ ಅನುಸರಣೀಯ ಮತ್ತು ಅಜರಾಮರ ಎಂದು ಜೋಶಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಸಮಾಜದ ಪ್ರಮುಖರು ಜೊತೆಗಿದ್ದರು.


Spread the love

About Karnataka Junction

    Check Also

    ವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಡಾ.ವೆಂಕಟೇಶ ರಾಯ್ಕರ್

    Spread the loveವಿದ್ಯಾರ್ಥಿಗಳು ಆಯ್ಕೆ ವಿಷಯ ಗೊಂದಲಕಾರಿಯಾಗಬಾರದು: ಹುಬ್ಬಳ್ಳಿ: ತಾವು ಆಯ್ಕೆ ಮಾಡಿಕೊಳ್ಳುವ ವಿಷಯ ತಮಗೆ ಇಷ್ಟವಾಗಿರಬೇಕು ಅಂದಾಗ ಮಾತ್ರ …

    Leave a Reply

    error: Content is protected !!