100ಕ್ಕೂ ಹೆಚ್ಚು ಯುವಕರು, ಮಹಿಳೆಯರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ

Spread the love

100ಕ್ಕೂ ಹೆಚ್ಚು ಯುವಕರು, ಮಹಿಳೆಯರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಕಮರಿಪೇಟ ಶ್ರೀರಾಮ ಶಾಲಾ ಆವರಣದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡರು ಪ್ರಕಾಶ್ ಬುರಬುರೆ ಮತ್ತು ಮಾಜಿ ಪಾಲಿಕೆ ಸದಸ್ಯ ಅಜ್ಜಪ್ಪ ಬೆಂಡಿಗೇರಿ ರವರು ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ಮತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, 100ಕ್ಕೂ ಹೆಚ್ಚು ಯುವಕರು ಹಾಗೂ ಮಹಿಳೆಯರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಕೇಂದ್ರ ಸಚಿವರು ಪ್ರಲ್ಹಾದ ಜೋಶಿ ರವರು ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕ ರಾಜ್ಯದ ಜನತೆ ಕೂಡ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್‌ನಿಂದ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವನ್ನು ಅಭಿವೃದ್ಧಿಪಥದಲ್ಲಿದೆ. ಹಲವು ಕಾಂಗ್ರೆಸ್ ಸದಸ್ಯರ ಪಕ್ಷಾಂತರದಿಂದಾಗಿ ಪೂರ್ವ ಕ್ಷೇತ್ರ ಕಾಂಗ್ರೆಸ್ ಬಹುತೇಕ ಅಸ್ತಿತ್ವ ಕಳೆದುಕೊಂಡಿದೆ. ಬಿಜೆಪಿಗೆ ಬಂದಿರುವ ಅಜ್ಜಪ್ಪ ಬೆಂಡಿಗೇರಿ ಅವರು ಘರ್ ವಾಪ್ಸಿ ಎಂದು ಬರಮಾಡಿಕೊಂಡರು ಬಿಜೆಪಿಗೆ ಸೇರ್ಪಡೆಗೊಂಡ ಎಲ್ಲರಿಗೂ ಸ್ವಾಗತಸಿದರು.

ಹು-ಧಾ ಸೆಂಟ್ರಲ್ ಶಾಸಕ ಮಹೇಶ ಟೆಂಗಿಕಾಯಿ ಮಾತನಾಡಿ ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿ ಪಾಲಿಗೆ ಅತಿ ದೊಡ್ಡ ರಾಜ್ಯವಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಕ್ಷೇತ್ರದ ಜನತೆ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ನಂಬಿದ್ದಾರೆ. IIT, IIIT ಹೀಗೆ ಹಲವಾರು ಜಿಲ್ಲಾಧ್ಯಂತ ಜನಪರ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಧಾರವಾಡ ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು, ದೇಶದ ಭದ್ರತೆಯ ಹಿತದೃಷ್ಟಿಯಿಂದ ಮೋದಿಯವರನ್ನು ಮರಳಿ ಪ್ರಧಾನಿಯನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಪ್ರಕಾಶ್ ಬುರಬುರೆ ಮಾತನಾಡಿ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆ
ಯಾಗಿದ್ದೇವೆ. ಕೇಂದ್ರ ಸಚಿವರು ಪ್ರಲ್ಹಾದ ಜೋಶಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಿಜೆಪಿಗೆ ಸೇರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುತ್ತೇನೆಂದು ಪ್ರಮಾಣ ಮಾಡಿದರು.

ಈ ಸಂದರ್ಭದಲ್ಲಿ ಹು-ಧಾ ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಕ್ರಾಂತಿಕಿರಣ, ರಾಜ್ಯ ಫಲಾನುಭವಿ ಪ್ರಕೋಷ್ಠದ ಸದಸ್ಯ ಸಂತೋಷ ಅರಕೇರಿ, ಪಕ್ಷದ ಹಿರಿಯ ಮುಖಂಡ ರಂಗಾ ಬದ್ದಿ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ್ ಅಮ್ಮನಬಾವಿ, ರಾಜು ಜರತರಘರ, ಮೋತಿಲಾಲಾ ಕಬಾಡೆ, ವಿಠ್ಠಲ ಲದವಾ, ಭಾಸ್ಕರ್ ಜಿತೂರಿ, ರಾಜು ಕೊರ್ಯಾಣಮಠ, ಹು-ಧಾ ಪೂರ್ವ ಮಾಧ್ಯಮ ಸಂಚಾಲಕ ಲಕ್ಷ್ಮೀಕಾಂತ ಘೋಡಕೆ, ಮಿಥುನ ಚವ್ಹಾಣ, ಪ್ರವೀಣ ಪವಾರ ಇನ್ನೂ ಅನೇಕರು ಕಾರ್ಯಕರ್ತರು ಇದ್ದರು.


Spread the love

Leave a Reply

error: Content is protected !!