ಏ. 1ರಿಂದ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್

Spread the love

ಏ. 1ರಿಂದ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್

ಹುಬ್ಬಳ್ಳಿ: ಮುಂಬೈನ ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆ (ಎಐಸಿಎಪಿಸಿ) ಹಾಗೂ ಹುಬ್ಬಳ್ಳಿಯ ಕರ್ನಾಟಕ ಜಿಮ್ಹಾನಾ ಅಸೋಸಿಯೇಷನ್‌ ಆಶ್ರಯದಲ್ಲಿ ಅಜಿತ್ ವಾಡೇಕರ್ ಅವರ ಸ್ಮರಣಾರ್ಥ ಏಪ್ರಿಲ್ 1ರಿಂದ 3ರ ವರೆಗೆ ನಗರದಲ್ಲಿ ರಾಷ್ಟ್ರಮಟ್ಟದ ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆಯ ಪ್ರಧಾನ ಕಾರ್ಯದಶಿರ್‌ ಶಿವಾನಂದ ಗುಂಜಾಳ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಾವಂತ ಅಂಗವಿಕಲ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 1998ರಿಂದ ನಗರದಲ್ಲಿ ಇಂತಹ ಪಂದ್ಯಾವಳಿ ಆಯೋಜಿಸುತ್ತ ಬರಲಾಗಿದೆ. ಈ ಬಾರಿ ರಾಜನಗರ ಕೆಎಸ್ಸಿಎ ಕ್ರೀಡಾಂಗಣ, ಕರ್ನಾಟಕ ಜಿಮ್ಹಾನ್ ಮೈದಾನ ಹಾಗೂ ರೈಲ್ವೆ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ ಎಂದರು.

ಈಗಾಗಲೇ ಎಂಟು ಆವೃತ್ತಿಗಳನ್ನು ಪೂರೈಸಲಾಗಿದ್ದು, ಇದು 9ನೇ ಆವೃತ್ತಿಯಾಗಿದೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳಿಂದ 8 ತಂಡಗಳು ಭಾಗವಹಿಸುತ್ತಿವೆ. ಅಂಗವಿಕಲರ ಕ್ರಿಕೆಟ್ ತಂಡ ಪ್ರತಿನಿಧಿಸಿದ ಅನೀಶ್ ರಾಜನ್, ಜಿತೇಂದ್ರ ವಿಎನ್, ನರೇಂದ್ರ ಮಂಗೋರೆ, ರಮೇಶ ನಾಯ್ಡು, ಅನ್ಯುಲ್, ಕುನಾಲ್ ಫನಾಸೆ, ಸುಗುನೇಶ್ ಮತ್ತು ಅವನೀಶ ತಿವಾರಿ ಸೇರಿ 130 ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಏ. 1ರಂದು ಬೆಳಗ್ಗೆ 8.30ಕ್ಕೆ ರಾಜನಗರ ಮೈದಾನದಲ್ಲಿ ಪಂದ್ಯಾವಳಿ ಉದ್ಘಾಟನೆ ಸಮಾರಂಭ ನಡೆಯಲಿದೆ. ಅತಿಥಿಗಳಾಗಿ ಮಾಜಿ ಕ್ರಿಕೆಟಿಗ ಮತ್ತು ಎಐಸಿಎಪಿಸಿ ಅಧ್ಯಕ್ಷ ಕರ್ಸನ್ ಘಾವರಿ, ಕರ್ನಾಟಕ ಜಿಮ್ಹಾನ್ ಚೇರ್ಮನ್ ನಂದಕುಮಾರ, ಕಾರ್ಯದರ್ಶಿ ವೀರಣ್ಣ ಸವಡಿ, ವಿನೋದ ದೇಶಪಾಂಡೆ, ಪ್ರಸಾದ್ ದೇಸಾಯಿ, ದೀಪಕ್ ಜಾದವ್, ಬ್ರಿಜೇಶ ಸುಣಕರ ಇತರರು ಪಾಲ್ಗೊಳ್ಳುವರು.

ಏ. 3ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ವಾಡೇಕರ ಕುಟುಂಬದವರು ಭಾಗವಹಿಸುವರು.

ವಿಜೇತ ತಂಡಗಳಿಗೆ ಮೊದಲ ಬಹುಮಾನ 2.5 ಲಕ್ಷ ನಗದು, ಟ್ರೋಫಿ, ರನ್ನರ್ ಅಪ್ಲೆ 1.5 ಲಕ್ಷ ನಗದು ಟ್ರೋಫಿ ನೀಡಲಾಗುವುದು. ಕ್ಲಿಕ್ ಕಿಂಗ್ಲಮ್ ಅವರ ನೆರವಿನೊಂದಿಗೆ ಉತ್ತಮ ಬ್ಯಾಟ್ಸನ್, ಬೌಲರ್, ಆಂಡರ್, ಸರಣಿ ಶ್ರೇಷ್ಠ ಬಹುಮಾನ ನೀಡಲಾಗುವುದು. ಉತ್ತಮ ಪ್ರದರ್ಶನ ಆಧಾರದ ಮೇಲೆ ಭಾರತ ತಂಡಕ್ಕೆ ಆಯ್ಕೆ ಕೂಡ ನಡೆಯಲಿದೆ ಎಂದರು.

ಮಾಜಿ ಕ್ರಿಕೇಟರ್ ಕರ್ಸನ್ ಘಾವರಿ, ಪ್ರಸಾದ ದೇಸಾಯಿ, ವಿನೋದ ಬತ್ತದ, ಶೀತಲ್ ಗೋಟಡಕಿ ಗೋಷ್ಠಿಯಲ್ಲಿದ್ದರು.
ತಂಡಗಳು ಇಂತಿವೆ: ಸೌಥ್ ಸ್ಮಾಷರ್ಸ್, ಸೆಂಟ್ರಲ್ ಕಮಾಂಡೋಸ್, ನಾರ್ದನ್ ಫ್ರಾಂಟಿಯರ್ಸ್, ವೆಸ್ಟರ್ನ್ ರೇಂರ್ಜಸ್, ಈಸ್ಟರ್ನ್ ಈಗಲ್ಸ್, ಅಜಿತ ವಾಡೇಕರ್ ವಾರಿಯರ್ಸ್, ಸಿಎಸ್ ಇನ್ಫೋಕಾಮ್ ಚಾಲೆಂರ್ಜಸ್ ಹಾಗೂ ಬೋರ್ಡ್ ಪ್ರೆಸಿಡೆಂಟ್ ಬ್ಲಾಸ್ಟರ್ಸ್.


Spread the love

Leave a Reply

error: Content is protected !!