ಮತ್ತೇ ಹೇಳಿಕೆ ಬದಲಿಸಿದ ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ

Spread the love

ಧಾರವಾಡ: ಮೂರುಸಾವಿರ ಮಠದಲ್ಲಿ ಮಾ. ೨೭ರಂದು ನಡೆದಿದ್ದ ಮಠಾಧೀಶರ ಚಿಂತನ- ಮಂಥನ ಸಭೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ನಗರದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಗೊಂದಲ ಮೂಡಿಸಿದೆ.
ಸಭೆಯ ಮಾರನೇ ದಿನ ಅಂದರೆ ಮಾ. ೨೮ರಂದು ಹೇಳಿಕೆ ನೀಡಿದ್ದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಶ್ರೀಗಳು ದಿಂಗಾಲೇಶ್ವರ ಸ್ವಾಮೀಜಿಗಳು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ವಿರುದ್ಧ ನೀಡಿರುವ ಹೇಳಿಕೆಗೂ ತಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.
ರಾಜಕೀಯ ಹೇಳಿಕೆಗೂ ಮಠಕ್ಕೂ ಸಂಬ೦ಧವಿಲ್ಲ. ದಿಂಗಾಲೇಶ್ವರ ಶ್ರೀಗಳ ಹೇಳಿಕೆ ವೈಯಕ್ತಿಕ ವಿಚಾರ ಎಂದಿದ್ದ ಡಾ. ಮಲ್ಲಿಕಾರ್ಜುನ ಶ್ರೀಗಳು ಶುಕ್ರವಾರ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ. `2 ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಮಠಾಧೀಶರ ಚಿಂತನ- ಮಂಥನ ಸಭೆಯಲ್ಲಿ ನಾವು ಭಾಗವಹಿಸಿದ್ದೆವು. ಆ ಸಭೆಯಲ್ಲಿ ಮಠಾSÃಶರು ಕೈಗೊಂಡಿದ್ದ ನಿರ್ಣಯಕ್ಕೆ ಅನುಮೋದನೆ ನೀಡಿ ಬಂದಿದ್ದೆವು. ಮಾ. ೨೮ ರಂದು ಕೆಲವರು ಮಠಕ್ಕೆ ಬಂದು ನಮ್ಮ ಮೇಲೆ ಒತ್ತಡ ಹಾಕಿದರು. ನನ್ನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ನಾನು ಹೆಚ್ಚಿಗೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರೇ ನನ್ನ ಮೇಲೆ ಒತ್ತಡ ಹಾಕಿ ಅವರೇ ಪತ್ರವನ್ನು ಬರೆದುಕೊಂಡು ಬಂದು ಸಹಿ ಮಾಡಿಸಿ ನನ್ನಿಂದ ಓದಿಸಿದ್ದಾರೆ. ಒತ್ತಾಯಪೂರ್ವಕವಾಗಿ ನೀಡಿದ್ದ ಹೇಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ನಾವು ಹಿಂಪಡೆಯುತ್ತೇವೆ’ ಎಂದು ಶ್ರೀಗಳು ಹೇಳಿದ್ದಾರೆ.


Spread the love

Leave a Reply

error: Content is protected !!