ಕಾಂಗ್ರೆಸ್‌ನವರು ಸಂವಿಧಾನಕ್ಕೆ ಯಾವತ್ತೂ ಗೌರವ ಕೊಟ್ಟಿಲ್ಲ

Spread the love

ಕಾಂಗ್ರೆಸ್‌ನವರು ಸಂವಿಧಾನಕ್ಕೆ ಯಾವತ್ತೂ ಗೌರವ ಕೊಟ್ಟಿಲ್ಲ

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಮುಖ್ಯಮಂತ್ರಿ
ಸಿದ್ದರಾಮಯ್ಯಪುತ್ರ ಯತೀಂದ್ರ ಅವರು ಅವಾಚ್ಯವಾಗಿ, ಅಸಭ್ಯವಾಗಿ
ನಿಂದಿಸಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು
ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಕಿಡಿಯಾದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭಯವದಲ್ಲಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ ಸುಳ್ಳು ಕೇಸ್ ಹಾಕಿತ್ತು. ಎಲ್ಲವೂ ತಿರಸ್ಕೃತಗೊಂಡಿವೆ ಹಾಗೂ ದೋಷಮುಕ್ತರಾಗಿದ್ದಾರೆ ಎಂದರು. ಯುವ ಕಾಂಗ್ರೆಸ್ ನ ನಲಪಾಡ್‌ನಂಥವರನ ಪಕ್ಷದಲ್ಲಿ ಟ್ಟುಕೊಂಡಿರುವ ಇವರು, ಗುಂಡಾಗರ್ದಿ ಬಗ್ಗೆ ಮಾತನಾಡುತ್ತಿದ್ದಾರೆ. ದೇಶ ಕಂಡ ಅತ್ಯಂತ ದಕ್ಷ ಗೃಹ ಮಂತ್ರಿ ಅಮಿತ್‌ಶಾ. ಅವರ ಬಗೆಗೆ ಮಾತನಾಡಿರೋದು ಅವರ ನಾಲಿಗೆಯ ಸಂಸ್ಕೃತಿ ತೋರಿಸುತ್ತದೆ. ಕಾಂಗ್ರೆಸ್‌ನವರು ಸಂವಿಧಾನಕ್ಕೆ ಯಾವತ್ತೂ ಗೌರವ ಕೊಟ್ಟಿಲ್ಲ. ಸಂವಿಧಾನದ ಕತ್ತು ಹಿಸುಕಿದರು. ನಾವು ಸಂವಿಧಾನದ ದಿನಾಚರಣೆ ಜಾರಿಗೆ ತಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಸಂವಿಧಾನ ಬದಲಾವಣೆಯ ಅಪಪ್ರಚಾರ ಮಾಡುತ್ತಿದ್ದಾರೆ. ಕೆಟ್ಟ ಭಾಷೆ ಬಳಸುವುದು ಸೋಲಿನ ಹತಾಶೆಯ ಪ್ರತೀಕ ಎಂದು ದೂರಿದರು.


Spread the love

Leave a Reply

error: Content is protected !!