ಕೇಂದ್ರ ಸಚಿವರ ಬದಲಾವಣೆ ಮಾಡಲು ಚರ್ಚೆ ಆಗಿದೆ- ಶ್ರೀ ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಸೇರಿದಂತೆ ಅಷ್ಟೇ ಅಲ್ಲಾ ದಕ್ಷಿಣ ಭಾರತದಲ್ಲಿ ವಿವಿಧ ಚುನಾವಣೆಯಲ್ಲಿ ಮಠಾಧೀಶರರು ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಇನ್ನು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರನ್ನ ಬದಲಾವಣೆ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಪ್ರಸ್ತುತ ರಾಜಕೀಯ ವಿದ್ಯಮಾನ, ರಾಜ್ಯದ ಅಭಿವೃದ್ಧಿ ಹಾಗೂ ಇನ್ನಿತರ ಕುರಿತು ಚರ್ಚೆ ನಡೆಸಲಾಯಿತು.
ಚಿಂತನೆ ಮಂಥನ ಸಭೆಯಲ್ಲಿ ಅವರು ಮಾತನಾಡಿದರು,
ಧಾರವಾಡ ಲೋಕಸಭಾ ಚುನಾವಣಗೆ ತಮ್ಮನ್ನ ಕಣಕ್ಕೆ ಇಳಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ .ನಾಡಿನ ಅನೇಕ ಮಠಗಳ ಮಠಾಧೀಶರರು ಚಿಂಥನ ಮಂಥನ ಸಭೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
ಇನ್ನು ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಧಾರವಾಡ ಲೋಕಸಭಾ ಚುನಾವಣೆಗೆ ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಲಾಯಿತು. ಆದ್ದರಿಂದ ಇದು ಪ್ರತಿಯೊಂದು ರೀತಿಯಲ್ಲಿ ಅನ್ಯಾಯ ಆಗಿದೆ ಎಂದರು.
ನಾನು ಸಹ ಕೇಂದ್ರ ಸಚಿವರಿಗೆ ದೂರವಾಣಿ ಕರೆ ಈ ಹಿಂದೆ ಮಾಡಿದ್ದ ಅವರು ತಮ್ಮ ಜೊತೆಗೆ ಸರಿಯಾಗಿ ಮಾತನಾಡಲಿಲ್ಲ.ತಾವು ಕೆಲಸ ತೊಗೊದು ಕೊಳ್ಳಲು ಲಿಂಗಾಯತ ನಾಯಕರು ಇಲ್ವಾ ಅಂದರು.ಆದ್ದರಿಂದ ನಾವು ಸಹ ಈಗ ಅವರ ಬದಲಾವಣೆ ಮಾಡಿದ್ದೇವೆ ಎಂದರು
ಉತ್ತರ ಕನ್ನಡ, ಹಾವೇರಿ, ಚಿತ್ರದುರ್ಗ,ಮುರುಘಾಮಠ,ಬಾಲ್ಕಿ, ಬೀದರ, ರಾಯಚೂರು, ಬಾಗಲಕೋಟೆ, ವಿಜಯಪುರ
ಅನೇಕ ಕಡೆಗಳಿಂದ ಆಗಮಿಸಿದ ಮಠಾಧೀಶರರು ಆಗಮಿಸಿದ್ದರು. ಎರಡು ಗಂಟೆಗಳ ಕಾಲ
ಸಲಹೆ ಸೂಚನೆ ಸಭೆಯಲ್ಲಿ ಭಾಗವಹಿಸಿದ್ದವರು ನೀಡಿದರು.