ಧಾರವಾಡ ಜಿಲ್ಲಾಧ್ಯಂತ ಹೋಳಿ ಹಬ್ಬದ ರಂಗು: ಹಾಡಿಗೆ ಸ್ಟೇಪ್ ಹಾಕಿದ ಪ್ರಲ್ಹಾದ್ ಜೋಶಿ

Spread the love

ಧಾರವಾಡ ಜಿಲ್ಲಾಧ್ಯಂತ ಹೋಳಿ ಹಬ್ಬದ ರಂಗು: ಹಾಡಿಗೆ ಸ್ಟೇಪ್ ಹಾಕಿದ ಪ್ರಲ್ಹಾದ್ ಜೋಶಿ

ಧಾರವಾಡ ಹುಬ್ಬಳ್ಳಿ ಭಾಗಶಃ ಹಾಗೂ ಧಾರವಾಡ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ಉಂಟು ಮಾಡಿದ್ದು, ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಜನರು ಭಕ್ತಿಯ ಅಲೆಯಲ್ಲಿ ಕುಣಿದು ಕುಪ್ಪಳಿಸಿದರು.
ಧಾರವಾಡನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭಾನುವಾರ ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಧಾರವಾಡದ ಸಪ್ತಾಪುರ ಮುಂತಾದ ಕಡೆಗಳಲ್ಲಿ ಯುವಕ ಯುವತಿಯರು ಪರಸ್ಪರ ಬಣ್ಣ ಎರಚಿ ಕುಣಿಸು ಕುಪ್ಪಳಸಿದರು. ಇನ್ನು
ಧಾರವಾಡ ಕೆಸಿಡಿ ಸರ್ಕಲ್ ನಲ್ಲಿ ಹಾಕಿದ ಬೃಹತ್ ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸ್ಟೇಜ್ ಮೆಲೆ ಸ್ಟೆಪ್ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಜೋಶಿ ಡ‌್ಯಾನ್ಸ್ ನೋಡಿ ಪಿದಾ ಆದ ಯುವಕರು ಕೇಕ್ ಹಾಕಿ ಹುರುದಿಂಬಿಸಿದರು. ಇದಕ್ಕೆ
ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಸಹ ಬೊಬ್ಬೆ ಹಾಕುತ್ತ ಹಲಿಗೆ ಬಾರಿಸುವ ಮೂಲಕ ಹಬ್ಬಕ್ಕೆ ಮೆರಗು ತಂದರು, ಮಹಿಳೆಯರು ಕಾಮಣ್ಣ ಮೂರ್ತಿಗೆ ಗಾರ್ಗಿ, ಹೋಳಿಗೆ, ತುಪ್ಪದ ನೈವೇದ್ಯ ಹಿಡಿದು ಭಕ್ತಿ ಭಾವ ಮೆರೆದರು.
ಮನ್ಮಥ ಬಂದ ಬಿದಿರಿನಿಂದ ತಯಾರಿಸಿದ ಮನ್ಮಥನ ಮೂರ್ತಿಗೆ ಸುಂದರವಾದ ಮುಖವಾಡ ಹಾಕುವುದು ರೂಢಿ. ಆದರೆ, ಕೆಲವೆಡೆ ಮನ್ಮಥನ ಮೂರ್ತಿಗೆ ಸುಣ್ಣ ಬಳಿದ ಮಣ್ಣಿನ ಮಡಿಕೆಗೆ ಮುಖದ ಆಕಾರ ನೀಡಿ ದೇವರೆಂದು ಪೂಜಿಸಿದರು. ಇದಕ್ಕೆ ಪಾರಂಪರಿಕ ಹಿನ್ನೆಲೆಯೂ ಇದೆ. ಕಾಮಣ್ಣನ ದಹನದ ವೇಳೆ ಮನ್ಮಥನ ಮುಖ ಯಾವ ದಿಕ್ಕಿನತ್ತ ಬೀಳುವುದೋ ಅತ್ತ ಮಳೆ-ಬೆಳೆಗೆ ಕೊರತೆ ಇಲ್ಲ ಎಂಬ ನಂಬಿಕೆ ಇದ್ದಿದ್ದರಿಂದ, ರೈತರಂತೂ ಈ ಹಬ್ಬವನ್ನು ಸಂಭ್ರಮದ ಜತೆಗೆ ಕೌತಕವಾಗಿ ಆಚರಿಸಿದರು.
ಗ್ರಾಮೀಣ ಪ್ರದೇಶದಲ್ಲೂ ಸಂಭ್ರಮ ಮುಗಿಲು ಮುಟ್ಟಿತ್ತು. ಧಾರವಾಡದ ಕಾಮನಕಟ್ಟೆ, ಭೂಸಪ್ಪನ ಚೌಕ್, ರವಿವಾರ ಪೇಟೆ, ಹೊಸಯಲ್ಲಾಪುರ ವೃತ್ತ, ಸಪ್ತಾಪೂರ ಬಾವಿ, ಲೈನ್ ಬಜಾರ, ಶ್ರೀನಗರ ವೃತ್ತ, ಹಾಗೂ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ ತಾಲೂಕು ಕೇಂದ್ರಗಳಲ್ಲಿ ಹೋಳಿ ಹಬ್ಬ ಸಂಭ್ರಮದಿಂದ ನಡೆಯಿತು. ಅಣ್ಣಿಗೇರಿ, ಉಪ್ಪಿನ ಬೆಟಗೇರಿ, ಯಾದವಾಡ, ಅದರಗುಂಚಿ, ಹೆಬಸೂರು, ಕರಡಿಗುಡ್ಡ, ಗರಗ, ನೂಲ್ವಿ, ಶಿರಗುಪ್ಪಿ, ಕರಡಿಕೊಪ್ಪ, ಅಂಚಟಗೇರಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ವಿಶಿಷ್ಟವಾಗಿತ್ತು.
ಜಿಲ್ಲೆಯ ಬಹುತೇಕ ಸಾರ್ವಜನಿಕ ಕಾಮಣ್ಣ ಮೂರ್ತಿಗಳ ಎದುರು ಹೋಳಿ ಹುಣ್ಣಿಮೆಗೆ ಸಂಬಂಧಿಸಿದ ಹಾಡುಗಳ ಸವಾಲ್- ಜವಾಬ್ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ರಾತ್ರಿ ಹೊತ್ತು ಮೂರ್ತಿ ಪ್ರತಿಷ್ಠಾಪನಾ ಸಮಿತಿಗಳು ವಿಶೇಷ ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದ್ದವು. ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಕಾಮಣ್ಣ ಮೂರ್ತಿಗೆ ಭಕ್ತಿನಮನ ಸಲ್ಲಿಸಿದರು.


Spread the love

Leave a Reply

error: Content is protected !!