ಅಭಿವೃದ್ಧಿ ಮೂಲಕ ಉತ್ತರ ಕೊಡಲಾಗುವುದು- ಬೊಮ್ಮಾಯಿ
ಹುಬ್ಬಳ್ಳಿ: ಇನ್ನಷ್ಟು ದಿನ ತಡಿಯಿರಿ ಅಭಿವೃದ್ಧಿ ಮೂಲಕ ಉತ್ತರ ಕೊಡಲಾಗುವುದು ಎಂದು
ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಬಂಡಾಯ ಇಲ್ಲ ಇದ್ದ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವುದು
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಮುಂದಿನ ದಿನಗಳಲ್ಲಿ ಸ್ಟಾರ್ ಪ್ರಚಾರಕರು ವಿವಿಧ ಕ್ಷೇತ್ರಗಳಲ್ಲಿ ಬರುತ್ತಾರೆ ಯಾರು ಎಲ್ಲಿ ಬರುತ್ತಾರೆ ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಆದ ಅನುದಾನ ವಿಷಯದಲ್ಲಿ ಎಷ್ಟು ಅನ್ಯಾಯ ಆಗಿದೆ ಅಂತಾ ಗೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಾ ಸುಪ್ರೀಂ ಕೋರ್ಟ್ ಹೋಗಿದ್ದು ಗೊತ್ತು ಎಂದರು. ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ನಿರ್ವಾಹಣಾ ಅಡಿ(ಎನ್ ಡಿಆರ್ ಎಫ್) ಅನ್ವಯ ಎಷ್ಟು ಕೊಡಲಾಗಿದೆ ಅಂತಾ ಗೊತ್ತು ಇದು ಬಹಿರಂಗ ಚರ್ಚೆಗೆ ಸಹ ಸಿದ್ಧ ಎಂದರು.
ಭ್ರಷ್ಟಾಚಾರ ಆರೋಪ ಹೊತ್ತವರನ್ನ ವಾಸಿಂಗ್ ಪೌಡರ್ ಹಾಕಿ ತೊಳದರೆ ಭ್ರಷ್ಟಾಚಾರ ನಿರ್ಮಲನೆ ಆಗುತ್ತದೆಯೇ ಅಥವಾ ಭಾರತೀಯ ಜನತಾ ಪಕ್ಷ ಸ್ವಚ್ಛ ಆಗುತ್ತದೆಯೇ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಏನೆಲ್ಲ ಆಗಿದೆ ಗೊತ್ತು ಎಂದರು.